ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನ ಮಂದಿರದ ಕಾರ್ಯಕರ್ತರು ಭಾನುವಾರ ಮಂದಿರದ ಪರಿಸರ ಹಾಗೂ ಮುಂಭಾಗದ ನೀರ್ಚಾಲು ಬದಿಯಡ್ಕ ರಸ್ತೆಯ ಬದಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಬೆಳೆದುನಿಂತು ಸಂಚಾರಕ್ಕೆ ತೊಡಕಾಗುತ್ತಿದ್ದ ಕಾಡು-ಪೊದೆಗಳನ್ನು ಕಡಿದು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲತೆಯನ್ನು ಕಲ್ಪಿಸಿದರು.
ಮಳೆಗಾಲ ಪ್ರಾರಂಭದಲ್ಲಿ ರಸ್ತೆಬದಿಯಲ್ಲಿ ಅನೇಕ ಗಿಡಗಳು ಹುಟ್ಟಿಕೊಂಡಿದ್ದು ವಾಹನ ಚಾಲಕರಿಗೆ ಹಾಗೂ ದಿನನಿತ್ಯ ನಡೆದುಕೊಂಡು ಹೋಗುವ ಶಾಲಾಮಕ್ಕಳಿಗೆ, ಸಾರ್ವಜನಿಕರಿಗೆ ಕಿರಿಕಿರಿಯಾಗಿತ್ತು. ಈ ನಿಟ್ಟಿನಲ್ಲಿ ಬೆಳಿಗ್ಗಿನಿಂದಲೇ ತಂಡದ ಸದಸ್ಯರು ಕಾರ್ಯಪ್ರವೃತ್ತರಾಗಿದ್ದರು. ಚೋಮನಾಯ್ಕ, ಬಾಲಕೃಷ್ಣ ದೊಡ್ಡಮೂಲೆ, ದೀಪು ಮೈಕುರಿ, ಸುರೇಶ, ಸೀತಾರಾಮ ಆಚಾರ್ಯ, ಉದನೇಶ್ವರ, ಶಂಕರ, ರಮೇಶ, ಶಿವಪ್ಪ ನಾಯ್ಕ, ಉದಯಕುಮಾರ ಮೈಕುರಿ, ಕೃಷ್ಣ ನಾಯ್ಕ, ಮಹೇಶ, ರಾಜಗೋಪಾಲ, ಜನಾರ್ಧನ, ವಿಘ್ನೇಶ್ವರ, ಧೀಕ್ಷಿತ್ ಮೊದಲಾದವರು ಪಾಲ್ಗೊಂಡಿದ್ದರು. ಕಾರ್ಯಕರ್ತರ ಶ್ರಮದಾನವು ಊರವರಿಂದ ಶ್ಲಾಘನೆಗೆ ಒಳಗಾಗಿದೆ.


