ಮುಳ್ಳೇರಿಯ: ನಾಟಕ ಪ್ರದರ್ಶನಗಳು ಕೇವಲ ಮನರಂಜನೆ ನೀಡುವುದು ಮಾತ್ರವಲ್ಲದೇ ಗ್ರಾಮದ ಸೌಹಾರ್ದ, ನೆಲದ ಸಂಸ್ಕøತಿ ಮತ್ತು ಒಗ್ಗಟ್ಟನ್ನು ಪ್ರತಿನಿಸುತ್ತವೆ ಎಂದು ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಹೇಳಿದರು.
ಶಾಲೆಯಲ್ಲಿ ಗುರುವಾರ ಉದ್ಘಾಟಿಸಲಾದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ನಾಟಕ ತರಬೇತಿ 'ಪೆÇರ್ಲು-2020' ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೆ ನಾಟಕ ಹೆಚ್ಚು ಪ್ರಚಲಿತದಲ್ಲಿತ್ತು.ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.ಆದರೆ ಇಂದು ಸಿನೆಮಾ, ದೃಶ್ಯ ಮಾದ್ಯಮ, ಕಿರು ತೆರೆ ಧಾರಾವಾಹಿ, ಆಧುನಿಕ ಮಾಧ್ಯಮಗಳ ನಡುವೆ ತೆರೆ ಮರೆ ಸರಿಯುತ್ತಿದೆ.ನಾಟಕಗಳು ಜಾತ್ರೆ, ಶಾಲಾ ವಾರ್ಷಿಕೋತ್ಸವಗಳಿಗೆ ಮಾತ್ರ ಸೀಮಿತವಾಗುತ್ತಿದೆ.ಅಭಿನಯದ ನೈಜತೆ ಬಿಂಬಿಸುವ ರಂಗ ಭೂಮಿ ಕಲೆಯನ್ನು ಇಂದಿಗೂ ಜೀವಂತವಾಗಿರಿಸಲು ಶ್ರಮಿಸುತ್ತಿರುವ ಗ್ರಾಮೀಣ ಕಲಾವಿದರ ಶ್ರಮ ಅಭಿನಂದನೀಯ ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್.ಮೊಹಮ್ಮದ್ ಉದ್ಘಾಟಿಸಿದರು. ಗ್ರಾ.ಪಂ. ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ಪ್ರಕಾಶ್, ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಮಾತೃ ಮಂಡಳಿ ಅಧ್ಯಕ್ಷೆ ಶಾಂತಾ ಶುಭ ಹಾರೈಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿಬ್ಬಂದಿ ಕಾರ್ಯದರ್ಶಿ ಮೋಹನನ್ ಸ್ವಾಗತಿಸಿ, ಶಿಕ್ಷಕಿ ಸುಪ್ರಿಯಾ ವಂದಿಸಿದರು. ದಾಸಪ್ಪ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಿರ್ಮಲ್ ಕುಮಾರ್ ತರಬೇತಿ ನೀಡಿದರು.ಎಲ್.ಪಿ.ವಿಭಾಗದ ಶಿಕ್ಷಕ ಪ್ರವೀಣ್ ನೇತೃತ್ವ ವಹಿಸಿದರು.ಅಧ್ಯಾಪಕರು ಸಹಕರಿಸಿದರು.


