HEALTH TIPS

ಮಧ್ಯಪ್ರದೇಶದಲ್ಲಿ 20 ಬೌದ್ಧ ಗುಹೆಗಳನ್ನು ಪತ್ತೆ ಮಾಡಿದ ಪುರಾತತ್ವ ಅಧಿಕಾರಿಗಳು

 

      ಭೋಪಾಲ್: ಭಾರತೀಯ ಪುರಾತತ್ವ ಇಲಾಖೆಯು(ಎಎಸ್‌ಐ) ಮಧ್ಯಪ್ರದೇಶದ ಬಂಧಾವ್‌ಗರ್‌ನಲ್ಲಿ 20 ಬೌದ್ಧ ಗುಹೆಗಳನ್ನು ಪತ್ತೆ ಮಾಡಿದ್ದಾರೆ. ಈ ಗುಹೆಗಳು ಕ್ರಿ.ಪೂ 2ನೇ ಶತಮಾನದಿಂದ ಕ್ರಿ.ಪೂ 5ನೇ ಶತಮಾನಕ್ಕೆ ಸೇರಿದ್ದವುಗಳಾಗಿದ್ದು, ಬಘೇಲ್‌ಖಂಡ್ ಪ್ರದೇಶದಲ್ಲಿ ಕಂಡುಬಂದಿವೆ.

             ಈ ಧಾರ್ಮಿಕ ಕಲಾಕೃತಿಗಳು ಬೌದ್ಧ ಧರ್ಮದ ಮಹಾಯಾನ ಪಂಥಕ್ಕೆ ಸೇರಿದವುಗಳಾಗಿವೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

             ಅದೇ ಸ್ಥಳದಲ್ಲಿ ಹಿಂದೂ ದೇವತೆಗಳ ಶಿಲ್ಪಗಳು ಸಹ ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಬಲ್‌ಪುರ್ ವಲಯದ ಪುರಾತತ್ವ ಇಲಾಖೆಯ ವರಿಷ್ಟಾಧಿಕಾರಿಕಾರಿ ಡಾ. ಶಿವಕಾಂತ್ ಬಜ್‌ಪಾಯ್ ನಿರ್ದೆಶನದ ಮೇರೆಗೆ ಈ ಉತ್ಖನನ ನಡೆಸಲಾಗಿದೆ.

              ಸಂಶೋಧನೆಯಲ್ಲಿ ಚೈತ್ಯಾಕಾರದ ಬಾಗಿಲುಗಳು, ಸ್ತೂಪಗಳು ಮತ್ತು ಹಿಂದೆಂದೂ ನೋಡಿರದ 46 ಹೊಸ ಶಿಲ್ಪಗಳು ಪತ್ತೆಯಾಗಿವೆ. ಕ್ರಿ.ಪೂ. 2ನೇ ಅಥವಾ 3ನೇ ಶತಮಾನಕ್ಕೆ ಸೇರಿದ ಬೌದ್ಧ ಸ್ತಂಭದ ತುಣುಕುಗಳು ಈ ಸ್ಥಳದಲ್ಲಿ ಕಂಡುಬಂದಿವೆ.

            ಕ್ರಿ.ಪೂ 2ನೇ ಶತಮಾನದಿಂದ 5ನೇ ಶತಮಾನದವರೆಗಿನ 24 ಬ್ರಾಹ್ಮಿ ಶಾಸನಗಳು ಮತ್ತು 26 ಪುರಾತನ ದೇವಾಲಯಗಳು ಹಾಗೂ ಕಳಚುರಿ ಕಾಲದ ಅವಶೇಷಗಳು ಸಹ ಕಂಡುಬಂದಿವೆ. ತಂಡವು 19 ಜಲಮೂಲಗಳ ಪುರಾವೆಗಳನ್ನು ಸಹ ಕಂಡುಕೊಂಡಿದೆ.

                 ಸಂಶೋಧನೆಗಳ ಕಾಲಾವಧಿಯು ಮಹಾರಾಜ ಶ್ರೀ ಭೀಮಸೇನ, ಮಹಾರಾಜ ಪೊತಸಿರಿ ಮತ್ತು ಮಹಾರಾಜ ಭಟ್ಟದೇವರ ಆಳ್ವಿಕೆಯ ಅವಧಿಯದ್ದಾಗಿದೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries