ನವದೆಹಲಿ: ಜಪಾನ್ ಮೂಲದ ಆಟೊಮೊಬೈಲ್ ನಿರ್ಮಾಣ ಸಂಸ್ಥೆ ಸುಜುಕಿ ಭಾರತದಲ್ಲಿ 9,569 ಕೋಟಿ ರೂ. ಹೂಡಿಕೆ ಮಾಡಲು ಉದ್ದೇಶಿಸಿದೆ. ಈ ಹಣವನ್ನು ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಗಾಗಿ ಬ್ಯಾಟರಿ ನಿರ್ಮಾಣ ಘಟಕವನ್ನು ಗುಜರಾತ್ ನಲ್ಲಿ ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಇತ್ತೀಚಿಗಷ್ಟೆ ಜಪಾನ್ ಪ್ರಧಾನಿ ಫುಮಿಯೊ ಕಿಶಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.
ಈ ಭೇಟಿ ಸಂದರ್ಭ ಕಿಶಿದಾ ಅವರು ಈ ಹೂಡಿಕೆ ಕುರಿತಾಗಿ ಮೋದಿಯವರ ಜೊತೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯತ್ತ ಸುಜುಕಿ ಗಮನ ಹರಿಸಿದೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 3.20 ಲಕ್ಷ ಕೋಟಿ ಹಣವನ್ನು ಹೂಡಿಕೆ ಮಾಡಲಿದೆ ಎಂದು ಜಪಾನ್ ಘೋಷಿಸಿದೆ.




