ಉಪ್ಪಳ: ತಾಳಿಪಡ್ಪಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್, ನವಜೀವನ ಸೇವಾ ಸಂಘ ಬಾಯಾರು, ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಮುಜುಂಗಾವು ಹಾಗು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.1 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರ ವರೆಗೆ ಬೆರಿಪದವು ವಿದ್ಯಾರಣ್ಯ ಎ.ಎಲ್.ಪಿ. ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.
ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ಜಯಲಕ್ಷ್ಮೀ ಭಟ್ ಕೆ. ಉದ್ಘಾಟಿಸುವರು. ಡಾ.ಆನಂದ ಹಂಡಿ, ಡಾ.ಉನೈಸ ಟಿ. ಉಪಸ್ಥಿತರಿರುವರು. ಮಾ.29 ರಂದು ಮಧ್ಯಾಹ್ನ ಇದೇ ಸ್ಥಳದಲ್ಲಿ ಆಯ್ದ ಅರ್ಹ ರೋಗಿಗಳಿಗೆ ಕನ್ನಡಕಗಳನ್ನು ನೀಡಲಾಗುವುದು.

