ಕಾಸರಗೋಡು: ಕೇರಳದಲ್ಲಿ ಟ್ರಾನ್ಸ್‍ಜೆಂಡರ್ ಜನರು ಎದುರಿಸುತ್ತಿರುವ ಲಿಂಗ ತಾರಮ್ಯ, ಲಿಂಗ ಪರಿವರ್ತನೆ ಪ್ರಕ್ರಿಯೆ ಮತ್ತು ಸವಾಲುಗಳ ಕುರಿತು ಗಮನಾರ್ಹ ಸಂಶೋಧನೆಗಾಗಿ ಫಾತಿಮತ್ ಶಮ್ನೀರಾ ಅವರಿಗೆ ಕೇರಳ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ನೀಡಲಾಗಿದೆ.
ಈ ಸಂಶೋಧನೆಗೆ 'ಕೇರಳದಲ್ಲಿ ಟ್ರಾನ್ಸ್‍ಜೆಂಡರ್‍ಗಳ ಲಿಂಗ ಅಸಮಂಜಸತೆ, ಲಿಂಗ ಪರಿವರ್ತನೆ ಮತ್ತು ಸಾಮಾಜಿಕ-ಸಾಂಸ್ಕøತಿಕ ಹೊರಗಿಡುವಿಕೆ' ಎಂಬ ಶೀರ್ಷಿಕೆ ನೀಡಲಾಗಿದೆ. ಫಾತಿಮತ್ ಶಮ್ನೀರಾ ಅವರು ಕೇರಳ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಸಮಾಜಶಾಸ್ತ್ರಜ್ಞೆ ಡಾ. ಬುಶ್ರಾ ಬೇಗಂ ಆರ್.ಕೆ ಅವರ ಮಾರ್ಗದರ್ಶನದಲ್ಲಿ ತಮ್ಮ ಡಾಕ್ಟರೇಟ್ ಸಂಶೋಧನೆಯನ್ನು ಪೂರ್ಣಗೊಳಿಸಿದರು.
ಸಂಶೋಧನೆಯು ವೈವಿಧ್ಯತೆ ಮತ್ತು ಸಂಕೀರ್ಣತೆಯಿಂದ ತುಂಬಿರುವ ಟ್ರಾನ್ಸ್‍ಜೆಂಡರ್ ಸಮುದಾಯದ ವಾಸ್ತವ ಜೀವನ, ಕುಟುಂಬ ಮತ್ತು ಸಾಮಾಜಿಕ ತಿರಸ್ಕಾರಗಳು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಚಳುವಳಿಗಳ ಮಧ್ಯಸ್ಥಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿದೆ.
ಶಮ್ನೀರಾ ಕಾಸರಗೋಡಿನ ಪರವನಡ್ಕ ಪುಲ್ಲತೊಟ್ಟಿ ಮನೆಯ ದಿ. ಜೈನುದ್ದೀನ್ ಮತ್ತು ನಜುಮುನ್ನಿಸಾ ದಂಪತಿಗಳ ಪುತ್ರಿ. ಅವರ ಪತಿ ಆಸಿಫ್ ಮುಸ್ತಫಾ, ಅವರು ಕೇರಳ ಅರಣ್ಯ ಇಲಾಖೆಯಲ್ಲಿ ಜಿಐಎಸ್ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಗಳು ನೀಲಾ ಅಮಲ್. ನಶಾತ್ ಪರವನಡ್ಕ, ಅಬ್ದುಲ್ ನಸೀಫ್ ಸಹೋದರರು.
ಶೈಕ್ಷಣಿಕ ಸಾಧನೆಗಳು:
ಪ್ರಾಥಮಿಕ ಶಿಕ್ಷಣವನ್ನು ಜಿಎಚ್‍ಎಸ್‍ಎಸ್ ಚೆಮ್ಮನಾಡ್ ಮತ್ತು ಚೆಮ್ಮನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಮ್ನೀರಾ ಪೂರೈಸಿದ್ದರು. ಅವರು ಕಾಸರಗೋಡಿನ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದರು. ಬಳಿಕ ಕ್ಯಾಲಿಕಟ್ ವಿಶ್ವವಿದ್ಯಾಲಯದ ಕ್ಯಾಂಪಸ್‍ನಿಂದ ಪ್ರಥಮ ಶ್ರೇಣಿಯೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಪದವಿ ಉತ್ತೀರ್ಣರಾದರು.
ಸಂಶೋಧನೆಯ ಮಹತ್ವ:
ಈ ಸಂಶೋಧನೆಯು ಲಿಂಗ ವೈವಿಧ್ಯತೆ, ಮಾನಸಿಕ-ಸಾಮಾಜಿಕ ಒತ್ತಡಗಳು, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಸಾಮಾಜಿಕ ಸಬಲೀಕರಣ ಮತ್ತು ವೈದ್ಯಕೀಯ-ಕಾನೂನು ಮಧ್ಯಸ್ಥಿಕೆಗಳ ಕುರಿತು ರಾಜ್ಯ ಮತ್ತು ರಾಷ್ಟ್ರೀಯ ನೀತಿಗಳ ಕ್ಷೇತ್ರಗಳನ್ನು ವಿವರವಾಗಿ ಪರಿಶೀಲಿಸಿದೆ. ಸಮಾಜದ ಅತ್ಯಂತ ನಿರ್ಲಕ್ಷಿತ ವರ್ಗಗಳ ಅನುಭವಗಳನ್ನು ಇದು ನಿಖರವಾಗಿ ದಾಖಲಿಸುವುದರಿಂದ ಈ ಅಧ್ಯಯನವು ಬಹಳ ಮುಖ್ಯವಾಗಿದೆ.
ಹೊಸ ಪೀಳಿಗೆಗೆ ಮಾದರಿ:
ಸಮಾಜಶಾಸ್ತ್ರ ಕ್ಷೇತ್ರದಲ್ಲಿ ಸಮಕಾಲೀನ ಸಮಸ್ಯೆಗಳನ್ನು ಪರಿಶೀಲಿಸುವ ಶಮ್ನೀರಾ ಅವರ ಅಧ್ಯಯನವು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಅವರ ಶಿಕ್ಷಕರು ಮತ್ತು ಸಹೋದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.




.jpg)
.jpg)
