HEALTH TIPS

ಓಮಿಕ್ರಾನ್ ಮೇಲೆ ನಿಗಾ:WHOಯಿಂದ ಅಧಿಕಾರಿಗಳ ತಂಡ ನಿಯೋಜನೆ

                         ಜೊಹಾನ್ಸ್‌ಬರ್ಗ್ : ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ಮೇಲೆ ನಿಗಾ ಇರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಅಧಿಕಾರಿಗಳ ತಂಡ ನಿಯೋಜನೆ ಮಾಡಿದೆ.: ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ಮೇಲೆ ನಿಗಾ ಇರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಅಧಿಕಾರಿಗಳ ತಂಡ ನಿಯೋಜನೆ ಮಾಡಿದೆ. ಈ ಹೊತ್ತಿನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಮತ್ತು ಸೋಂಕು ಪತ್ತೆಯಾದವರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಯಾರೆಲ್ಲಾ ಬಂದಿದ್ದಾರೆ ಎಂದು ತಿಳಿಯಲು ದೇಶಗಳು ಮುಂದಾಗಿವೆ.

              ಓಮಿಕ್ರಾನ್ ವೈರಸ್ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ದಿನಂಪ್ರತಿ 11 ಸಾವಿರಕ್ಕೂ ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಶರವೇಗದಲ್ಲಿ ಈ ರೂಪಾಂತರಿ ಕೊರೊನಾ ಹಬ್ಬುತ್ತಿದೆ. ಈ ಹಿಂದೆ ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೊರೊನಾ ಪ್ರತಿದಿನ ದೇಶಗಳಲ್ಲಿ ಸರಾಸರಿ 200ರಿಂದ 300ರಷ್ಟು ಪತ್ತೆಯಾಗುತ್ತಿದ್ದರೆ ಈಗ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಿದೆ.
            ಭಾರತದ ಕರ್ನಾಟಕಕ್ಕೆ ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಮೊದಲು ಕಾಲಿಟ್ಟಿರುವ ಓಮಿಕ್ರಾನ್ ರೂಪಾಂತರಿ ಕೊರೋನಾ ವೈರಸ್ ಮೊದಲು ಪತ್ತೆಯಾಗಿರುವುದು ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದಲ್ಲಿ. ಇಂದು ಕನಿಷ್ಠವೆಂದರೂ 24 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದು ಜನತೆಯಲ್ಲಿ ಆತಂಕ ಉಂಟುಮಾಡಿದೆ. WHOನ ಆಫ್ರಿಕಾದ ನಿರ್ದೇಶಕ ಡಾ. ಮತ್ಶಿಡಿಸೊ ಮೊಯೆಟಿ, ಆಫ್ರಿಕಾದಾದ್ಯಂತ ವ್ಯಾಪಿಸುತ್ತಿರುವ ಪ್ರಕರಣಗಳ ಉಲ್ಬಣವನ್ನು ನಿಲ್ಲಿಸಬೇಕು, ಆಗ ಮಾತ್ರ ಓಮಿಕ್ರಾನ್ ನಿಯಂತ್ರಣಕ್ಕೆ ಬರಬಹುದು ಎನ್ನುತ್ತಾರೆ. ಸೋಂಕನ್ನು ಪತ್ತೆಹಚ್ಚಿ ಹರಡುವಿಕೆಯನ್ನು ತಡೆಯಲು ಕಣ್ಗಾವಲು ಮತ್ತು ಸೋಂಕಿತರು ಯಾರ ಸಂಪರ್ಕಕ್ಕೆ ಹೋಗುತ್ತಾರೆ ಎಂದು ಪತ್ತೆಹಚ್ಚಲು ನಾವು ಗೌಟೆಂಗ್ ಪ್ರಾಂತ್ಯದಲ್ಲಿ ತಂಡವನ್ನು ನಿಯೋಜಿಸುತ್ತಿದ್ದೇವೆ ಎಂದು ಆಫ್ರಿಕಾದ WHO ಪ್ರಾದೇಶಿಕ ತುರ್ತು ನಿರ್ದೇಶಕ ಡಾ ಸಲಾಮ್ ಗುಯೆ ತಿಳಿಸಿದ್ದಾರೆ. ತಂಡವು ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್ ಕುರಿತು ಕೆಲಸ ಮಾಡುತ್ತಿದೆ. ದಕ್ಷಿಣ ಆಫ್ರಿಕಾದ ಆರ್ಥಿಕ ಕೇಂದ್ರವಾಗಿರುವ ಗೌಟೆಂಗ್ ಪ್ರಾಂತ್ಯದಲ್ಲಿ ಕಳೆದ ವಾರದಲ್ಲಿ ಸುಮಾರು ಶೇಕಡಾ 80ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ (NICD), ಸುಮಾರು ಶೇಕಡಾ 75ರಷ್ಟು ಕೋವಿಡ್ ಸೋಂಕಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಓಮಿಕ್ರಾನ್ ರೂಪಾಂತರಿ ವರದಿಯಾಗಿದೆ ಎಂದು ಹೇಳುತ್ತದೆ. ನವೆಂಬರ್ ತಿಂಗಳಿನಲ್ಲಿ, ನಾವು 249 ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಮಾಡಿದ್ದೆವು. ಅವುಗಳಲ್ಲಿ 183 ಅನ್ನು ಓಮಿಕ್ರಾನ್ ಎಂದು ಪರಿಗಣಿಸಲಾಗಿದೆ ಎಂದು NICD ಕ್ಲಿನಿಕಲ್ ಮೈಕ್ರೋಬಯಾಲಜಿಸ್ಟ್ ಪ್ರೊಫೆಸರ್ ಆನ್ ವಾನ್ ಗಾಟ್ಬರ್ಗ್ ಹೇಳಿದ್ದಾರೆ. ಅತೀ ವೇಗವಾಗಿ ರೂಪಾಂತರಗೊಂಡ ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡುವ ಸಾಧ್ಯತೆಯಿದೆ. ಕೆಲವು ದೇಶಗಳಿಗೆ ಇದು ಹೆಚ್ಚು ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಓಮಿಕ್ರಾನ್ ಸೋಂಕಿನಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಆದ್ರೆ ಲಸಿಕೆ ಇದರ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆಯೇ, ಇದು ನಮಗೆ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಅರಿಯಲು ಸಂಶೋಧನೆಯ ಅಗತ್ಯವಿದೆ ಎಂದು ಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ವಾರ ಮೊದಲ ಓಮಿಕ್ರಾನ್​​ ಪ್ರಕರಣ ವರದಿಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿಶ್ವ ಸಂಸ್ಥೆಯು ತನ್ನ 194 ಸದಸ್ಯ ರಾಷ್ಟ್ರಗಳಿಗೆ ವ್ಯಾಕ್ಸಿನೇಷನ್​​ನನ್ನು ವೇಗಗೊಳಿಸಲು ಮತ್ತು ಆರೋಗ್ಯ ಸೇವೆಗಳನ್ನು ನೀಡಲು ಯೋಜನೆಗಳನ್ನು ಜಾರಿಗೊಳಿಸಿ ಎಂದು ಒತ್ತಾಯಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries