HEALTH TIPS

ಚಳಿಗಾಲದ ಸಂಸತ್ ಅಧಿವೇಶನ: ರಾಜ್ಯಸಭೆಯ 250ನೇ ಅಧಿವೇಶನದ ವಿಶೇಷ ಸಂದರ್ಭ- ಪ್ರಧಾನಿ

     
     ನವದೆಹಲಿ: ಸಂಸತ್ ನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ  ನಡೆದ  ಸರ್ವಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈ  ಅಧಿವೇಶನವು ರಾಜ್ಯಸಭೆಯ 250 ನೇ ಅಧಿವೇಶನವನ್ನು ಆಚರಿಸುವ ವಿಶೇಷ ಸಂದರ್ಭವಾಗಲಿದೆ ಎಂದು ಹೇಳಿದ್ದಾರೆ.
   ರಾಜ್ಯಸಭೆಯ 250ನೇ ಅಧಿವೇಶನ ಸಂದರ್ಭವನ್ನು ಆಚರಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ಸಭೆಯಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಉಪಸ್ಥಿತರಿದ್ದು, ನಾಳೆಯಿಂದ ಆರಂಭವಾಗುವ ಸಂಸತ್ ಅಧಿವೇಶನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮೇಲ್ಮನೆಯ 250 ನೇ ಅಧಿವೇಶನವು ಭಾರತೀಯ ಸಂಸತ್ ಜೊತೆಗೆ ಭಾರತೀಯ ಸಂವಿಧಾನದ ವಿಶಿಷ್ಟ ಸಾಮಥ್ರ್ಯಗಳನ್ನು ಎತ್ತಿ ಹಿಡಿಯಲು ಒಂದು ಉತ್ತಮ ಅವಕಾಶವನ್ನು ಒದಗಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
     ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 150 ನೇ ಜನ್ಮ ವರ್ಷಾಚರಣೆಯನ್ನೂ ಭಾರತ ಆಚರಿಸುತ್ತಿರುವುದರ ನಡುವೆಯೇ  ರಾಜ್ಯಸಭೆಯ 250ನೇ ಅಧಿವೇಶನ ನಡೆಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರಸ್ತಾಪಿಸಿದ ನಿರ್ದಿಷ್ಟ ವಿಷಯಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ, ಪರಿಸರ ಮತ್ತು ಮಾಲಿನ್ಯ, ಆರ್ಥಿಕತೆ, ಕೃಷಿ ಕ್ಷೇತ್ರ ,ರೈತರು, ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಬಾಕಿ ಉಳಿದಿರುವ ಮಸೂದೆಗಳು ಮತ್ತು  ನೀತಿ ಚೌಕಟ್ಟನ್ನು ಪರಿಹರಿಸಲು ಸರ್ಕಾರ ಎಲ್ಲಾ ಪಕ್ಷಗಳೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು. ಸಂಸತ್ತಿನ  ಹಿಂದಿನ ಅಧಿವೇಶನವನ್ನು ಸುಗಮವಾಗಿ ನಡೆಸಿದ್ದಕ್ಕಾಗಿ ಉಭಯ ಸದನಗಳ ಪೀಠಾಸೀನ ಅಧಿಕಾರಿಗಳನ್ನು ಪ್ರಧಾನಿ ಪ್ರಶಂಸಿಸಿದರು.ಇದು ಸರ್ಕಾರದ ಶಾಸಕಾಂಗದ ಕಾರ್ಯಚಟುವಟಿಕೆಯ ಬಗ್ಗೆ ಜನರಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ನೆರವಾಗಿದೆ ಎಂದು ಹೇಳಿದರು
      ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿ ಡಿಸೆಂಬರ್ 13 ರವರೆಗೆ ಮುಂದುವರಿಯುತ್ತದೆ. ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ದೆಹಲಿಯ 1,728 ಅನಧಿಕೃತ ವಸಾಹತುಗಳನ್ನು ಕ್ರಮಬದ್ಧಗೊಳಿಸುವ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ
    ಆದರೂ, ವಿವಿಧ ವಿಷಯಗಳ ಕುರಿತಂತೆ ವಿಶೇಷವಾಗಿ ಆರ್ಥಿಕ ಸ್ಥಿತಿ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಾಗಿ ವಿರೋಧ ಪಕ್ಷಗಳು ಈಗಾಗಲೇ ಹೇಳಿಕೆ ನೀಡಿವೆ. ಚಳಿಗಾಲದ ಅಧಿವೇಶನದಲ್ಲಿ 20 ದಿನ ಕಾರ್ಯಕಲಾಪಗಳು ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries