HEALTH TIPS

ಕೇರಳ-ಕರ್ನಾಟಕ ಗಡಿಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರಿಂದ ರಸ್ತೆ ಅತಿಕ್ರಮಣ: ಇಂಟರ್‍ಲಾಕಿಂಗ್ ಕಡವಿದ ಲೋಕೋಪಯೋಗಿ

ಮುಳ್ಳೇರಿಯ: ಕೇರಳ-ಕರ್ನಾಟಕ ಗಡಿಯಲ್ಲಿರುವ ಕೊಟ್ಯಾಡಿಯ ರಸ್ತೆ ಬದಿಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರು ನಿರ್ಮಿಸಿದ ಇಂಟರ್‍ಲಾಕಿಂಗ್ ಪ್ಲೋರ್ ಅನ್ನು ಲೋಕೋಪಯೋಗಿ ಅಧಿಕಾರಿಗಳು ಕೆಡವಿದ ಘಟನೆ ವರದಿಯಾಗಿದೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ ನಂತರ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ನೆಟ್ಟಣಿಗೆ ಮುಡ್ನೂರಿನ ಕೊಟ್ಯಾಡಿ ಪ್ರದೇಶದಲ್ಲಿ ಹೊಸದಾಗಿ ಪ್ರಾರಂಭಿಸಲಾದ 'ಅಡೂರ್ ಫಿಯಲ್ಸ್' (ನಯನ ಎನರ್ಜಿ) ಪೆಟ್ರೋಲ್ ಪಂಪ್ ವಿರುದ್ಧ ವ್ಯಾಪಕ ದೂರುಗಳು ಬಂದವು. ಪಂಪ್ ಮಾಲೀಕರು ಜನವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪಂಪ್ ನಿವೃತ್ತ ಜಿಲ್ಲಾಧಿಕಾರಿಯ ಒಡೆತನದಲ್ಲಿದೆ ಮತ್ತು ಈ ಪ್ರಭಾವವನ್ನು ಬಳಸಿಕೊಂಡು ಪಂಪ್‍ಗೆ ಅಕ್ರಮವಾಗಿ ಸುಲಭವಾಗಿ ಪರವಾನಗಿ ನೀಡಲಾಗಿದೆ ಎಂಬುದು ಸ್ಥಳೀಯರ ಪ್ರಮುಖ ಆರೋಪವಾಗಿದೆ.

ಸುರಕ್ಷತಾ ಮಾನದಂಡಗಳ್ನ ಉಲ್ಲಂಘನೆ: 

ಪಂಪ್ ಅನ್ನು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಅಳವಡಿಸಲಾಗಿದೆ ಎಂದು ಪಾತೂರು ಗ್ರಾಮದ ಸಾರ್ವಜನಿಕರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು. ಪಂಪ್‍ನಲ್ಲಿ ಅಳವಡಿಸಲಾದ ಪೆಟ್ರೋಲ್ ಸ್ಟಾಕ್ ಟ್ಯಾಂಕ್ ಸೋರಿಕೆಯಾಗುತ್ತಿದ್ದು, ಅಪಘಾತದ ಬೀತಿಯನ್ನುಂಟುಮಾಡುತ್ತಿದೆ ಎಂಬುದು ಮತ್ತೊಂದು ದೂರು.

ರಸ್ತೆಯನ್ನು ಅತಿಕ್ರಮಿಸಿ ಇಂಟರ್‍ಲಾಕ್ ಮಾಡಿದಾಗ, ನೀರು ಹತ್ತಿರದ ಕೃಷಿಭೂಮಿಗಳಿಗೆ ಪ್ರವೇಶಿಸಿ ಬೆಳೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತು.  ಇದಲ್ಲದೆ, ಪಂಪ್ ಸುತ್ತಲೂ ರಾಶಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯವು ಪ್ರದೇಶಕ್ಕೆ ಅಪಾಯವನ್ನುಂಟುಮಾಡಿದೆ.

ಲೋಕೋಪಯೋಗಿ ಇಲಾಖೆಯ ನಿಯಮಾವಳಿಗಳ ಪ್ರಕಾರ ಪಂಪ್ ಅನ್ನು ರಸ್ತೆಯಿಂದ 40 ಮೀಟರ್ ದೂರದಲ್ಲಿ ಅಳವಡಿಸಬೇಕಾಗಿದ್ದರೂ, ಇಲ್ಲಿ ಕೇವಲ 20 ಮೀಟರ್ ದೂರದಲ್ಲಿ ಮಾತ್ರ ಅಳವಡಿಸಲಾಗಿದೆ. ಬಳಿಕ, ಪಿಡಬ್ಲ್ಯೂಡಿ ಪಂಪ್ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. 

ಲೋಕೋಪಯೋಗಿ ಇಲಾಖೆಯ ಬದಿಯಡ್ಕ ವಿಭಾಗ ಸಹಾಯಕ ಎಂಜಿನಿಯರ್ ಪೆಟ್ರೋಲ್ ಪಂಪ್ ಮಾಲೀಕರಿಗೆ ನೋಟಿಸ್ ನೀಡಿದ್ದರು. ತಪಾಸಣೆಯಲ್ಲಿ ಡ್ರೈನ್ ಮೇಲ್ಭಾಗದಲ್ಲಿರುವ ಇಂಟರ್‍ಲಾಕ್ ರಸ್ತೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುವ ರೀತಿಯಲ್ಲಿ ಮುರಿದುಹೋಗಿರುವುದು ಕಂಡುಬಂದಿದೆ. ಇದು ರಸ್ತೆಯಲ್ಲಿ ನೀರು ನಿಲ್ಲಲು ಕಾರಣವಾಗಿ ಅಪಘಾತಗಳಿಗೆ ದಾರಿಯಾಯಿತು. 

ಪಂಪ್ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಇಂಟರ್‍ಲಾಕ್ ಅನ್ನು ಕಿತ್ತುಹಾಕಿ ಸಮಸ್ಯೆಗಳನ್ನು ಪರಿಹರಿಸಬೇಕು, ಇಲ್ಲದಿದ್ದರೆ ಎಲ್ಲಾ ನಷ್ಟಗಳಿಗೆ ಮಾಲೀಕರೇ ಜವಾಬ್ದಾರರಾಗಿರುತ್ತಾರೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಲೋಕಾಯುಕ್ತರನ್ನು ಸಂಪರ್ಕಿಸುವುದಾಗಿ ಸ್ಥಳೀಯ ಉಮರ್ ಫಾರೂಕ್ ಈ ಹಿಂದೆ ಹೇಳಿದ್ದರು. ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿ ಜಿಲ್ಲಾಧಿಕಾರಿ, ಎಡಿಎಂ, ಡಿವೈಎಸ್‍ಪಿ, ತಹಶೀಲ್ದಾರ್, ಪಂಚಾಯತಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಬಳಿಕ ನೋಟೀಸ್ ಗೂ ಪ್ರತಿಕರಿಸದಿದ್ದರಿಂದ ಅಧಿಕಾರಿಗಳೇ ಜೆಸಿಬಿ ಬಳಸಿ ಕೆಡವಿರುವರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries