ಉಪ್ಪಳ: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ಪೈವಳಿಕೆಯ ಕಾಯರ್‍ಕಟ್ಟೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್. ಯೋಗೀಶ್ ಶರ್ಮ ಬಳ್ಳಪದವು ಅವರಿಂದ ಗಾನ ಮಾಧುರಿ ಕಾರ್ಯಕ್ರಮ ಪ್ರಸ್ತುತಿಗೊಂಡಿತು.
ಪಕ್ಕವಾದ್ಯದಲ್ಲಿ ಧನಶ್ರೀ ಶಬರಾಯ ಮಂಗಳೂರು(ವಯೋಲಿನ್), ಆಶ್ಲೇಷ ಪೆರ್ಲ, ವಿಶ್ವಾಸ್ ಪದ್ಯಾಣ(ಮೃದಂಗ) ಹಾಗೂ ಲವಕುಮಾರ ಐಲ(ತಬಲಾ)ದಲ್ಲಿ ಸಹಕರಿಸಿದರು. ಬಳಿಕ ಸಂಘಟಕರು ಯೋಗೀಶ ಶರ್ಮಾ ಅವರನ್ನು ಅಭಿನಂದಿಸಿದರು.




