ಕಾಸರಗೋಡು: ಈಗಾಗಲೇ ಕೇರಳದಲ್ಲಿ ಆರಂಭಗೊಂಡ ಎಸ್‍ಐಆರ್ ಎನ್ಯುಮರೇಷನ್ ಫಾರ್ಮ್ ವಿತರಿಸಿ, ಭರ್ತಿಗೊಳಿಸಿ ಅದನ್ನು ಸ್ವೀಕರಿಸಿ ಅಪ್ಲೋಡ್ ಪೂರ್ತಿಗೊಳಿಸಿರುವುದರಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ 122ನೇ ಬೂತ್‍ನ ಬಿಎಲ್‍ಒ ಮಾವಿನಕಟ್ಟೆ ಸಮೀಪ ನೆಕ್ರಾಜೆ ನಿವಾಸಿ ರಾಜೇಶ್ ಸಿ.ಎಚ್. ಅವರು ಶೇ.100ರಷ್ಟು ಅರ್ಜಿ ವಿತರಿಸಿ ಅಪ್ಲೋಡ್ ಮಾಡಿ ಸಾಧನೆ ಮಾಡಿದ್ದಾರೆ.
122ನೇ ಬೂತ್‍ನಲ್ಲಿ ಕಳೆದ ನ.15ರಿಂದ ಆರಂಭಗೊಂಡ ಅರ್ಜಿ ವಿತರಣೆಯನ್ನು ಬೂತ್‍ನ 845 ಮಂದಿಗೂ ತಲುಪಿಸಿ ಅವರಿಂದ ಅವರಿಂದ ಭರ್ತಿ ಮಾಡಿಸಿ ಬಳಿಕ ಅದನ್ನು ಸಕಾಲದಲ್ಲಿ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಅಪೆÇ್ಲೀಡ್ ಮಾಡಿದ್ದಾರೆ. ಈ ಪೈಕಿ 829 ಎನ್ಯುಮರೇಷನ್ ಫಾರ್ಮ್ ಡಿಜಿಟಿಲೈಸ್ ಮಾಡಿ ವೆರಿಫೈ ಮಾಡಿಕೊಂಡಿದ್ದಾರೆ. ಶೇ.100ರಷ್ಟು ಅರ್ಜಿಯನ್ನು ವಿಲೇವಾರಿ ಮಾಡಿದ್ದಕ್ಕೆ ಅವರನ್ನು ಅವರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ. ಈ ಹಿಂದೆ ಅವರಿಗೆ ಅತ್ಯುತ್ತಮ ಬೂತ್‍ಲೇವಲ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಿಎಲ್‍ಒ ಆದ ರಾಜೇಶ್ ಸಿ.ಎಚ್. ಅವರು ಅಣಂಗೂರಿನಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ.





