HEALTH TIPS

ಕೋವಿಡ್ ಭೀತಿ-ಓಣಂ ಹಿನ್ನೆಲೆಯಲ್ಲಿ ಹೂಗಳ ಮಾರುಕಟ್ಟೆ ಡಲ್-ಹೆದರುವ ಅಗತ್ಯವಿಲ್ಲ ತಜ್ಞ ವೈದ್ಯರು

 

       ತಿರುವನಂತಪುರ: ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇರಳದ ಓಣಂ ಆಚರಣೆಗಳು ಮನೆಗಳಿಗಷ್ಟೇ ಸೀಮಿತವಾಗಿರುವುದರಿಂದ, ರಾಜ್ಯದ ಓಣಂ ಹೂವಿನ ಮಾರುಕಟ್ಟೆಯೂ ದೊಡ್ಡ ಬಿಕ್ಕಟ್ಟಿನಲ್ಲಿದೆ. ಇತರ ರಾಜ್ಯಗಳಿಂದ ಟನ್ ಗಟ್ಟಲೆ ಹೂವುಗಳನ್ನು ತಂದು ಮಾರಾಟಮಾಡುವ ಅನೇಕ ಮಾರಾಟಗಾರರು ಈ ಬಾರಿ ತಮ್ಮ ಮಾರಾಟವನ್ನು ಅತ್ಯಲ್ಪಕ್ಕೆ ಇಳಿಸಿದ್ದಾರೆ. ನೆರೆಯ ರಾಜ್ಯಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲು ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಅನುಮತಿ ನೀಡುವ ಆದೇಶವನ್ನು ಸರ್ಕಾರ ತಿದ್ದುಪಡಿ ಮಾಡಿದರೂ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ನಿಧಾನಗತಿಯ ವ್ಯವಹಾರ ಕಂಡುಬರುತ್ತಿದೆ. 

     ಕೋವಿಡ್ ನಿಯಮ-ನಿಬಂಧನೆಗಳ ಅನುಸಾರ ಇತರ ರಾಜ್ಯಗಳ ವ್ಯಾಪಾರಿಗಳಿಗೆ ಹೂವುಗಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಗುಂಪುಗೂಡಿ ವ್ಯವಹಾರ-ವಹಿವಾಟನ್ನು ನಿಯಂತ್ರಿಸಿರುವುದು ಮತ್ತು ಮಾರಾಟದ ಸಮಯದಲ್ಲಿ ವೈರಸ್ ಹರಡುವುದನ್ನು ತಪ್ಪಿಸಲು ಸಾಧ್ಯವಾದಷ್ಟು ನಗದು ರಹಿತ ವಹಿವಾಟು ನಡೆಸುವುದಕ್ಕೆ ಸರ್ಕಾರ  ಶಿಫಾರಸು ಮಾಡಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಕೋವಿಡ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಇತರ ರಾಜ್ಯಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳುವುದನ್ನು ಆರಂಭದಲ್ಲಿ ನಿಷೇಧಿಸಲಾಗಿತ್ತು. ಆದರೆ ಹೂವುಗಳ ಮೇಲಿನ ನಿಷೇಧವನ್ನು ಇದೀಗ ತೆಗೆದುಹಾಕಲಾಗಿದೆ. ಆದರೆ ತರಕಾರಿಗಳು ಮತ್ತು ಹಣ್ಣುಗಳನ್ನು ರಾಜ್ಯದ ಹೊರಗಿನಿಂದ ನಿಷೇಧಿಸಲಾಗಿದೆ.

      ಹೂವುಗಳಿಂದ ವೈರಸ್ ಹರಡುವ ಅಪಾಯ ತೀರಾ ಕಡಿಮೆ ಎಂದು ಪಾಲಕ್ಕಾಡ್ ಕ್ವಾಲಿಟಿ ಚಿಕಿತ್ಸಾಲಯದ ಆಂತರಿಕ ಮೆಡಿಸಿನ್ ವಿಭಾಗದ  ಸಲಹೆಗಾರ ಡಾ.ಶ್ರೀಧರನ್ ಹೇಳಿರುವರು. ಡಾ.ಅರುಣ್ ಎನ್.ಎಂ. ಪ್ರತಿಕ್ರಿಯಿಸಿ ಮಾತನಾಡಿ, ಆರಂಭದಲ್ಲಿ ಈ ಬಗ್ಗೆ ಕೆಲವು ಅನುಮಾನಗಳು ಇದ್ದವು, ಆದರೆ ಸಿಡಿಸಿ ಸೇರಿದಂತೆ ವಿವಿಧ ಏಜೆನ್ಸಿಗಳು ನಡೆಸಿದ ಸಂಶೋಧನೆಯಲ್ಲಿ ಹೂಗಳಿಂದ ವೈರಸ್ ಹರಡುವ ಅಪಾಯವು ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ವೈರಸ್ ಮಾನವ ಜೀವಕೋಶಗಳಲ್ಲಿ ಮಾತ್ರ ವಾಸಿಸುತ್ತದೆ ಮತ್ತು ನಿರ್ಜೀವ ವಸ್ತುಗಳಲ್ಲಿ ವಾಸಿಸುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿರುವರು.

      ಹೂವುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳದಿದ್ದರೂ ಪರವಾಗಿಲ್ಲ, ಆದರೆ ಹೂವುಗಳನ್ನು ತರುವವರೊಂದಿಗೆ ನೀವು ನಿಕಟ ಸಂಪರ್ಕಕ್ಕೆ ಬಂದರೆ ಸೋಂಕಿನ ಅಪಾಯವಿದೆ ಎಂದು ಅರುಣ್ ಎಚ್ಚರಿಸಿರುವರು. ನಿಮ್ಮ ಕೈಗಳಿಂದ ನಿಮ್ಮ ಮೂಗು ಅಥವಾ ಬಾಯಿಯನ್ನು ಮುಟ್ಟದಂತೆ ಎಚ್ಚರಿಕೆ ವಹಿಸಬೇಕು. ವೈರಸ್ ಸೋಂಕಿತ ಜನರು ತಮ್ಮ ಕೈಗಳಿಂದ ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ ಸೋಂಕಿಗೆ ಒಳಗಾಗಬಹುದು ಮತ್ತು ರೋಗಿಯ ಸ್ರವಿಸುವ ಮೇಲ್ಮೈಯನ್ನು ಸ್ಪರ್ಶಿಸುವುದರಿಂದ ರೋಗ ಹರಡಬಹುದು ಎಂದು ಅವರು ಹೇಳಿರುವರು. 

     ಹೂವುಗಳು ಸೇರಿದಂತೆ ವಸ್ತುಗಳು ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಸಂಸ್ಥೆಗಳು ಸೂಚಿಸುತ್ತವೆ. ಕೋವಿಡ್ ಸರಕುಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ. ಜೊತೆಗೆ ಆಮದು ಮಾಡಿಕೊಳ್ಳುವ ಮತ್ತು ವಿವಿಧ ಪರಿಸ್ಥಿತಿಗಳು ಮತ್ತು ತಾಪಮಾನದ ಮೂಲಕ ಹಾದುಹೋಗುವ ಪ್ಯಾಕೇಜ್‍ಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್‍ಸೈಟ್‍ನಲ್ಲೂ ಸೂಚಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries