ಬದಿಯಡ್ಕ: ಇತ್ತೀಚೆಗೆ ಕಾಞಂಗಾಡು ನೆಹರೂ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಕಲೋತ್ಸವದ ಮೃದಂಗ ಸ್ಪರ್ಧೆಯಲ್ಲಿ ಎ ಗ್ರೇಡಿನೊಂದಿಗೆ ವಿಶ್ವಾಸ್ ಪದ್ಯಾಣ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ನೀರ್ಚಾಲು ನಿವಾಸಿಗಳಾದ ಅಧ್ಯಾಪಕ ದಂಪತಿ ಪದ್ಯಾಣ ಚಂದ್ರಶೇಖರ್ ಭಟ್ ಮತ್ತು ಸುಶೀಲಾ ಪದ್ಯಾಣ ಇವರ ಪುತ್ರ. ಪ್ರಸ್ತುತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಬಿ ಎಸ್ ಸಿ (ಭೌತಶಾಸ್ತ್ರ) ವ್ಯಾಸಂಗ ಮಾಡುತ್ತಿರುವ ಈತ ಬಳ್ಳಪದವು ವಿದ್ವಾನ್ ಯೋಗೀಶ ಶರ್ಮ ಅವರ ಶಿಷ್ಯ.

-%20Vishwas.jpg)
