ಮಂಜೇಶ್ವರ: ಅಡಕಳಕಟ್ಟೆ ಮಿತ್ರವೃಂದ ಲೈಬ್ರರಿ ಮತ್ತು ವಾಚನಾಲಯ ಹಾಗೂ ಕನಚೂರ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಾಟೆಕಲ್ ಇದರ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಭಾನುವಾರ ಬೆಳಗ್ಗೆ 9 ರಿಂದ ಸಂಜೆಯ ತನಕ ಕೊಡ್ಲಮೊಗರು ಶ್ರೀ ವಾಣಿವಿಜಯ ಎ. ಯು. ಪಿ. ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಅವರು, ಆಧುನಿಕ ಯುಗದಲ್ಲಿ ಆಯುರ್ವೇದ ಚಿಕಿತ್ಸೆಯು ಜಗತ್ತಿನ ಅನಿವಾರ್ಯವಾಗಿದೆ. ಪರಂಪರಾಗತವಾಗಿ ಬಂದ ಹಳ್ಳಿಯ ಚಿಕಿತ್ಸಾ ಕ್ರಮ ಅಡ್ಡ ಪರಿಣಾಮವಿಲ್ಲದ ಈ ಚಿಕಿತ್ಸೆಯು ಜನರ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ ಎಂದರು. ತುಳು ನಾಡಿನ ಹಳ್ಳಿಮದ್ದುಗಳನ್ನು, ಚಿಕಿತ್ಸಾ ವಿಧಾನಗಳನ್ನು ಜೀವಂತವಾಗಿಡಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ಲೈಬ್ರರಿ ಅಧ್ಯಕ್ಷ, ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲಕೃಷ್ಣ ಪಜ್ವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಸಿಗೋಳಿ ಶ್ರೀಸತ್ಯಸಾಯಿ ಆಶ್ರಮದ ನಿರ್ದೇಶಕ ಡಾ. ಉದಯ ಕುಮಾರ್, ಪಂಚಾಯತಿ ಸದಸ್ಯೆ ಗೀತಾ ಸಾಮಾನಿ, ಮಂಜೇಶ್ವರ ತಾಲೂಕು ಲೈಬ್ರರಿ ಸಮಿತಿ ಕಾರ್ಯದರ್ಶಿ ಡಿ.ಕಮಲಾಕ್ಷ, ಕೇರಳ ತುಳು ಅಕಾಡೆಮಿ ಸದಸ್ಯೆಯರಾದ ಭಾರತಿ ಎಸ್, ಕೃಷ್ಣವೇಣಿ, ನಿವೃತ ಮುಖ್ಯೋಪಾಧ್ಯಾಯ ಭಾಸ್ಕರ ಶೆಟ್ಟಿಗಾರ್, ಕೊಡ್ಲಮೊಗರು ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ಬಿ, ಸಮಾಜ ಸೇವಕ ಮೊಹಮ್ಮದ್ ಕಾಂತಮಜಲು ಹಾಗೂ ಕನಚೂರ್ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು. ಲೈಬ್ರರಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ. ಸ್ವಾಗತಿಸಿ, ಸದಸ್ಯ ಜಮಾಲುದ್ದಿನ್ ಎನ್. ಕಾರ್ಯಕ್ರಮ ನಿರೂಪಿಸಿದರು.

.jpeg)
.jpeg)
