ಕಾಸರಗೋಡು: ಸಾರ್ವಜನಿಕ ಸ್ಥಳಗಳಲ್ಲಿ ಎಳೆಯ ಮಕ್ಕಳ ಉಪಸ್ಥಿತಿಯಲ್ಲಿ ಬಂಧನ ಕಾರ್ಯ ನಡೆಯುವ ಸಂದರ್ಭ ಮಕ್ಕಳ ಮನಸ್ಸಿಗೆ ಯಾವುದೇ ರೀತಿಯ ಘಾಸಿಯಾಗದಂತೆ ಜಾಗ್ರತೆ ವಹಿಸುವಂತೆ ಮಕ್ಕಳ ಹಕ್ಕು ಆಯೋಗ ಆದೇಶಿಸಿದೆ.
ಆಯೋಗದ ಸದಸ್ಯೆ ಪಿ.ಪಿ.ಶ್ಯಾಮಲಾ ದೇವಿ ಅವರು ಆದೇಶ ಹೊರಡಿಸಿದ್ದು, ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ವಲಸಿಗರ ಬಂಧನಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗಿರುವ ಘಟನೆ ಹಾಗೂ ಪೆÇಲೀಸ್ ಅಧಿಕಾರಿಗಳು ಹಾಗೂ ಆದೂರು ಠಾಣಾ ಅಧಿಕಾರಿ ನಿರ್ಲಕ್ಷ್ಯದ ಬಗ್ಗೆ ಇಲಾಖಾ ವಿಚಾರಣೆ ನಡೆಸುವಂತೆ ಆಯೋಗ ಸೂಚಿಸಿದೆ. ಇತ್ಯರ್ಥವಾದ ರಾಜಕೀಯ ಪ್ರಕರಣದಲ್ಲಿ ನ್ಯಾಯಾಲಯವು ಇತರ ಎಲ್ಲಾ ಸಹ-ಪ್ರತಿವಾದಿಗಳನ್ನು ದೋಷಮುಕ್ತಗೊಳಿಸಿತು ಮತ್ತು ದೂರುದಾರರು ವಿದೇಶದಲ್ಲಿದ್ದ ಕಾರಣ ಪ್ರಕರಣವು ಎಲ್ಪಿಸಿ ಆಯಿತು. ಮಕ್ಕಳ ಉಪಸ್ಥಿತಿಯಲ್ಲಿ ಬಂಧನಕಾರ್ಯ ಹೊರತುಪಡಿಸಿ, ಮಕ್ಕಳನ್ನು ಮೊದಲು ಸಂಬಂಧಿಕರಿಗೆ ಒಪ್ಪಿಸಿದ ನಂತರ ಬಂಧನಕಾರ್ಯ ಮುಂದುವರಿಸುವುದು ಸೂಕ್ತ ಎಂದು ಆಯೋಗ ತಿಳಿಸಿದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ದೂರಿನ ಅನ್ವಯ ಆಯೋಗ ಈ ಆದೇಶ ಹೊರಡಿಸಿದೆ.




