HEALTH TIPS

ಭಾರತವೀಗ' '4ಡಿ' ಗಳ ವಿಶಿಷ್ಟ ಸಂಯೋಜನೆಯಾಗಿದೆ: ಬ್ಲೂಮ್‍ಬರ್ಗ್ ಶೃಂಗದಲ್ಲಿ ಪ್ರಧಾನಿ ಮೋದಿ

     
     ನ್ಯೂಯಾರ್ಕ್: ಹೂಡಿಕೆದಾರರಿಗೆ ಭಾರತವೇಕೆ ವಿಶ್ವಾಸಾರ್ಹವೆನ್ನಲು ಈ ನಾಲ್ಕು ಅಂಶಗಳು ಉದಾಹರಣೆಯಾಗಿದೆ-, ಇವುಗಳನ್ನು ನಾಲ್ಕು "ಡಿ" ಗಳೆಂದು ಕರೆಯಬಹುದು ಅದುವೇ ಡೆಮೋಕ್ರಸಿ, ಡೆಮೋಗ್ರಫಿ, ಡಿಮ್ಯಾಂಡ್ ಹಾಗೂ ಡಿಸೀಸ್ ವ್ ನೆಸ್ (ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಹಾಗೂ ನಿರ್ಣಾಯಕತ್ವ) ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
    ಪಿಎಂ ನರೇಂದ್ರ ಮೋದಿ ಅವರು ಬ್ಲೂಮ್‍ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ನಿನ್ನೆ ಮುಖ್ಯ ಭಾಷಣ ಮಾಡುತ್ತಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
   
"ಗ್ಲೋಬಲ್ ಬಿಸಿನೆಸ್ ಫೋರಂ ನನಗೆ ಭಾರತದ ಅವಕಾಶಗಳು, ಸಾಧ್ಯತೆಗಳು, ಬೆಳವಣಿಗೆಯ ಕುರಿತಂತೆ ನನಗೆ ಜಾಗತಿಕ ಮಟ್ಟದಲ್ಲಿ ವಿವರಿಸಲು ಅವಕಾಶ ಕಲ್ಪಿಸಿದೆ, ನ್ಯೂಯಾರ್ಕ್ ನಗರ ಜಾಗತಿಕ ವ್ಯವಹಾರದ ನರವ್ಯವಸ್ಥೆಯ ಕೇಂದ್ರವಾಗಿದೆ" ಎಂದು ಮೋದಿ ಹೇಳಿದ್ದಾರೆ.
    ಮೋದಿಯವರ ಭಾಷಣದ ಪ್ರಮುಖಾಂಶಗಳು ಹೀಗಿದೆ-
   ಮುಂದಿನ ವರ್ಷಗಳಲ್ಲಿ, ನಾವು ಭಾರತದ ಆಧುನಿಕ ಮೂಲಸೌಕರ್ಯಗಳಿಗಾಗಿ ಸುಮಾರು 1.3 ಟ್ರಿಲಿಯನ್ ಡಾಲರ್ ಗಳನ್ನು  ಖರ್ಚು ಮಾಡಲಿದ್ದೇವೆ. ಅಲ್ಲದೆ ದೇಶದ ಸಾಮಾಜಿಕ ಮೂಲಸೌಕರ್ಯಕ್ಕಾಗಿ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.
   ನಾವು ಇತ್ತೀಚೆಗೆ ಭಾರತದಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿದ್ದೇವೆ ಮತ್ತು ನಾನು ಭೇಟಿಯಾದ ಎಲ್ಲ ಜಾಗತಿಕ ನಾಯಕರು ಇದನ್ನು ಮೆಚ್ಚಿದ್ದಾರೆ.
   ಇಂದು ಭಾರತದಲ್ಲಿ ನೀವು ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರದ ಕೆಲಸಗಳನ್ನು ಮುಂದಿಟ್ಟು ಜನತೆಯಯಿಂದ ಮನಗೆದ್ದ ಸರ್ಕಾರವನ್ನು ನೋಡುತ್ತಿರುವಿರಿ. ನಮ್ಮ ಕೆಲಸಗಳನ್ನು ಮೆಚ್ಚಿರುವ ಸಾರ್ವಜನಿಕರು ಮತ್ತೆ ಐದು ವರ್ಷಗಳಿಗೆ ನಮ್ಮನ್ನು ಆಯ್ಕೆ ಂಆಡಿದ್ದಾರೆ.
    ನೀವು ಇತ್ತೀಚಿನ ವ್ಯಾಪಾರ ಪ್ರವೃತ್ತಿ ಹಾಗೂ ವೈಶಿಷ್ಟ್ಯಗಳನ್ನು ಮೆಚ್ಚುವಂತಹ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಖಚಿತವಾಗಿ ಭಾರತಕ್ಕೆ ಆಗಮಿಸಬಹುದು.
     ಇಂದು, ಭಾರತದಲ್ಲಿ ದೇಶದ ವ್ಯವಹಾರಿಕ ವಾತಾವರಣವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸರ್ಕಾರವಿದೆ.ನಮ್ಮ ಜನರು ಬಡತನದಿಂದ ವೇಗವಾಗಿ ಬಿಡುಗಡೆ ಹೊಂದುತ್ತಿದ್ದಾರೆ ಹಾಗೂ ಆರ್ಥಿಕ ಸ್ಥಿರತೆಯ ಏಣಿಯನ್ನು ಹತ್ತಿ ಮೇಲೆ ಮೇಲೆ ಬರುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries