ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಮಂಗಳವಾರ ಬರೋಬ್ಬರಿ 14,933 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 440215ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಒಂದೇ ದಿನ ಮಹಾಮಾರಿ ವೈರಸ್'ಗೆ 312 ಮಂದಿ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 14933ಕ್ಕೆ ತಲುಪಿದಂತಾಗಿದೆ. ಈ ನಡುವೆ 440215 ಮಂದಿ ಸೋಂಕಿತರ ಪೈಕಿ 248190 ಸೋಂಕಿನಿಂದ ಗುಣಮುಖರಾಗಿದ್ದು, 178014 ಮಂದಿ ಇನ್ನು ಸೋಂಕಿನಿಂದ ಬಳಲುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಸತತ 11 ದಿನಗಳಿಂದ 10ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜೂ.1ರಿಂದ ಜೂ.21ರ ಅವಧಿಯಲ್ಲಿ 2,31,747 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ.


