ಕುಂಬಳೆ: ಪಂಚಾಯತಿಯ ಕೊಡ್ಯಮೆ ವಾರ್ಡಿನಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಲೀಗ್ ಸಕ್ರಿಯ ಕಾರ್ಯಕರ್ತ ಹಾಗೂ ಸಹಾಯಕರಾದ ಇಬ್ಬರನ್ನು ಪಕ್ಷದ ನೇತೃತ್ವ ಪಕ್ಷದಿಂದ ಉಚ್ಛಾಟಿಸಿದೆ. ಇದರೊಂದಿಗೆ ಲೀಗ್‍ನ ಅಧಿಕೃತ ಅಭ್ಯರ್ಥಿ ಹಾಗೂ ಭಿನ್ನಮತೀಯ ಅಭ್ಯರ್ಥಿ ಮಧ್ಯೆಗಿನ ಸ್ಪರ್ಧೆ ತೀವ್ರಗೊಂಡಿದೆ. ಬಿಜೆಪಿ ಹಾಗೂ ಸಿಪಿಎಂನ ಅಭ್ಯರ್ಥಿಗಳು ಇಲ್ಲಿ ಸ್ಪರ್ಧಿಸುತ್ತಾರಾದರೂ ಪ್ರಧಾನ ಸ್ಪರ್ಧೆ ಲೀಗ್‍ನ ಅಧಿಕೃತ ಅಭ್ಯರ್ಥಿ ಹಾಗೂ ಭಿನ್ನಮತೀಯ ಅಭ್ಯರ್ಥಿಯ ಮಧ್ಯೆ ಎಂದು ಮತದಾರರು ತಿಳಿಸಿದ್ದಾರೆ. ಆದರೆ ಇದು ಯಾರಿಗೆ ಗುಣಕರವಾಗಲಿದೆ ಎಂಬುದು ಮತ ಎಣಿಕೆ ಬಳಿಕ ನಿರ್ಧಾರವಾಗಲಿದೆ.




