ಬೀಜಿಂಗ್ : ಪೂರ್ವ ಲಡಾಖ್ ಗಡಿಯ ಗಾಲ್ವಾನ್ ಸಂಘರ್ಷಣೆಗೆ ಸಂಬಂಧಿಸಿದಂತೆ, ಚೀನಾ, ಭಾರತದ ವಿರುದ್ದ ಎರಡು ಹೊಸ ಆಪಾದನೆಯನ್ನು ಮಾಡಿದೆ.
ಘರ್ಷಣೆಗೆ ಭಾರತವೇ ಕಾರಣ ಎಂದಿರುವ ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯ, ಭಾರತ ತನ್ನ ವಿರುದ್ದ ರಾಜತಾಂತ್ರಿಕ ವಂಚನೆ ನಡೆಸಿತ್ತು. ಅಲ್ಲದೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಭಾರತೀಯ ಮಾಧ್ಯಮಗಳು ಘಟನೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ ಎಂದು ಆರೋಪಿಸಿದೆ.
ಜೂನ್ 22ರಂದು ನಡೆದ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಗಳು ಎರಡು ದೇಶಗಳ ನಡುವಿನ ಉದ್ವಿಗ್ನತೆ ಮತ್ತು ಮನಸ್ತಾಪಗಳನ್ನು ಸರಿಯಾಗಿ ನಿಭಾಯಿಸುವ ಪ್ರಯತ್ನವಾಗಿದೆ ಎಂದು ಚೀನಾ ಹೇಳಿದೆ.

ಅಂತರರಾಷ್ಟ್ರೀಯ ಗಡಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಘರ್ಷಣೆಯನ್ನು ಪ್ರಚೋದಿಸಿದ್ದಕ್ಕಾಗಿ ಭಾರತವನ್ನು ಚೀನಾದ ಎರಡು ಸಚಿವಾಲಯದ ಅಧಿಕಾರಿಗಳು ಪ್ರತ್ಯೇಕ, ಪ್ರತ್ಯೇಕವಾಗಿ ದೂರಿವೆ. ರಷ್ಯಾ, ಭಾರತ, ಚೀನಾ ದೇಶದ ವಿದೇಶಾಂಗ ಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ಮಹತ್ವವನ್ನು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರಸ್ತಾಪಿಸಿದ್ದರು. "ಭಾರತೀಯ ಮಾಧ್ಯಮಗಳು ಮತ್ತು ವಿದೇಶಾಂಗ ಸಚಿವಾಲಯ ನಿರಂತರವಾಗಿ ಸುಳ್ಳನ್ನು ಹೇಳುತ್ತಿದೆ. ಹಾಗಾಗಿ, ಗಾಲ್ವಾನ್ ವಿಚಾರದ ಬಗ್ಗೆ ಸತ್ಯವನ್ನು ವಿಶ್ವಕ್ಕೆ ತಿಳಿಸುವುದು ನಮ್ಮ ಕರ್ತ್ಯವ್ಯ" ಎಂದು ಚೀನಾದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.