HEALTH TIPS

ಸೋಲಾರ್ ಪಾರ್ಕ್ ನಿಂದ ಉಂಟಾಗುತ್ತಿರುವ ತಾಪಮಾನ ಹೆಚ್ಚಳದ ಬಗ್ಗೆ ಅಧ್ಯಯನ ಮಾಡುತ್ತಿರುವೆ: ಕರ್ನಾಟಕ ಇಂಧನ ಸಚಿವ ಸುನಿಲ್ ಕುಮಾರ್

       ಬೆಂಗಳೂರು: ಪಾವಗಡ ತಾಲೂಕಿನಲ್ಲಿರುವ ಭಾರತದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ತಾಪಮಾನ ಗಣನೀಯವಾಗಿ ಹೆಚ್ಚಳವಾಗುತ್ತಿರುವ ವಿಷಯ ತಜ್ಞರು ಈ ಯೋಜನೆಯ ಬಗ್ಗೆ ವ್ಯಕ್ತಪಡಿಸುತ್ತಿರುವ ಆತಂಕಗಳ ಪೈಕಿ ಒಂದಾಗಿದೆ. 

         ಕರ್ನಾಟಕ  ರಾಜ್ಯ ಸರ್ಕಾರದ ಇಂಧನ ಸಚಿವ ವಿ ಸುನಿಲ್ ಕುಮಾರ್  ಈ ಕುರಿತ ಸರಣಿ ವರದಿಗಳನ್ನು ಗಮನಿಸಿರುವುದಾಗಿ ಹೇಳಿದ್ದು ತಾಪಮಾನ ಹೆಚ್ಚಳಕ್ಕೆ ಕಾರಣವಾದ ಸ್ಪಷ್ಟ ಅಂಶಗಳನ್ನು ತಿಳಿದುಕೊಳ್ಳುವಂತೆ  ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ಗೆ ಸೂಚನೆ ನೀಡಿದ್ದಾರೆ. 

      ಆಗಸ್ಟ್ ತಿಂಗಳಲ್ಲಿ ಇಂಧನ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡಿರುವ ಸುನಿಲ್ ಕುಮಾರ್, ಟಿಎನ್ ಐಇ ಜೊತೆ ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಳದ ಪ್ರಸ್ತಾವನೆ ಬಗ್ಗೆ  ಮಾತನಾಡಿದ್ದು, ಸೋಲಾರ್ ಪಾರ್ಕ್ ಗಳ ಹತ್ತಿರ ಜೀವಿಸುತ್ತಿರುವ ಮಂದಿಯ ಆತಂಕಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವುದರ ಭರವಸೆ ನೀಡಿದ್ದಾರೆ. 

     ಛಾವಣಿಯಲ್ಲಿ ಸೋಲಾರ್ ಅಳವಡಿಕೆ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆಯ ಸ್ಥಿತಿ ಏನು?

        ಕರ್ನಾಟಕ ರಾಜ್ಯ ಸರ್ಕಾರ ರೂಫ್ ಟಾಪ್ ಸೋಲಾರ್ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಯ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲು ಉತ್ಸುಕವಾಗಿದೆ. ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ನ್ನು ಅಳವಡಿಕೆ ಮಾಡಲಾಗುತ್ತದೆ, ಇದೇ ಮಾದರಿ ಅನುಸರಿಸಲು ಜನಸಾಮಾನ್ಯರಿಗೂ ಉತ್ತೆಜನ ನೀಡಲಾಗುವುದು. ಬೆಸ್ಕಾಮ್ ಹಾಗೂ ಕೆಆರ್ ಇಡಿಎಲ್ ಎರಡೂ ಈ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಜೊತೆಯಾಗಿ ಕೆಲಸ ಮಾಡಲಿವೆ. ಈ ಮೂಲಕ 300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಈ ಯೋಜನೆ ಸಂಬಂಧ ಸಾರ್ವಜನಿಕರಿಂದ ಅರ್ಜಿಗೆ ಸರ್ಕಾರ ಆಹ್ವಾನ ನೀಡಿದೆ. 
     ಪಾವಗಡದ ತಾಲೂಕಿನ ಹಲವು ಗ್ರಾಮಗಳಲ್ಲಿ ತಾಪಮಾನ ಹೆಚ್ಚಳವಾಗಿದೆ. ಇದಕ್ಕೆ ಸೋಲಾರ್ ಪಾರ್ಕ್ ಕಾರಣವಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಗಮನ ಹರಿಸಿದೆಯಾ? ಹಾಗೂ ಈ ಸಂಬಂಧ ಏನು ಮಾಡಲಾಗುತ್ತಿದೆ?

      ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಈ ಕುರಿತ ಸರಣಿ ವರದಿಗಳನ್ನು ಸರ್ಕಾರ ಗಮನಿಸಿದ್ದು, ತಾಪಮಾನ ಹೆಚ್ಚಳಕ್ಕೆ ಕಾರಣವಾದ ಸ್ಪಷ್ಟ ಅಂಶಗಳನ್ನು ತಿಳಿದುಕೊಳ್ಳುವಂತೆ  ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ಗೆ ಸೂಚನೆ ನೀಡಲಾಗಿದೆ. 

     ತಾಪಮಾನ ಹೆಚ್ಚಳಕ್ಕೆ ಸೋಲಾರ್ ಪಾರ್ಕ್ ಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಗಿಡಗಳು ಇಲ್ಲದೇ ಇರುವುದು ಕಾರಣ ಎನ್ನಲಾಗುತ್ತಿದೆ. ಸರ್ಕಾರ ಸೋಲಾರ್ ಪವರ್ ಯೋಜನೆ ಮುಂದುವರೆಸುವುದಾಗಿ ಹೇಳುತ್ತಿದ್ದು, ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸಲಿದೆ?

       ಸೋಲಾರ್ ಪ್ಯಾನಲ್ ಗಳಿರುವ ಪ್ರದೇಶಗಳಲ್ಲಿ ಕನಿಷ್ಟ ಶೇ.30 ರಷ್ಟು ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವುದಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದೇ ಮಾರ್ಗಸೂಚಿ ಎಲ್ಲಾ ಸೋಲಾರ್ ಪವರ್ ಯೋಜನೆಗಳಲ್ಲೂ ಅಳವಡಿಕೆಯಾಗಬೇಕಿದೆ.

       ಹಾಗಾದರೆ ಪಾವಗಡದಲ್ಲಿ ಏಕೆ ಇದನ್ನು ಪಾಲನೆ ಮಾಡಲಾಗಿಲ್ಲ?

       ಪಾವಗಡದಲ್ಲಿ ನೀರಿನ ಕೊರತೆ ಇದೆ, ಮಳೆ ಕಾದಿಮೆ ಇದೆ. ನೀರಿನ ಪ್ರಮುಖ ಮೂಲಗಳು ಇಲ್ಲ. ಒಪ್ಪಂದದ ಪ್ರಕಾರ ಮರಗಳನ್ನು ಬೆಳೆಸುವಂತೆ ನೋಡಿಕೊಳ್ಳುವ ಕರ್ತವ್ಯ ಇಂಜಿನಿಯರ್ ಗಳದ್ದಾಗಿದೆ. ಈಗ ಪರ್ಯಾಯ ಮಾರ್ಗದ ಮೂಲಕ ಮರಗಳನ್ನು ಬೆಳೆಸಲು ಇರುವ ಮಾರ್ಗಗಳನ್ನು ಪರಿಶೀಲಿಸುವುದಕ್ಕೆ ಅಧಿಕಾರಿಗಳಿಗೆ ನಾನು ನಿರ್ದೇಶನ ನೀಡಿದ್ದೇನೆ.

     ಪಾವಗಡದಲ್ಲಿ ಹಲವು ಗ್ರಾಮಗಳಲ್ಲಿ ಶೌಚಾಲಯ ವ್ಯವಸ್ಥೆಯೂ ಇಲ್ಲ. ಸರ್ಕಾರ ಏಕೆ ಮೂಲಸೌಕರ್ಯ ಒದಗಿಸಿಲ್ಲ?

     ತುಮಕೂರು ಜಿಲ್ಲಾಧಿಕಾರಿಗಳ ಬಳಿ 68 ಕೋಟಿ ರೂಪಾಯಿ ಅನುದಾನವಿದೆ. ಇದನ್ನು ಕಂಪನಿಗಳು ತಮ್ಮ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಉಪಕ್ರಮದ ಅಡಿಯಲ್ಲಿ ನೀಡಿವೆ. ಪಾವಗಡದ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಸೇರಿದಂತೆ ಆದ್ಯತೆಯ ಆಧಾರದಲ್ಲಿ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹೆಚ್ಚಿನ ವಿವರಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಅಂತಿಮಗೊಳಿಸಲಿದೆ. 

      ಯೋಜನೆ ಜಾರಿಗೊಳ್ಳುವಾಗ ಸ್ಥಳೀಯರಿಗೆ ಹಾಗೂ ಮಾಜಿ ನಕ್ಸಲರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಅದು ಇನ್ನೂ ಈಡೇರಿಲ್ಲ...

      ಸೋಲಾರ್ ಕಂಪನಿಗಳು ಸ್ಥಳೀಯರನ್ನು ಹಾಗೂ ಮಾಜಿ ನಕ್ಸಲರನ್ನು ಅವರ ಅರ್ಹತೆಗಳ ಆಧಾರದಲ್ಲಿ ನೌಕರಿಗೆ ನೇಮಿಸಿಕೊಳ್ಳುತ್ತವೆ. ನಾವು ಉದ್ಯೋಗ ನೀಡುವಂತೆ ಕಂಪನಿಗಳಿಗೆ ನಿರ್ದೇಶನ ನೀಡಲು, ಒತ್ತಾಯಿಸಲು ಸಾಧ್ಯವಿಲ್ಲ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries