HEALTH TIPS

Alert! Google ನ ಈ ಸೇವೆ ಜೂನ್ 30ಕ್ಕೆ ಸ್ಥಗಿತಗೊಳ್ಳಲಿದೆ

        ನವದೆಹಲಿ: ಐದು ತಿಂಗಳ ಹಿಂದೆ ಗೂಗಲ್ ವಿಶಿಷ್ಟ ಕೃತಕ ಬುದ್ಧಿಮತ್ತೆ ಆಧಾರಿತ ಫೋಟೋ ಮುದ್ರಣ ಸೇವೆಯನ್ನು ಪ್ರಾರಂಭಿಸಿತ್ತು. ಆದರೆ ಇದೀಗ ಕಂಪನಿ ತನ್ನ ಈ ಸೇವೆಯನ್ನು ಜೂನ್ 30 ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಯೋಜನೆ ರೂಪಿಸುತ್ತಿದೆ. ಎಐ ಫೋಟೋ ಪ್ರಿಂಟಿಂಗ್ ಸೇವೆ ಮಾಸಿಕ ಪಾವತಿಸುವ ಸೇವೆಯಾಗಿದ್ದು, ಬಳಕೆದಾರರು ತಮ್ಮ ಸಂಗ್ರಹಗಳಲ್ಲಿ ಫೋಟೋಗಳನ್ನು ಇದರ ಸಹಾಯದಿಂದ ಮುದ್ರಿಸಬಹುದಾಗಿತ್ತು. ಆದರೂ ಕೂಡ ಈ ಸೇವೆಯ ಸ್ಥಗಿತಗೊಳಿಸಲು ಕಾರಣ ಏನು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. 
        Engadgetನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಗೂಗಲ್ ತನ್ನ ಗ್ರಾಹಕರಿಗೆ ಈ ಕುರಿತು ಸಂದೇಶವೊಂದನ್ನು ರವಾನಿಸಿದ್ದು, ಸಂದೇಶದಲ್ಲಿ  "ಕಳೆದ ಕೆಲವು ತಿಂಗಳುಗಳಲ್ಲಿ ನೀವು ನೀಡಿದ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ವೈಶಿಷ್ಟ್ಯವನ್ನು ನಾವು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರ ಕುರಿತು ನೀವು ನಮಗೆ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಈ ಸೇವೆಯನ್ನು ನಾವು ಇನ್ನಷ್ಟು ಹೆಚ್ಚಿನ ವಿಶೇಷತೆಗಳೊಂದಿಗೆ ನಾವು ನಿಮ್ಮ ಮುದೇ ತರುವ ಭರವಸೆ ನೀಡುತ್ತೇವೆ. ದಯವಿಟ್ಟು ಭವಿಷ್ಯದ ನವೀಕರಣಗಳ ಬಗ್ಗೆ ಗಮನವಿಡಿ" ಎಂದು ಹೇಳಿದೆ.
       ತನ್ನ ಕೃತಕ ಬುದ್ಧಿಮತ್ತೆ ಆಧಾರಿತ ಫೋಟೋ ಮುದ್ರಣ ಸೇವೆಯಲ್ಲಿ ಗೂಗಲ್ ಒಂದು ವಿಶೇಷ ಅಲ್ಗಾರಿದಮ್ ಅನ್ನು ಪ್ರೋಗ್ರಾಮ್ ಮಾಡಿದೆ. ಇದರ ಅಡಿಯಲ್ಲಿ, ಬಳಕೆದಾರರ ಫೋಟೋ ಗ್ಯಾಲರಿಯಿಂದ ಉತ್ತಮ ಫೋಟೋವನ್ನು ಆಯ್ಕೆಮಾಡಿ ಮತ್ತು ಅದನ್ನು 4x6 ಗಾತ್ರದಲ್ಲಿ ಕೊಳ್ಳಬಹುದಾಗಿತ್ತು. ಇದನ್ನು ಬಳಸಿ ಬಳಕೆದಾರರು ತಮ್ಮ ಯಾವುದೇ ಒಂದು ಫೋಟೋ ಅನ್ನು ಲ್ಯಾಂಡ್ ಸ್ಕೇಪ್ ನಲ್ಲಿಯೂ ಕೂಡ ಪ್ರಿಂಟ್ ಮಾಡಬಹುದಾಗಿತ್ತು. ಈ ಸೇವೆಗಾಗಿ ಬಳಕೆದಾರರು ಮಾಸಿಕ $7.99 ಅಂದರೆ ಸುಮಾರು 600 ರೂ. ಶುಲ್ಕ ಪಾವತಿಸಬೇಕಾಗಿತ್ತು. ಈ ಪ್ಯಾಕೇಜ್ ಅಡಿ ಬಳಕೆದಾರರು ಒಟ್ಟು ಹತ್ತು ಫೋಟೋ ಮುದ್ರಿಸಬಹುದಾಗಿತ್ತು.
             ಈ ಸೇವೆ ಏಕೆ ಸ್ಥಗಿತಗೊಳಿಸಲಾಗುತ್ತಿದೆ?
       ಕೃತಕ ಬುದ್ಧಿಮತ್ತೆ ಆಧಾರಿತ ಫೋಟೋ ಮುದ್ರಣ ಸೇವೆಯನ್ನು ಗೂಗಲ್‌ನಲ್ಲಿ ಕೇವಲ ಯುಎಸ್‌ನಲ್ಲಿ ಮಾತ್ರ ಪ್ರಾಯೋಗಿಕವಾಗಿ ಪ್ರಾರಂಭಿಸಿತ್ತು. ಈ ಸೇವೆಯನ್ನು ನಿಲ್ಲಿಸಲು ಗೂಗಲ್ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಬಹುಶಃ ಈ ಸೇವೆಯನ್ನು ಅನೇಕ ಬಳಕೆದಾರರು ಇಷ್ಟಪಟ್ಟಿಲ್ಲ ಎಂದು ಊಹಿಸಲಾಗುತ್ತಿದೆ , ಆದ್ದರಿಂದ ಅದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಈ ಸೇವೆಯನ್ನು ಬಳಸುವಲ್ಲಿ ಬಳಕೆದಾರರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆಎಂದೂ ಕೂಡ ಹೇಳಲಾಗುತ್ತಿದ್ದು ಇದೆ ಕಾರಣದಿಂದಾಗಿ ಅದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries