ತಿರುವನಂತಪುರ: ಎರಡು ದಿನಗಳ ಕೊರೋನಾ ರೋಗನಿರೋಧಕಕ್ಕೆ ಕ್ಯೆಗೊಂಡ ನಿಯಂತ್ರಣಗಳಿಗೆ ರಾಜ್ಯಾದ್ಯಂತ ಸಹಾನುಭೂತಿಯ ಪ್ರತಿಕ್ರಿಯೆ ಈವರೆಗೆ ಲಭ್ಯವಾಗಿದೆ. ಪೊಲೀಸ್ ಇಲಾಖೆಯ ಪ್ರಕಾರ, ಜನರು ಸಾಮಾನ್ಯವಾಗಿ ರಾಜ್ಯದ ಮಹಾನಗರಗಳು ಸೇರಿದಂತೆ ಒಳನಾಡುಗಳಲ್ಲಿ ತುರ್ತು ಅಗತ್ಯಗಳಿಗೆ ಮಾತ್ರ ಮನೆಯಿಂದ ಹೊರತರಳಬೇಕು ಎಂಬ ಸಲಹೆಗೆ ಬೆಂಬಲ ವ್ಯಕ್ತವಾಗಿದೆ.
ಇಂದು ನಡೆಯಲಿರುವ ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಮುಂದೂಡದ ಕಾರಣ, ಕೆಎಸ್ಆರ್ಟಿಸಿ ಬಸ್ ಸೇವೆ ಒದಗಿಸುತ್ತಿದೆ. ಕೆಎಸ್‌ಆರ್‌ಟಿಸಿ 60 ಶೇ. ಸೇವೆಯನ್ನು ನೀಡಲು ನಿರ್ಧರಿಸಿದೆ. ಇಂದು ಬೆಳಿಗ್ಗೆ ಆಟೋ ಟ್ಯಾಕ್ಸಿ ಚಾಲಕರು ತುರ್ತು ವಿಷಯಗಳಿಗೆ ತೆರಳುವವರಿಗೆ ಮಾತ್ರ ಸೇವೆಯೊದಗಿಸಲು ಅನುಮತಿಸಲಾಗಿದೆ.
ಇಂದು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಿಗೆ ರಜಾದಿನವಾಗಿದೆ. ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನಿರ್ಬಂಧಗಳೊಂದಿಗೆ ಪ್ರಯಾಣಿಸಲು ಅವಕಾಶ ನೀಡುವ ನಿರ್ಧಾರವನ್ನೂ ಅನುಸರಿಸಲಾಗಿದೆ. ಸಂಸ್ಥೆಗಳ ಗುರುತಿನ ಚೀಟಿ ಕಡ್ಡಾಯವಾಗಿರುವುದರಿಂದ ಪೊಲೀಸರು ತನಿಖೆಗೊಳಪಡಿಸಿ ತೆರಳಲು ಅನುಮತಿ ನೀಡುತ್ತಿದ್ದಾರೆ.

