HEALTH TIPS

ಡೆಲ್ಟಾ ಬಳಿಕ ಮತ್ತೊಂದು ರೂಪಾಂತರಿ; ಇದು ಲಸಿಕೆಗೂ ತಗ್ಗದ ಹೊಸ ಪ್ರಭೇದ!

               ನವದೆಹಲಿ: ಕೋವಿಡ್​ನ ಹೊಸ ಪ್ರಭೇದ 'ಸಿ.1.2' ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಈ ರೂಪಾಂತರಿ ಕ್ಷಿಪ್ರವಾಗಿ ಹರಡುತ್ತದೆ ಹಾಗೂ ಯಾವುದೇ ಲಸಿಕೆ ಇದರ ವಿರುದ್ಧ ಪರಿಣಾಮಕಾರಿ ಅಲ್ಲ ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿದೆ. 'ಸಿ.1.2' ಪ್ರಭೇದವು ಕಳೆದ ಮೇ ತಿಂಗಳಲ್ಲಿ ಕಾಣಿಸಿದೆ. ಚೀನಾ, ಕಾಂಗೋ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಪೋರ್ಚುಗಲ್, ಸ್ವಿಜರ್​ಲೆಂಡ್​ಗಳಲ್ಲಿ ಆಗಸ್ಟ್ ನಲ್ಲಿ ವ್ಯಾಪಕವಾಗಿ ಕಂಡು ಬಂದಿದೆ ಎಂದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆ (ಎನ್​ಐಸಿಡಿ) ಮತ್ತು ಕ್ವಾಜುಲು-ನಟಾಲ್ ಸಂಶೋಧನಾ ನಾವೀನ್ಯತೆ ಮತ್ತು ಸಿಕ್ವೇನ್ಸಿಂಗ್ ವೇದಿಕೆ (ಕೆಆರ್​ಐಎಸ್​ಪಿ) ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಅಲೆ ವೇಳೆ ಕಂಡು ಬಂದ 'ಸಿ.1' ಪ್ರಭೇದವು ಶ್ವಾಸಕೋಶವನ್ನು ಹಾಳು ಮಾಡುವಂತಾಗಿದ್ದು, ಇದೇ ರೀತಿಯ ಸಮಸ್ಯೆಯನ್ನು 'ಸಿ.1.2' ಪ್ರಭೇದವು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

           ಅಮೆರಿಕದಲ್ಲಿ ಮಕ್ಕಳಿಗೆ ಲಸಿಕೆ: 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಅಕ್ಟೋಬರ್ ವೇಳೆಗೆ ಲಸಿಕೆ ಸಿದ್ಧವಾಗಲಿದೆ ಎಂದು ಅಮೆರಿಕದ ಫೈಜರ್ ಸಂಸ್ಥೆ ತಿಳಿಸಿದೆ. ಅಮೆರಿಕದಲ್ಲಿ ಕರೊನಾ ತಡೆಗೆ ಮೂರು ಲಸಿಕೆಗಳನ್ನು ಬಳಸಲಾಗುತ್ತಿದೆ. ಆದರೆ, 12 ವರ್ಷ ಮತ್ತು ನಂತರದವರ ತುರ್ತು ಬಳಕೆಗೆ ಫೈಜರ್ ಲಸಿಕೆ ಮಾತ್ರ ಅನುಮತಿ ಸಿಕ್ಕಿದೆ.

            ಫೈಜರ್ ಲಸಿಕೆ ಪಡೆದ ವ್ಯಕ್ತಿ ಸಾವು: ಅಮೆರಿಕದ ಕಂಪನಿ ಅಭಿವೃದ್ಧಿ ಪಡಿಸಿರುವ ಫೈಜರ್ ಲಸಿಕೆ ಪಡೆದ ಮಹಿಳೆಯೊಬ್ಬರು ನ್ಯೂಜಿಲೆಂಡ್​ನಲ್ಲಿ ಸಾವನ್ನಪ್ಪಿದ್ದಾರೆ. ಇದು ಫೈಜರ್ ಸಂಬಂಧಿತ ಮೊದಲ ಸಾವು ಆಗಿದೆ ಎಂದು ನ್ಯೂಜಿಲೆಂಡ್​ನ ಕೋವಿಡ್-19 ಲಸಿಕೆ ಸುರಕ್ಷತೆಯ ನಿಗಾ ಮಂಡಳಿ ಹೇಳಿದೆ. ಮಹಿಳೆಗೆ ಅನ್ಯವ್ಯಾಧಿಗಳಿತ್ತು. ಹೀಗಾಗಿ ಲಸಿಕೆ ವ್ಯತಿರಿಕ್ತ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

  •             ಆರ್​ಟಿ-ಪಿಸಿಆರ್ ಪರೀಕ್ಷೆಯನ್ನು ಶೀಘ್ರದಲ್ಲೇ ಕೋ-ವಿನ್ ಆಪ್​ಗೆ ಲಿಂಕ್ ಮಾಡಲಾಗುವುದು. ಇದರಿಂದ ಡಿಜಿಟಲ್ ಸರ್ಟಿಫಿಕೇಟ್ ಪಡೆಯುವುದು ಸುಲಭ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
  •            ಕೋವಿಡ್ ಮೂರನೇ ಅಲೆಯು ಅಕ್ಟೋಬರ್-ನವೆಂಬರ್ ವೇಳೆಯಲ್ಲಿ ಗರಿಷ್ಠ ಮಟ್ಟಕ್ಕೆ ಮುಟ್ಟಲಿದೆ ಎಂದು ಕಾನ್ಪುರ ಐಐಟಿ ವಿಜ್ಞಾನಿಗಳು ಅಂದಾಜಿಸಿದ್ದಾರೆ.

          42,909 ಹೊಸ ಪ್ರಕರಣ: ದೇಶದಲ್ಲಿ ಸೋಮವಾರ 42,909 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಭಾನುವಾರಕ್ಕೆ ಹೋಲಿಸಿದರೆ ಶೇ. 4.7ರಷ್ಟು ಕೇಸ್ ಕಡಿಮೆ ಆಗಿದೆ. ಹೊಸದಾಗಿ 380 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಪ್ರಕರಣ ಗಳಲ್ಲಿ ಸಕ್ರಿಯ ಕೇಸ್​ಗಳ ಪ್ರಮಾಣ ಶೇ. 1.15 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳದಲ್ಲಿ 29,836 ದೈನಿಕ ಪ್ರಕರಣ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.20 ಇದೆ. 75 ಜನರು ಸಾವನ್ನಪ್ಪಿದ್ದು, ಒಟ್ಟು ಸಂಖ್ಯೆ 20,541ಕ್ಕೆ ಮುಟ್ಟಿದೆ.

                            ಅಮೆರಿಕದ ಮಾಡರ್ನಾ ಲಸಿಕೆ ಕಲಬೆರಕೆ

          ಅಮೆರಿಕದ ಮಾಡರ್ನಾ ಇಂಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಲಸಿಕೆ ಕಲಬೆರಕೆಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ಮತ್ತೆ 10 ಲಕ್ಷ ಡೋಸ್ ಲಸಿಕೆಯನ್ನು ಸಾರ್ವಜನಿಕ ವಿತರಣೆಯಿಂದ ಹಿಂಪಡೆದಿದೆ. ಇದರಿಂದ ಒಟ್ಟಾರೆ 26 ಲಕ್ಷ ಡೋಸ್ ಹಿಂಪಡೆದಂತೆ ಆಗಿದೆ. ಔಷಧದಲ್ಲಿ ಅನ್ಯ ರಾಸಾಯನಿಕ ಸೇರಿರುವುದರಿಂದ ಇದನ್ನು ಪಡೆದವರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮಾರ್ಡನಾ ಲಸಿಕೆ ಕಲಬೆರಕೆ ಆಗಿರುವುದು ಪತ್ತೆ ಆಗುತ್ತಿದ್ದಂತೆ 863 ಲಸಿಕಾ ಕೇಂದ್ರ ಗಳಿಗೆ ರವಾನೆ ಆಗಬೇಕಿದ್ದ 16.30 ಲಕ್ಷ ಡೋಸ್​ಗಳನ್ನು ಸರ್ಕಾರ ತಡೆಹಿಡಿದೆ. ಈ ಬ್ಯಾಚ್ ಲಸಿಕೆಯನ್ನು 5 ಲಕ್ಷ ಜನರು ಪಡೆದಿದ್ದಾರೆ ಎನ್ನಲಾಗಿದೆ.

          ಪ್ರತಿಕಾಯ ನಶಿಸಿದರೂ ರಕ್ಷಣಾ ವ್ಯವಸ್ಥೆ ರೂಪಿತ: ಲಸಿಕೆಯಿಂದ ಉತ್ಪಾದನೆಗೊಂಡ ಕೋವಿಡ್ ಸೋಂಕನ್ನು ತಡೆಯುವಂತಹ ಪ್ರತಿಕಾಯಗಳು ಕಾಲಕ್ರಮೇಣ ನಶಿಸಿದರೂ ಅವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದೇಹದಲ್ಲಿ ರೂಪಿಸಿರುತ್ತವೆ. ಆದರೆ, ಈ ರಕ್ಷಣಾ ವ್ಯವಸ್ಥೆಗೆ ಬೂಸ್ಟರ್​ಗಳ ಅವಶ್ಯತೆ ಇಲ್ಲ ಎಂದು 'ಎಂಆರ್​ಎನ್​ಎ' ಆಧರಿತ ಲಸಿಕೆಯನ್ನು ಅಭಿವೃದ್ಧಿ ಪಡಿಸಿರುವ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧನೆಯೊಂದು ತಿಳಿಸಿದೆ. 'ಎಂಆರ್​ಎನ್​ಎ' ಲಸಿಕೆಯನ್ನು ಪಡೆದ 61 ಜನರ ಮೇಲೆ ಆರು ತಿಂಗಳು ಅಧ್ಯಯನ ನಡೆಸಿರುವ ವಿವಿಯ ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸನ್, ಲಸಿಕೆಯಿಂದ ಉತ್ಪತ್ತಿಯಾದ ಪ್ರತಿಕಾಯಗಳು ಕ್ರಮೇಣ ನಾಶಹೊಂದುತ್ತವೆ. ಆದರೆ, ನಶಿಸುವುದಕ್ಕೂ ಮುನ್ನ ದೇಹದಲ್ಲಿ ಸಾರ್ಸ್-ಕೋವ್-2 ಸೋಂಕಿಗೆ ರಕ್ಷಣೆ ನೀಡುವಂತಹ ಒಂದು ಕವಚವನ್ನು ನಿರ್ವಿುಸಿರುತ್ತವೆ. ಈ ಕವಚವು ಬಿ ಮತ್ತು ಟಿ ಜೀವಕೋಶಗಳಲ್ಲಿ ಸುಪ್ತವಾಗಿದ್ದು, ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ದೇಹಕ್ಕೆ ರಕ್ಷಣೆ ನೀಡಲು ಸಕ್ರಿಯವಾಗುತ್ತವೆ ಸಂಶೋಧಕರ ತಂಡ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries