ಬದಿಯಡ್ಕ: ಬದಿಯಡ್ಕ ಬಸ್ ನಿಲ್ದಾಣ ಸನಿಹದ ನಿವಾಸಿ, ವ್ಯಾಪಾರಿ ರವೀಂದ್ರ ಕಾಮತ್ ಅವರ ಪುತ್ರ ರಾಘವೇಂದ್ರ ಕಾಮತ್(29)ನಿಧನರಾದರು. ಭಾನುವಾರ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದ ಇವರು, ಸೋಮವಾರ ಬೆಳಗ್ಗೆ ಬಹಳ ಹೊತ್ತಿನ ವರೆಗೂ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಮನೆಯವರು ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ.


