ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್‍ನಲ್ಲಿ, ಫಾರ್ಮ್ ಲೈವ್ಲಿ ಹುಡ್ ಯೋಜನೆಗೆ ಬ್ಲಾಕ್ ಸಂಯೋಜಕ ಮತ್ತು ಕ್ಲಸ್ಟರ್ ಮಟ್ಟದ ಸಂಯೋಜಕ ಹುದ್ದೆಗಳು ಖಾಲಿಯಾಗಿದೆ. ವಿ ಎಚ್ ಎಸ್ ಇ ಕೃಷಿ ಪದವೀಧರರು ಬ್ಲಾಕ್ ಸಂಯೋಜಕ ಹುದ್ದೆಗಳಿಗೆ ಮತ್ತು ಪ್ಲಸ್ ಟು ಸೈನ್ಸ್ ಅರ್ಹರು ಕ್ಲಸ್ಟರ್ ಮಟ್ಟದ ಸಂಯೋಜಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 18 ರಿಂದ 30 ವರ್ಷದೊಳಗಿನ ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರು. ಮಂಜೇಶ್ವರ, ಪರಪ್ಪ, ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್‍ಗಳಲ್ಲಿ ಖಾಲಿ ಹುದ್ದೆಗಳಿಗೆ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಮಂಜೇಶ್ವರ ಬ್ಲಾಕ್‍ನಲ್ಲಿ ಕ್ಲಸ್ಟರ್ ಲೆವೆಲ್ ಸಂಯೋಜಕ ಹುದ್ದೆಗೆ ಅರ್ಜಿದಾರರಾಗಿ ಅಭ್ಯರ್ಥಿಗಳು ಮಲಯಾಳಂ ಮತ್ತು ಕನ್ನಡದಲ್ಲಿ ಭಾಷಾನುಭವ ಹೊಂದಿರಬೇಕು.
ಅಭ್ಯರ್ಥಿಗಳು ಅರ್ಹತೆ, ವಯಸ್ಸು ಮತ್ತು ಇ-ಮೇಲ್ ವಿಳಾಸಗಳೊಂದಿಗೆ ಪ್ರಮಾಣಪತ್ರಗಳು ಮತ್ತು ಬಯೋಡೇಟಾವನ್ನು ಜೂನ್ 29 ರಂದು ಸಂಜೆ 5 ಗಂಟೆಯೊಳಗೆ mkspksd20@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 7025104605, 04994 256 111 ಸಂಪರ್ಕಿಸಬಹುದು.


