ತಿರುವನಂತಪುರ: ಸಚಿವ ಕೆ ರಾಧಾಕೃಷ್ಣನ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಮಾಜಿ ಸಂಸದ ಎ ಸಂಪತ್ ಅವರನ್ನು ಸಿಪಿಎಂ ನೇಮಿಸಿದೆ.
ನಿನ್ನೆ ನಡೆದ ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಟ್ಟಿಂಗಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಂಪತ್ ಅವರನ್ನು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಈ ಮೂಲಕ ನೇಮಿಸಲಾಯಿತು.
ದೆಹಲಿಯ ಕೇರಳ ಸರ್ಕಾರದ ಪ್ರತಿನಿಧಿ ಅಧಿಕಾರಿಯಾಗಿ ಅವರ ಅವಧಿಯಲ್ಲಿ ಸಂಪತ್ 22,74,346 ರೂ. ವೇತನ ಪಡೆದಿದ್ದರೆಂದು ಮೊನ್ನೆಯಷ್ಟೇ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿತ್ತು. ವೇತನದಲ್ಲಿ 14,88,244, ಪ್ರಯಾಣ ವೆಚ್ಚದಲ್ಲಿ 8,51,952 ರೂ. ಮತ್ತು ವೈದ್ಯಕೀಯ ಭತ್ಯೆಯಲ್ಲಿ 4150 ರೂ.ಗಳನ್ನು ಪಡೆಯಲಾಗಿದೆ.
ಈ ಮೊತ್ತವನ್ನು 19 ತಿಂಗಳಲ್ಲಿ ಸ್ವೀಕರಿಸಲಾಗಿದೆ. ವಿವಾದದ ಮಧ್ಯೆ ಹೊಸ ನೇಮಕಾತಿ ಘೋಷಣೆಯಾಗಿದೆ.





