HEALTH TIPS

ಪರಸ್ಪರ ಸಹಕಾರ, ಕಾಲಕ್ಕೆ ಅನುಸರಿಸಿದ ಬೆಳೆ ಬೆಳೆಯುವುದರಿಂದ ಕೃಷಿಯಲ್ಲಿ ಕ್ಷೇಮ-ಸ್ವರ್ಗ ಆರ್ಗೇನಿಕ್ ಕ್ಲಸ್ಟರ್ 2020 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ

 
        ಪೆರ್ಲ:ಬರಡು ಭೂಮಿಯನ್ನು ಕೃಷಿ ಸಂಪನ್ನಗೊಳಿಸಲು ಸರಕಾರ ನಾನಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪೆÇ್ರೀತ್ಸಾಹ ನೀಡುತ್ತಿದೆ.ಎಂಡೋಸಲ್ಫಾನ್ ಪೀಡಿತ ಪ್ರದೇಶವನ್ನು ಜೈವಿಕ, ಫಲವತ್ತತೆಯ ಭೂಮಿಯನ್ನಾಗಿ ಪರಿವರ್ತಿಸಲು ಕೃಷಿಕರು ಒಗ್ಗೂಡಿ ಸಾವಯವ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಬೇಕು ಎಂದು ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಹೇಳಿದರು.
       ಕೃಷಿ ಅಭಿವೃದ್ಧಿ, ಕೃಷಿಕರ ಕ್ಷೇಮ ಇಲಾಖೆ ವಿಷರಹಿತ 'ಹಸಿರು ತರಕಾರಿಯತ್ತ ಕೇರಳ- ನಮ್ಮ ಕೃಷಿ ನಮ್ಮ ಆರೋಗ್ಯ' ಜೀವನಿ ಯೋಜನೆಯ ಭಾಗವಾಗಿ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ 6ನೇ ವಾರ್ಡ್ ಸ್ವರ್ಗ ಆರ್ಗೇನಿಕ್ ಕ್ಲಸ್ಟರ್ 2019-20 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
       ಇಂದು ಕೃಷಿಕರ ನಡುವಿನ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ.ಹೃಸ್ವ ಕಾಲದ ಬೆಳೆಗಳ ಧಾರಣೆಯಲ್ಲಿನ ಕುಸಿತ ಕೃಷಿಕರಿಗೆ ನಷ್ಟ ಉಂಟು ಮಾಡುತ್ತಿದೆ.ತರಕಾರಿ ಬೆಳೆ, ದನದ ಗೊಬ್ಬರ, ನಾಟಿ ಮೇವು, ಗಿಡ ಬೀಜಗಳ ಪರಸ್ಪರ ಕೊಡು,  ಕೊಳ್ಳುವಿಕೆ ಮೂಲಕ ಕೃಷಿಕರು ಸಹಕರಿಸಬೇಕು.ಕಾಲಕ್ಕೆ ಅನುಸರಿಸಿದ ಬೆಳೆ ಬೆಳೆಯುವುದರಿಂದ ಉತ್ತಮ ಆದಾಯ ಪಡೆಯಬಹುದು.ಪೆರ್ಲ ಕೃಷಿ ಭವನದಲ್ಲಿ ತರಕಾರಿ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ.ರಾಸಾಯನಿಕ ಉಪಯೋಗಿಸದೆ ಸಾವಯವ ಕೃಷಿ ರೀತಿಯಲ್ಲಿ ನಮ್ಮ ನಿತ್ಯ ಅಗತ್ಯದ ತರಕಾರಿಗಳನ್ನು ನಾವೇ ಬೆಳೆದರೆ ವಿಷರಹಿತ ಆಹಾರವನ್ನು ಸೇವಿಸಬಹುದು.ಅಡಕೆ ತೋಟದಲ್ಲಿ ಹಾಳೆಗಳಲ್ಲಿ ನೀರು ನಿಂತು  ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ಇದೆ.ಹಾಳೆ ಪಾತ್ರೆ ತಯಾರಕರಿಗೆ ಹಾಳೆಗಳನ್ನು ನೀಡುವುದರಿಂದ ಆದಾಯ ಗಳಿಸಬಹುದು. ಪರಿಸರ ಸ್ನೇಹಿ ಉದ್ಯಮಕ್ಕೆ ಪೆÇ್ರೀತ್ಸಾಹ ನೀಡಿದಂತಾಗುವುದು.
ಜನರು ಸಂಘಟಿತರಾಗಿ ರಸ್ತೆ ಬದಿ ಮಾಲಿನ್ಯ ಉಪೇಕ್ಷಿಸುವುದನ್ನು ತಡೆಯಬೇಕು ಎಂದರು.
       ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಉದ್ಘಾಟಿಸಿ ಮಾತನಾಡಿ, ಪೆರ್ಲ ಕೃಷಿ ಭವನ ಅಧಿಕಾರಿಗಳ ನಿರಂತರ ಪೆÇ್ರೀತ್ಸಾಹದ ಫಲವಾಗಿ ಜನರಲ್ಲಿ ಸಾವಯವ ಕೃಷಿ ಬಗ್ಗೆ ಆಸಕ್ತಿ ಮೂಡಿದೆ ಎಂದರು.
      ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ವಾರ್ಡ್ ಸದಸ್ಯೆ ಚಂದ್ರಾವತಿ ಎಂ., ರಾಜ್ಯ ಹಾರ್ಟಿಕಲ್ಚರ್ ಮಿಷನ್ ಸಹಾಯಕ ನಿರ್ದೇಶಕ, ಮಂಜೇಶ್ವರ ಬ್ಲಾಕ್ ನೋಡಲ್ ಅಧಿಕಾರಿ ಉಮೇಶ್ ಮಾತನಾಡಿ, ಕ್ಲಸ್ಟರ್ ಫಲಾನುಭವಿಗಳಿಗೆ  ಉಚಿತವಾಗಿ ವಿತರಿಸಲಾಗುವ ಬಾಳೆ ಕಸಿ, ಹಾಗೂ ಸಂಪುಷ್ಟಿತ ಸಾವಯವ ಗೊಬ್ಬರ ಬಳಸಿ ಉತ್ತಮ ಫಸಲು, ಆದಾತ ಲಭಿಸುವಂತೆ ಹಾರೈಸಿದರು. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜೆ.ಎಚ್.ಐ.ಸಜಿತ್ ಮಾತನಾಡಿದರು. ಕೃಷಿ ಸಹಾಯಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕ್ಲಸ್ಟರ್ ಸದಸ್ಯರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ವಿನೀತ್ ವಿ. ವರ್ಮ ಸ್ವಾಗತಿಸಿ, ಕ್ಲಸ್ಟರ್ ಸಂಚಾಲಕ ರವಿ ವಾಣೀನಗರ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries