HEALTH TIPS

ದೇಶದಲ್ಲೇ ಮೊದಲು: ನವದೆಹಲಿಯಲ್ಲಿ ಕೊರೊನಾವೈರಸ್ ನಿಯಂತ್ರಿಸಲು 4 ಬಣ್ಣಗಳ ನಿಯಮ!

           ನವದೆಹಲಿ: ಕೊರೊನಾವೈರಸ್ ಮೂರನೇ ಅಲೆಯಿಂದ ರಕ್ಷಿಸಿಕೊಳ್ಳುವುದಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ವಿಭಿನ್ನ ಕಾರ್ಯಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ಕೊವಿಡ್-19 ಸೋಂಕು ನಿಯಂತ್ರಿಸುವ ಉದ್ದೇಶದಿಂದ ಇಂಥದೊಂದು ಯೋಜನೆಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಪಟ್ಟಿಗೆ ದೆಹಲಿ ಸೇರಿಕೊಂಡಿದೆ.


         ನವದೆಹಲಿಯಲ್ಲಿ ಕೊವಿಡ್-19 ತೀವ್ರತೆಯನ್ನು ಪ್ರತ್ಯೇಕ ಮಾನದಂಡಗಳ ಮೂಲಕ ಗುರುತಿಸುವ ಉದ್ದೇಶದಿಂದ ನಾಲ್ಕು ಬಣ್ಣಗಳನ್ನು ಸಂಕೇತದ ಮೇರೆಗೆ ಹೊಸ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ಹಳದಿ, ಎರಡನೇ ಹಂತದಲ್ಲಿ ಶುದ್ಧ ಕೋಮ್ರಾ ಬಣ್ಣ(ಅಂಬರ್), ಮೂರನೇ ಹಂತ ಕಿತ್ತಳೆಯಾದರೆ ನಾಲ್ಕನೇ ಹಂತವನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತಿದೆ. ರಾಜ್ಯ ಸರ್ಕಾರ ಭಾನುವಾರ ಬಿಡುಗಡೆಗೊಳಿಸಿರುವ ಆದೇಶದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ದೇಶದಲ್ಲೇ ಇಂಥದೊಂದು ವಿನೂತನ ಪ್ರಯತ್ನವನ್ನು ಆರಂಭಿಸಿದ ರಾಜ್ಯಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ಅಗ್ರಸ್ಥಾನದಲ್ಲಿ ನಿಂತಿದೆ.

           ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ರೂಪಿಸಿರುವ ಕೊವಿಡ್-19 ನಿಯಂತ್ರಣ ಕಾರ್ಯ ಯೋಜನೆ ಹೇಗಿದೆ. ಅದರ ರೂಪುರೇಷೆಗಳು ಹೇಗಿವೆ. ಕೊರೊನಾವೈರಸ್ ನಿಯಂತ್ರಿಸಲು ಈ ಕ್ರಮಗಳು ಯಾವ ನಿಟ್ಟಿನಲ್ಲಿ ಉಪಯುಕ್ತವಾಗಲಿವೆ ಎಂಬುದನ್ನು ಮುಂದೆ ಓದಿ ತಿಳಿಯೋಣ.

                     ಮೊದಲ ಹಂತ ಎಂದರೆ ಹಳದಿ ಬಣ್ಣ:

* ರಾಜ್ಯ ಸರ್ಕಾರವು ರೂಪಿಸಿರುವ ಕೊವಿಡ್-19 ಕಾರ್ಯ ಯೋಜನೆಯ ಪ್ರಕಾರ ಮೊದಲ ಹಂತವನ್ನು ಹಳದಿ ಬಣ್ಣದಿಂದ ಗುರುತಿಸಲಾಗುತ್ತದೆ. ದೆಹಲಿಯಲ್ಲಿ ಶೇ.0.5ರಷ್ಟು ಪಾಸಿಟಿವಿಟಿ ದರವನ್ನು ಹೊಂದಿರುವ ವಾರದಲ್ಲಿ 1500ಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸುವ ಅಥವಾ ಒಂದು ವಾರದಲ್ಲಿ 500ಕ್ಕಿಂತ ಕಡಿಮೆ ಆಕ್ಸಿಜನ್ ಹಾಸಿಗೆಗಳು ಬಳಕೆಯಾಗುವ ಪ್ರದೇಶವನ್ನು ಹಳದಿ ಬಣ್ಣದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ.

* ಹಳದಿ ಅಲರ್ಟ್ ವ್ಯಾಪ್ತಿಯ ಪ್ರದೇಶಗಳಲ್ಲಿ ಸಮ-ಬೆಸ ಆಧಾರದ ಮೇಲೆ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೂ ಅಂಗಡಿ ಮುಂಗಟ್ಟುಗಳ ಕಾರ್ಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ.

* ಶೇ.50ರಷ್ಟು ಪ್ರಯಾಣಿಕರನ್ನು ಹೊಂದಿರುವಂತೆ ಮೆಟ್ರೋ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

* ಶೇ.50ರಷ್ಟು ಪ್ರಯಾಣಿಕರನ್ನು ಹೊಂದಿರುವಂತೆ ಬಸ್ ಸಂಚಾರಕ್ಕೂ ಸಹ ಅನುಮತಿ ನೀಡಲಾಗಿರುತ್ತದೆ.

* ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ರಾತ್ರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿರುತ್ತದೆ.

* ಹಳದಿ ಬಣ್ಣದ ವ್ಯಾಪ್ತಿಯಲ್ಲಿರುವ ರೆಸ್ಟೋರೆಂಟ್ ಗಳು ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೂ ತೆರೆಯಲು ಅವಕಾಶ ನೀಡಲಾಗಿದ್ದು, ಶೇ.50ರಷ್ಟು ಸಾಮರ್ಥ್ಯದಲ್ಲಿ ಅತಿಥಿಗಳಿಗೆ ಮಾತ್ರ ಅನುಮತಿಸಲಾಗದೆ.

                  ಎರಡನೇ ಹಂತ ಎಂದರೆ ಕೋಮ್ರಾ ಬಣ್ಣ(ಹಳದಿ ಮತ್ತು ಕಿತ್ತಳೆ ಮಿಶ್ರಿತ):

* ಎರಡನೇ ಹಂತವನ್ನು ಕೋಮ್ರಾ ಬಣ್ಣದಿಂದ ಗುರುತಿಸಲಾಗಿದೆ. ಶೇ.1ರಷ್ಟು ಪಾಸಿಟಿವಿಟಿ ದರವನ್ನು ಹೊಂದಿರುವ ಅಥವಾ ವಾರದಲ್ಲಿ 3500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸುವ ಇಲ್ಲವೇ 700ಕ್ಕೂ ಹೆಚ್ಚು ಆಮ್ಲಜನಕದ ಸಿಲಿಂಡರ್ ಬಳಕೆಯಾಗುವ ಪ್ರದೇಶಗಳು ಈ ವ್ಯಾಪ್ತಿಗೆ ಸೇರುತ್ತವೆ.

* ಎರಡನೇ ಹಂತದಲ್ಲಿ ಗುರುತಿಸಿಕೊಂಡ ಪ್ರದೇಶಗಳಲ್ಲಿ ರಾತ್ರಿ ನಿಷೇಧಾಜ್ಞೆಯ ಜೊತೆಗೆ ವಾರಾಂತ್ಯದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತದೆ.

* ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೂ ಸಮ-ಬೆಸ ಆಧಾರದ ಮೇಲೆ ಅಂಗಡಿ ಮುಂಗಟ್ಟುಗಳ ಕಾರ್ಯ ಚಟುವಟಿಕೆಗೆ ಅವಕಾಶ ನೀಡಲಾಗಿದೆ.

* ಶೇ.33ರಷ್ಟು ಪ್ರಯಾಣಿಕರನ್ನು ಹೊಂದಿರುವಂತೆ ಮೆಟ್ರೋ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

* ಪ್ರಯಾಣಕ್ಕೆ ಅನುಮತಿ ಪಡೆದಿರುವ ಪ್ರಯಾಣಿಕರನ್ನು ಒಳಗೊಂಡಂತೆ ಶೇ.50ರಷ್ಟು ಸಾಮರ್ಥ್ಯದಲ್ಲಿ ಬಸ್ ಸಂಚಾರಕ್ಕೆ ಅವಕಾಶ

* ಬಾರ್ ಮತ್ತು ರೆಸ್ಟೋರೆಂಟ್ ಬಂದ್ ಆಗಲಿದ್ದು, ಹೋಟೆಲ್ ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ.

                      ಮೂರನೇ ಹಂತ ಎಂದರೆ ಕಿತ್ತಳೆ ಬಣ್ಣ:

* ನವದೆಹಲಿಯ ಯಾವುದೇ ಪ್ರದೇಶದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.2ರಷ್ಟಿದ್ದರೆ, ವಾರದಲ್ಲಿ 9,000ಕ್ಕಿಂತ ಹೆಚ್ಚು ಸೋಂಕಿತ ಪ್ರಕಣಗಳು ವರದಿಯಾಗುತ್ತಿದ್ದರೆ ಅಥವಾ ವಾರದಲ್ಲಿ 1000ಕ್ಕಿಂತ ಹೆಚ್ಚು ಆಕ್ಸಿಜನ್ ಹಾಸಿಗೆಗಳು ಬಳಕೆಯಾಗುತ್ತಿದ್ದರೆ ಅಂಥ ಪ್ರದೇಶವನ್ನು ಮೂರನೇ ಹಂತದ ವ್ಯಾಪ್ತಿಗೆ ಸೇರಿಸಲಾಗಿದೆ. ಮೂರನೇ ಹಂತದ ವ್ಯಾಪ್ತಿಯನ್ನು ಕಿತ್ತಳೆ ಬಣ್ಣ ಎಂದು ಗುರುತಿಸಲಾಗಿದೆ.

* ಒಬ್ಬರೇ ವ್ಯಾಪಾರಿಗಳಿರುವ ಅಂಗಡಿ ಹೊರತುಪಡಿಸಿ ದೊಡ್ಡ ಪ್ರಮಾಣದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್.

* ಮೆಟ್ರೋ ರೈಲುಗಳ ಸಂಚಾರಕ್ಕೆ ನಿರ್ಬಂಧ.

* ಪ್ರಯಾಣಕ್ಕೆ ಅನುಮತಿ ಪಡೆದುಕೊಂಡಿರುವ ಪ್ರಯಾಣಿಕರನ್ನು ಒಳಗೊಂಡಂತೆ ಶೇ.50ರಷ್ಟು ಸಾಮರ್ಥ್ಯದಲ್ಲಿ ಬಸ್ ಸಂಚಾರಕ್ಕೆ ಅನುಮತಿ.

* ಕಾಮಗಾರಿ ಸ್ಥಳದಲ್ಲೇ ವಾಸವಿರುವ ಕಾರ್ಮಿಕರಿಂದ ಮಾತ್ರ ನಿರ್ಮಾಣ ಕಾಮಗಾರಿಗಳ ಚಟುವಟಿಕೆಗಳಿಗೆ ಅವಕಾಶ

* ಅಗತ್ಯ ವಸ್ತುಗಳ ನಿರ್ಮಾಣ ಮಾಡುತ್ತಿರುವ ಕೈಗಾರಿಕೆಗಳ ಕಾರ್ಯಚಟುವಟಿಕೆಗಳಿಗೆ ಮಾತ್ರ ಅನುಮತಿ

* ರಾತ್ರಿ ನಿಷೇಧಾಜ್ಞೆ ಮತ್ತು ವಾರಾಂತ್ಯದ ನಿಷೇಧಾಜ್ಞೆ ಮುಂದುವರಿಕೆ

ನಾಲ್ಕನೇ ಹಂತ ಎಂದರೆ ಕೆಂಪು ಬಣ್ಣ:

                 * ಅಪಾಯದ ಸಂಕೇತವನ್ನು ತೋರಿಸುವ ಕೆಂಪು ಬಣ್ಣವನ್ನು ನಾಲ್ಕನೇ ಹಂತ ಎಂದು ಗುರುತಿಸಲಾಗುತ್ತಿದೆ. ಈ ಹಂತದಲ್ಲಿ ಶೇ.5ರಷ್ಟು ಪಾಸಿಟಿವಿಟಿ ದರವನ್ನು ಹೊಂದಿರುವ, ವಾರದಲ್ಲಿ 16000ಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸುವ ಅಥವಾ ವಾರದಲ್ಲಿ 3000ಕ್ಕಿಂತ ಹೆಚ್ಚು ಆಮ್ಲಜನಕ ಸಹಿತ ಹಾಸಿಗೆಗಳು ಬಳಕೆ ಆಗುತ್ತಿರುವ ಪ್ರದೇಶವನ್ನು ಗುರುತಿಸಲಾಗುತ್ತಿದೆ.

* ಮೂರನೇ ಹಂತದಲ್ಲಿ ಗುರುತಿಸಿರುವ ಎಲ್ಲ ನಿರ್ಬಂಧಗಳನ್ನು ಮುಂದುವರಿಸಲಾಗುವುದು

* ಈ ಪ್ರದೇಶದಲ್ಲಿ ಸಂಪೂರ್ಣ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದು

* ಶಾಲಾ-ಕಾಲೇಜು ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳು ಬಂದ್. ಚಿತ್ರ ಮಂದಿರ, ಬಾಂಕ್ವೆಂಟ್ ಹಾಲ್, ಆಡಿಟೋರಿಮ್, ಕ್ಷೌರದ ಅಂಗಡಿ, ಸೆಲೂನ್ ಶಾಪ್, ಸ್ಪಾ, ಜಿಮ್ ಮತ್ತು ಯೋಗ ಕೇಂದ್ರಗಳನ್ನು ಮುಚ್ಚಲಾಗುವುದು.

* ಧಾರ್ಮಿಕ ಕೇಂದ್ರಗಳನ್ನು ತೆರೆಯುವುದಕ್ಕೆ ಅನುಮತಿ ನೀಡಿದೆಯಾದರೂ, ಭಕ್ತಾಧಿಗಳಿಗೆ ಯಾವುದೇ ರೀತಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.

* ಯಾವುದೇ ರೀತಿ ಹೆಚ್ಚು ಜನರನ್ನು ಸೇರಿಸುವ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅವಕಾಶ ಇರುವುದಿಲ್ಲ.

* ಮದುವೆ ಮತ್ತು ಅಂತ್ಯ ಸಂಸ್ಕಾರದಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರ ಜನರನ್ನು ಸೇರಿಸುವುದಕ್ಕೆ ಅನುಮತಿ ನೀಡಲಾಗಿದೆ.

                          ನದೆಹಲಿಯಲ್ಲಿ ಕೊರೊನಾವೈರಸ್ ಏರಿಳಿತ:

      ನವದೆಹಲಿಯಲ್ಲಿ ಭಾನುವಾರ ಒಂದು ದಿನದಲ್ಲಿ 66 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 95 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಈ ಅವಧಿಯಲ್ಲಿ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿಲ್ಲ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ನವದೆಹಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 14,36,761ಕ್ಕೆ ಏರಿಕೆಯಾಗಿದೆ. ಈವರೆಗೂ 14,11,159 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 536 ಸಕ್ರಿಯ ಪ್ರಕರಣಗಳಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries