HEALTH TIPS

ಮಹಿಳಾ ದಿನಾಚರಣೆ: ಭಾರತೀಯ ಮಹಿಳೆಯರು ಹೆಚ್ಚು ಮಾತನಾಡುವ ವಿಷಯಗಳು ಟ್ವಿಟರ್ ನಲ್ಲಿ ಬಹಿರಂಗ

          ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಟ್ವಿಟರ್ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರು ಯಾವುದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗಗೊಂಡಿದೆ.


      ಟ್ವಿಟರ್ ನ ಸ್ವತಂತ್ರ ಸಂಶೋಧನೆ ಇದಾಗಿದ್ದು, ಟ್ವಿಟ್ಟರ್ನಲ್ಲಿ ಜೊತೆಗೆ ಮಹಿಳಾ ಟ್ವಿಟ್ಟರ್ ಖಾತೆಗಳಿಂದ ಜನವರಿ 2019 ಮತ್ತು ಫೆಬ್ರವರಿ 2021 ರ ನಡುವೆ 10 ಭಾರತೀಯ ನಗರಗಳಲ್ಲಿ ಮಹಿಳೆಯರು ಕಳುಹಿಸಿದ 522,992 ಟ್ವೀಟ್‌ಗಳ ಗುಣಾತ್ಮಕ ಪರಿಮಾಣ ಮತ್ತು ವಿಶ್ಲೇಷಣೆಯೊಂದಿಗೆ 7೦೦ ಮಹಿಳೆಯರಲ್ಲಿ ಪರಿಮಾಣಾತ್ಮಕ ಸಮೀಕ್ಷೆಯನ್ನು ನಡೆಸಲಾಗಿದೆ.

      ಭಾರತದಲ್ಲಿ ಮಹಿಳೆಯರು ವೈವಿಧ್ಯಮಯ ಸಂಭಾಷಣೆಗಳೊಂದಿಗೆ ಟ್ವಿಟ್ಟರ್ನಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಸಮೀಕ್ಷೆಯ ಮೂಲಕ ಒಂಭತ್ತು ಪ್ರಬಲ ಸಂಭಾಷಣಾ ವಿಷಯಗಳು ಹೊರಬಂದಿವೆ. ಮಹಿಳೆಯರು ಸೇವೆಯಲ್ಲಿ ಫ್ಯಾಷನ್, ಪುಸ್ತಕಗಳು, ಸೌಂದರ್ಯ, ಮನರಂಜನೆ ಮತ್ತು ಆಹಾರದ ಬಗ್ಗೆ ಹೆಚ್ಚು ಮಾತನಾಡಿರುವುದರೊಂದಿಗೆ 24.9% ರಷ್ಟು ಪಾಲನ್ನು ಹೊಂದಿರುವ ಷ್ಯಾಷನ್ ಪಾಯಿಂಟ್‌ಗಳು ಮತ್ತು ಅಭಿರುಚಿಗಳು ಉನ್ನತ ಸಂಭಾಷಣೆಯ ವಿಷಯವಾಗಿ ಹೊರಹೊಮ್ಮಿದವು. ಪ್ರಚಲಿತ ವಿದ್ಯಮಾನಗಳು (20.8%), ಸಂಭ್ರಮಾಚರಣೆಯ ಕ್ಷಣಗಳು (14.5%), ಸಮುದಾಯಗಳು (11.7%) ಮತ್ತು ಸಾಮಾಜಿಕ ಬದಲಾವಣೆ (8.7%) ಕೂಡ ಟ್ವಿಟರ್‌ನಲ್ಲಿ ಮಹಿಳೆಯರಲ್ಲಿ ಮೊದಲ ಐದು ಸಂಭಾಷಣೆ ವಿಷಯಗಳಲ್ಲಿ ಕಾಣಿಸಿಕೊಂಡಿವೆ. ದೈನಂದಿನ ಹರಟೆ ಮತ್ತು ಸಂಭ್ರಮಾಚರಣೆಯ ಕ್ಷಣಗಳ ಸುತ್ತಲಿನ ಸಂಭಾಷಣೆಗಳು ಪ್ರತಿ ಟ್ವೀಟ್‌ಗೆ ಸರಾಸರಿ ಸಂಖ್ಯೆಯ ಲೈಕ್‌ಗಳು ಮತ್ತು ರಿಪ್ಲೆಗಳ ವಿಷಯದಲ್ಲಿ ಹೆಚ್ಚಿನ ತೊಡಗುವಿಕೆಯೊಂದಿಗೆ, ಪ್ಯಾಶನ್ ಪಾಯಿಂಟ್‌ಗಳು ಮತ್ತು ಅಭಿರುಚಿಗಳು, ಸಮುದಾಯಗಳು ಮತ್ತು ಹಂಚಿಕೆಯ ಸವಾಲುಗಳು ಹೆಚ್ಚು ರಿಟ್ವೀಟ್ ಮಾಡಲಾದ ವಿಭಾಗಗಳಾಗಿವೆ.

           ನಗರಗಳು ತಮ್ಮ ವಿಭಿನ್ನ ಸಂಭಾಷಣಾ ಅಂಶಗಳನ್ನು ಪ್ರದರ್ಶಿಸಿದವು: ಚೆನ್ನೈನಲ್ಲಿ ಸಂಭ್ರಮಾಚರಣೆಯ ಕ್ಷಣಗಳು, ಸೃಜನಾತ್ಮಕ ಪ್ರದರ್ಶನ ಮತ್ತು ದೈನಂದಿನ ಹರಟೆಗಳಲ್ಲಿ ಮೊದಲಿದ್ದರೆ ಸಮುದಾಯಗಳು, ಸಾಮಾಜಿಕ ಬದಲಾವಣೆ ಮತ್ತು ಹಂಚಿಕೆಯ ಸವಾಲುಗಳ ಸುತ್ತ ಬೆಂಗಳೂರು ಪ್ರಾಬಲ್ಯ ಸಾಧಿಸಿದರೆ, ಗುವಾಹಟಿ ಪ್ಯಾಶನ್ ಪಾಯಿಂಟ್‌ಗಳು ಮತ್ತು ಅಭಿರುಚಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಸುತ್ತಲಿನ ಸಂಭಾಷಣೆಗಳಲ್ಲಿ ಮುನ್ನಡೆ ಪಡೆದಿತ್ತು.

      ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮನೀಶ್ ಮಹೇಶ್ವರಿ ಮಾತನಾಡಿ, "ನಾವು ಟ್ವಿಟರ್‌ನಲ್ಲಿ ಮಹಿಳೆಯರ ಬಗ್ಗೆ ನಮ್ಮ ಅರಿವನ್ನು ಬೆಳೆಸಲು ಈ ಸಮೀಕ್ಷೆಯನ್ನು ನಡೆಸಿದ್ದೇವೆ ಮತ್ತು ಫಲಿತಾಂಶಗಳಿಂದ ನಾವು ಬಹಳ ಪ್ರೇರಿತರಾಗಿದ್ದೇವೆ. ಟ್ವಿಟರ್ ಪ್ರತಿಯೊಬ್ಬ ಮಹಿಳೆಗಾಗಿಯೂ ಎಂದು ಈ ಒಳನೋಟಗಳು ನಮಗೆ ತೋರಿಸುತ್ತದೆ. ಅವರ ಸಮುದಾಯಗಳು ಮತ್ತು ಸಂಭಾಷಣೆಗಳು ಸೇವೆಯ ಅನನ್ಯತೆ ಮತ್ತು ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ. ಅಂತರ್ಜಾಲಕ್ಕೆ ಉಚಿತ ಮತ್ತು ಮುಕ್ತ ಪ್ರವೇಶವು ಪ್ರತಿಯೊಬ್ಬರೂ ಅಡೆತಡೆಗಳಿಲ್ಲದೆ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಾಡಿದೆ. ಒಂದು ಸೇವೆಯಾಗಿ, ಜನರಿಗೆ ಸಂಭಾಷಿಸಲು, ಸಮುದಾಯಗಳನ್ನು ರೂಪಿಸಲು ಮತ್ತು ಸಂವಾದದಲ್ಲಿ ಅವರೊಂದಿಗೆ ಯಾರು ಸಂವಹನ ನಡೆಸಬಹುದು ಎಂಬುದನ್ನು ನಿಯಂತ್ರಿಸಲು ಹೊಸ ಮಾರ್ಗಗಳನ್ನು ನೀಡಲು ಈ ಅಡಿಪಾಯದ ಮೇಲೆ ಅಭಿವೃದ್ಧಿಪಡಿಸುವುದು ನಮ್ಮ ಗುರಿ" ಎಂದು ಹೇಳಿದ್ದಾರೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries