HEALTH TIPS

ಯತಿಗಳ ಚಾತುಮ್ರ್ಯಾಸ ವ್ರತಾಚರಣೆಗೆ ಸಿದ್ದತೆ: ನಾಳೆಯಿಂದ ಶ್ರೀಮದ್ ಎಡನೀರು ಸ್ವಾಮೀಜಿ ಹಾಗೂ ಕೊಂಡೆವೂರು ಸ್ವಾಮೀಜಿಗಳಿಂದ ವ್ರತಾನುಷ್ಠಾನಕ್ಕೆ ಚಾಲನೆ

 

               ಕಾಸರಗೋಡು ಜಿಲ್ಲೆಯ  ಶ್ರೀಮದ್ ಎಡನೀರು ಮಠ ಕೇರಳದ ಏಕೈಕ ಶ್ರೀ ಶಂಕರ ಪರಂಪರೆಯ ಮಠವಾಗಿದೆ. ತೋಂಟಕಾಚಾರ್ಯ ಯತಿಪರಂಪರೆಯ 20ನೇ ಯತಿ ಶ್ರೇಷ್ಠರಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಮ್ಮ ಎರಡನೇ ವರ್ಷದ ಚಾತುರ್ಮಾಸ ವ್ರತವನ್ನು ಶ್ರೀಮಠದಲ್ಲೇ ಕೈಗೊಳ್ಳಲಿದ್ದಾರೆ. ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಶ್ರೀಮಠದ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆಯುತ್ತಿದ್ದಾರೆ. 

              ಪೂರ್ವಾಶ್ರಮದಲ್ಲಿ ಕೇರಳ ಪಾರ್ತಿಸುಬ್ಬ ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆಯ ಪೋಷಣೆಯಲ್ಲಿ ಶ್ರೀಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶ್ರೀಮಠ ಗೋಶಾಲೆಯನ್ನು ಹೊಂದಿದ್ದು, 20ಕ್ಕೂ ಹೆಚ್ಚು ಹಸುಗಳು ಇಲ್ಲಿದೆ.  ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಮತ್ತು ಯಕ್ಷಗಾನದಂತಹ ಸಾಂಸ್ಕ್ರøತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ತಮ್ಮ ಎರಡನೇ ವರ್ಷದ ಚಾತುರ್ಮಾಸವನ್ನು ಜುಲೈ 13ರಿಂದ ಸೆ. 10ರ ವರೆಗೆ ನಡೆಸಲಿದ್ದಾರೆ.

               ಶ್ರೀಮದ್ ಎಡನೀರು ಮಠ ಕಾಸರಗೋಡಿನಿಂದ ಪುತ್ತೂರು ರಸ್ತೆಯಲ್ಲಿ  10ಕಿ.ಮೀ ಹಾಗೂ ಮಂಗಳೂರಿನಿಂದ 60ಕಿ.ಮೀ ದೂರದಲ್ಲಿದೆ. ಸಂಪರ್ಕ ಸಂಖ್ಯೆ-9447089608(ರಾಜೇಂದ್ರ ಕಲ್ಲೂರಾಯ)

                         ಚಾತುರ್ಮಾಸ-ಉಪ್ಪಳ ಕೊಂಡೆವೂರು ಮಠ

               ಮಂಜೇಶ್ವರ ತಾಲೂಕಿನ ಉಪ್ಪಳ  ಸನಿಹದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ  ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಈ ಬಾರಿ ತಮ್ಮ 18ನೇ ವರ್ಷದ ಚಾತುರ್ಮಾಸ ವ್ರತವನ್ನು ಕೈಗೊಳ್ಳಲಿದ್ದಾರೆ. ಆರಂಭದಿಂದಲೂ ಶ್ರೀಮಠದಲ್ಲೇ ಚಾತುರ್ಮಾಸ ವ್ರತ ಕೈಗೊಳ್ಳುತ್ತಿರುವ ಶ್ರೀಗಳು ಈ ಬಾರಿ ಗುರುಪೂರ್ಣಿಮೆ ದಿನವಾದ ಜುಲೈ 13 ರಂದು ವ್ರತ ಆರಂಭಿಸಲಿದ್ದಾರೆ.

               ಶ್ರೀಮಠದಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಮಠವು ಗುರುತಿಸಿಕೊಳ್ಳುವಂತಾಗಿದೆ. ಕಳೆದ ಒಂದು ದಶಕದಲ್ಲಿ ಮಹತ್ವದ ಯಜ್ಞ, ಯಾಗಾದಿಗಳನ್ನು ಇಲ್ಲಿ ನಡೆಸಲಾಗಿದೆ. 2013ರಲ್ಲಿ ಸಹಸ್ರ ಚಂಡಿಕಾ ಯಾಗ, ಗಾಯತ್ರೀ ಘೃತ ಸಂಪ್ರಾಪ್ತಿ ಯಾಗ, ಚತುರ್ವೇದ ಸಂಹಿತಾ ಯಾಗ, 2019ರಲ್ಲಿ ವಿಶ್ವಜಿತ್‍ಅತಿರಾತ್ರ ಸೋಮಯಾಗ ನಡೆಸಲಾಗಿತ್ತು. ಶ್ರೀಮಠದ ವಠಾರದಲ್ಲಿ ಅತ್ಯಪೂರ್ವ ಔಷಧೀಯ ಸಸ್ಯಗಳನ್ನು ಒಳಗೊಂಡ ಆಯುರ್ವೇದ ನಕ್ಷತ್ರ ವನವನ್ನು ಪೋಷಿಸಲಾಗುತ್ತಿದೆ. ಶ್ರೀ ಮಠದ ಗೋಶಾಲೆಯಲ್ಲಿ ಕಾಸರಗೋಡು ಗಿಡ್ಡ ತಳಿ ಸೇರಿದಂತೆ ಎಂಬತ್ತಕ್ಕೂ ಮಿಕ್ಕಿ ಹಸುಗಳಿವೆ. 

            ಉಪ್ಪಳ ಪೇಟೆಯಿಂದ ಕಳಾಯಿ ರಸ್ತೆಯಲ್ಲಿ ಒಂದುವರೆ ಕಿ.ಮೀ ದೂರದಲ್ಲಿ ಶ್ರೀ ಮಠ ಅಸ್ತಿತ್ವದಲ್ಲಿದೆ. ಮಂಗಳೂರಿನಿಂದ ಇಲ್ಲಿಗೆ 27ಕಿ.ಮೀ ಹಾಗೂ ಕಾಸರಗೋಡಿನಿಂದ 24ಕಿ.ಮೀ ದೂರವಿದೆ. ಸಂಪರ್ಕ ಸಂಖ್ಯೆ:9400744159(ಅನಿಲ್) ಹಾಗೂ 9496857851(ಪವಿತ್ರ)

                                        ಏನಿದು ಅನುಷ್ಠಾನ

         ಜ್ಞಾನ ಪ್ರಸರಣ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವ ಉದ್ದೇಶದ ಯತಿಗಳ ಚಾತುರ್ಮಾಸ್ಯಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಈಗಾಗಲೇ ಹಲವಾರು ಸ್ವಾಮೀಜಿಗಳು ಯಾವ ಯಾವ ಸ್ಥಳಗಳಲ್ಲಿ ವ್ರತಾಚರಣೆ ಮಾಡಬೇಕು ಎಂದು ನಿರ್ಧರಿಸಿದ್ದಾರೆ.

                ವರಾಹ ಪುರಾಣದಲ್ಲಿ ಚಾತುರ್ಮಾಸ್ಯದ ಬಗ್ಗೆ ಉಲ್ಲೇಖವಿದೆ. ಆಷಾಡಮಾಸ ಶುಕ್ಲ ಪಕ್ಷ ದಶಮಿಯಿಂದ ಪ್ರಾರಂಭ ವಾಗಿ ಕಾರ್ತಿಕ ಮಾಸ ಶುಕ್ಲ ಪಕ್ಷ ಪೌರ್ಣಿಮೆ ವರೆಗಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ಯ ಎಂದು ಕರೆಯುತ್ತಾರೆ.

              ಶ್ರಾವಣ, ಭಾಧ್ರಪದ, ಆಶ್ವೀಜ ಮತ್ತು ಕಾರ್ತೀಕ ಮಾಸಗಳು ಈ ಅವಧಿಯಲ್ಲಿ ಬರುತ್ತದೆ. ಈ ನಾಲ್ಕು ತಿಂಗಳುಗಳು ಭಗವಂತನಿಗೆ ಬಹುಪ್ರಿಯವಾದ ತಿಂಗಳುಗಳು.

ಒಮ್ಮೆ ಧರಣಿ ದೇವಿ, ಕಲಿಯುಗದಲ್ಲಿ ಜನರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಇವರಿಗೆ ಸುಖ ಸಂತೋಷವನ್ನು ಕೊಡುವಂತ ಯಾವುದಾದರು ವ್ರತವನ್ನು ಸೂಚಿಸುವಂತೆ ವರಾಹ ರೂಪಿ ವಿಷ್ಣುವನ್ನು ಕೇಳುತ್ತಾಳೆÉ. ಆಗ ಚಾತುರ್ಮಾಸ್ಯವೆಂಬ ನಾಲ್ಕು ತಿಂಗಳ ಅವಧಿಯಲ್ಲಿ ದಾನ, ವ್ರತ, ತಪ ಮತ್ತು ಹೋಮಗಳನ್ನು ಮಾಡಿದರೆ ಅವರಿಗೆ

ಅಪಾರವಾದ ಫಲ ಲಭ್ಯ ವಾಗುತ್ತದೆ ಎಂದು ವರಾಹ ದೇವರು ಹೇಳುತ್ತಾರೆ.

               ಆಗ ವರ್ಷದ 12 ತಿಂಗಳುಗಳಲ್ಲಿ ಈ ನಾಲ್ಕು ತಿಂಗಳುಗಳು ಮಾತ್ರ ಯಾಕೆ ಪವಿತ್ರ ಎಂದು ಧರಣಿದೇವಿ ಭಗವಂತನನ್ನು ಕೇಳಿದಳು. ಆಗ ಭಗವಂತನು ಆಷಾಡಮಾಸದಿಂದ ಪ್ರಾರಂಭವಾಗಿ ಆರು ತಿಂಗಳಕಾಲ ದಕ್ಷಿಣಾಯನ ಎಂದು, ಪುಷ್ಯಮಾಸದಿಂದ ಪ್ರಾರಂಭವಾಗಿ ಆರು ತಿಂಗಳ ಕಾಲ ಉತ್ತರಾಯಣ ಎಂದು ಕರೆಯುತ್ತಾರೆ.

                 ಮಾನವರ ಒಂದು ವರ್ಷ ದೇವತೆಗಳಿಗೆ ಒಂದು ದಿನ.(ರಾತ್ರಿ ಮತ್ತು ಹಗಲು). ದೇವತೆಗಳಿಗೆ ಪುಷ್ಯಮಾಸದಿಂದ ಆಷಾಡ ಮಾಸದವರೆಗೆ ಹಗಲು ಮತ್ತು ಆಷಾಡಮಾಸದಿಂದ ಪುಷ್ಯಮಾಸದ ವರೆಗೆ ರಾತ್ರಿ. ಒಮ್ಮೆ ನಾನು ಮೇರು ಪರ್ವತದಲ್ಲಿದ್ದಾಗ ದೇವತೆಗಳು ಬಂದು ರಾತ್ರಿ ಯಾಯಿತು ನಾವು ಹೋಗುತ್ತೇವೆ ಎಂದರು. ಆಗ ಬಿಳಿಬಣ್ಣದ ಬಟ್ಟೆ

ಯುಟ್ಟಿದ್ದ ಕರೀ ಬಣ್ಣದ ಕೈಯಲ್ಲಿ ಪರಶು ಹಿಡಿದಿದ್ದ ಹೆಂಗಸು ನಮಸ್ಕರಿಸಿ ನಾನು *ರಾತ್ರಿದೇವಿ* . ವರ್ಷದ ಈ ಭಾಗಕ್ಕೆ ನಾನು ಆಭಿಮಾನಿನಿ. ರಾತ್ರಿ ಕಾಲ ಅಪವಿತ್ರವಾದುದು ಎಂದು ಯಾರು ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ನಾನು ಈ ಅವಮಾನವನ್ನು ಸಹಿಸಲಾರೆ. ನೀನು ಅನುಗ್ರಹಿಸದಿದ್ದರೆ ನಾನು ಬದುಕಿರುವುದಿಲ್ಲ ಎಂದು ಹೇಳುತ್ತಾಳೆ. ಆಗ ದೇವತೆಗಳೂ ರಾತ್ರಿ ದೇವಿಯನ್ನು ಅನುಗ್ರಹಿಸಬೇಕೆಂದು ವಿಷ್ಣುವನ್ನು ಬೇಡುತ್ತಾರೆ. ಇದರಿಂದ ಪ್ರಸನ್ನನಾದ ವರಾಹರೂಪಿ ವಿಷ್ಣುವು ಸಂತುಷ್ಟಗೊಂಡು ರಾತ್ರಿ ದೇವಿಗೆ ಒಂದು ವರವನ್ನು ಕೊಡುತ್ತಾರೆ. ನಿನಗೆ ಮೂರು ಯಾಮಗಳನ್ನು ಕೊಡುತ್ತೇನೆ. (ಒಂದು ಯಾಮ ವೆಂದರೆ ರಾತ್ರಿಯ 4ನೇಭಾಗ ಅಂದರೆ 2 ತಿಂಗಳುಗಳು). ಈ ಮೂರು ಯಾಮಗಳಲ್ಲಿ

ಮೊದಲ  2 ಯಾಮಗಳು ಅಂದರೆ 4 ತಿಂಗಳುಗಳು-ಚಾತುರ್ಮಾಸ್ಯ ನನಗೆ ಪ್ರಿಯವಾದುದು. ಈ ಚಾತುರ್ಮಾಸದಲ್ಲಿ ಮಾಡುವ ಪವಿತ್ರ ಕಾರ್ಯಗಳಿಂದ ಅನಂತ ಫಲ ದೊರೆಯುತ್ತದೆ ಎಂದು ವಿಷ್ಣುವು ಹೇಳಿದರು. 

             ಈ ಚಾತುರ್ಮಾಸ್ಯವಾದ ಶ್ರಾವಣ ,ಭಾಧ್ರಬದ, ಆಶ್ವೀಜ ಮತ್ತು ಕಾರ್ತೀಕ ಮಾಸಗಳಲ್ಲಿ ಪುಣ್ಯಫಲವು ದಿನೇದಿನೇ ವೃದ್ಧಿ ಯಾಗುತ್ತದೆ. ಆದ್ದರಿಂದ ಕಾರ್ತೀಕ ಮಾಸವು ಬಹಳ ಪವಿತ್ರವಾದುದು. ಇದನ್ನು ಕೇಳಿದ ರಾತ್ರಿ ದೇವಿಯು ಸಂತೋಷಗೊಂಡು ತನ್ನ ಸ್ಥಾನಕ್ಕೆ ಹಿಂದಿರುಗಿದಳು. ಚಾತುರ್ಮಾಸ್ಯದಲ್ಲಿ ಯಾರು ಜಪ ,ತಪ ವ್ರತ ಹೋಮ ,ದಾನಗಳನ್ನು ಮಾಡುತ್ತಾರೊ ಅವರಿಗೆ ವಿಶೇಷ ಫಲ ದೊರಕುವುದು ಎಂದು ವರಾಹರೂಪಿ ವಿಷ್ಣುವು ಧರಣಿ ದೇವಿಗೆ ಹೇಳುತ್ತಾರೆ.

            ಈ ಚಾತುರ್ಮಾಸದಲ್ಲಿ ದೇವರು ಯೋಗ ನಿದ್ದೆಗೆ ಹೋಗುತ್ತಾರೆ. ಶ್ರೀಧರ, ಹೃಷಿಕೇಶ, ಪಧ್ಮನಾಭ ಮತ್ತು ದಾಮೋಧರ ಅವರು ಚಾತುರ್ಮಾಸದ ಅಭಿಮಾನಿ ದೇವತೆಗಳು.

ಈ ಪವಿತ್ರ ಮಾಸದಲ್ಲಿ ಕೆಳಕಂಡ 10 ಸಂಕಲ್ಪಗಳನ್ನು ಮಾಡಬೇಕೆಂದು ನಮ್ಮ ಪುರಾಣಗಳು ಹೇಳುತ್ತವೆ.

             ಸತ್ಸಂಗ, ದ್ವಿಜಾ ಭಕ್ತಿ, ಗುರು, ದೇವ, ಅಗ್ನಿ ತರ್ಪಣ, ಗೋಪ್ರದಾನ ವೇದಪಾಠ, ಸತ್ಕ್ರಿಯ, ಸದ್ಬಾಷಣ, ಗೊಭಕ್ತಿ, ದಾನ, ಭಕ್ತಿ, ಧರ್ಮ ಸಾಧನ. ಅನ್ನ ದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಟ.

              ಚಿತ್ತ ಸಂಯಮ 

               ಎಲ್ಲಾ ವ್ರತ ಗಳಲ್ಲೂ ಆಹಾರ ಸೇವನೆ ಮೇಲೆ ನಿಬರ್ಂದ ವಿರುತ್ತದೆ. ಕಾರಣವೆಂದರೆ ಬಾಹ್ಯ ಪ್ರಪಂಚದ ಅವಲಂಬನದಿಂದ ಹೊರಬಂದು ಚಿತ್ತ ಸ್ಥರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ. ಚಾತುರ್ಮಾಸದ 4 ತಿಂಗಳಲ್ಲಿ 4 ವ್ರತ ಗಳನ್ನು ಮಾಡಬೇಕು. ಅವುಗಳೆಂದರೆ 1.ಶಾಕ ವ್ರತ 2. ಕ್ಷೀರ ವ್ರತ 3.ದಧಿ ವ್ರತ ಮತ್ತು 4. ದ್ವಿಧಳ ವ್ರತ. ವ್ರತಗಳನ್ನು ಪ್ರಾರಂಭ ಮಾಡುವ ಮೊದಲು ಸಂಕಲ್ಪ ಮಾಡಬೇಕು.

ಶಾಕ ವ್ರತ ಸಂಕಲ್ಪ (ಆಶಾಡ ಶುಕ್ಲ ಏಕಾದಶೀ)

ದಧಿ ವ್ರತ ಸಂಕಲ್ಪ (ಶ್ರಾವಣ ಶುಕ್ಲ ಏಕಾದಶೀ)

ಕ್ಷೀರ ವ್ರತ ಸಂಕಲ್ಪ (ಭಾಧ್ರಭದ ಶುಕ್ಲ ಏಕಾದಶೀ)

ದ್ವಿಧಳ ವ್ರತ ಸಂಕಲ್ಪ (ಆಶ್ವಯುಜ ಶುಕ್ಲ ಏಕಾದಶೀ)

ಸಮರ್ಪಣೆ

           ಸಂಕಲ್ಪದಂತೆ ಸಮರ್ಪಣೆ ಕೂಡ ಮುಖ್ಯ. ವ್ರತ ಮುಗಿದ ಮೇಲೆ ಮುಖ್ಯ ಪ್ರಾಣಂತರ್ಗತ ಭಗವಾನ್ ವಿಷ್ಣುವಿಗೆ ಸಮರ್ಪಣೆ ಮಾಡಬೆಕು.

ಶಾಕ ವ್ರತ ಸಮರ್ಪಣ ದಧಿ ವ್ರತ ಸಮರ್ಪಣ

ಕ್ಷೀರ ವ್ರತ ಸಮರ್ಪಣ

ದ್ವಿಧಳ ವ್ರತ ಸಮರ್ಪಣ

             ಈ ತಿಂಗಳಲ್ಲಿ ತರಕಾರಿ ಮತ್ತು ಹಣ್ಣು ಗಳು ಅಂದರೆ ಸೊಪ್ಪು, ನಿಂಬೆಹಣ್ಣು, ಗೋಡಂಬಿ, ಒಣ ದ್ರಾಕ್ಷಿ ಮತ್ತು ಹುಣಸೇಹಣ್ಣು ನಿಷಿದ್ಧ.ಕಾಳುಗಳು, ಜೀರಿಗೆ, ಎಣ್ಣೆ ಮತ್ತು ಹಾಲಿನ ಪದಾರ್ಥಗಳನ್ನು

ಸೇವಿಸಬಹುದು.

           ದಧಿ ವ್ರತ(ಶ್ರಾವಣ ಶುಕ್ಲ ಏಕಾದಶೀ ಇಂದ ಭಾಧ್ರಭದ ಶುಕ್ಲ ದಶಮಿ ವರೆಗೆ) ಮೊಸರು ನಿಷಿದ್ಧ.

ಕ್ಷೀರ ವ್ರತ (ಭಾಧ್ರಭದ ಶುಕ್ಲ ಏಕಾದಶೀ ಇಂದ ಆಶ್ವಯುಜ ಶುಕ್ಲ ದಶಮಿ ವರೆಗೆ)

             ಹಾಲು ಮತ್ತು ಅದರಿಂದ ಮಾಡಿದ ಪದಾರ್ಥ ಗಳು ನಿಷಿದ್ಧ.

       

            ದ್ವಿಧಳ ವ್ರತ (ಆಶ್ವಯುಜ ಶುಕ್ಲ ಏಕಾದಶೀ ಇಂದ ಕಾರ್ತಿಕ್ ಮಾಸ

ದಶಮಿ).

              ದ್ವಿಧಳ ವ್ರತ ಸಂಕಲ್ಪ (ಆಶ್ವಯುಜ ಶುಕ್ಲ ಏಕಾದಶೀ)




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries