HEALTH TIPS

ದೇಹದಲ್ಲಿ ಜಿಂಕ್‌ (ಸತು) ಹೆಚ್ಚಾದರೆ ಕಂಡು ಬರುವ ಸಮಸ್ಯೆಗಳಿವು, ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಿದ್ದರೆ ಜಾಗ್ರತೆ!

 

ಸತುವಿಂಶ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಆದರೆ ಸತುವಿನಂಶ ಕಡಿಮೆಯಾದರೆ ಹೇಗೆ ಆರೋಗ್ಯಕ್ಕೆ ತೊಂದರೆಯಾಗುವುದೋ ಅದೇ ರೀತಿ ಸತುವಿನಂಶ ಅಧಿಕವಾದರೆ ಕೂಡ ತೊಂದರೆಯಾಗುವುದು. ಕೆಲವರು ಸತುವಿನಂಶ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುತ್ತಾರೆ.

ಸತುವಿನಂಶದ ಸಪ್ಲಿಮೆಂಟ್ಸ್‌ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮೊಡವೆ ಸಮಸ್ಯೆ ನಿವಾರಿಸಲು, ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ. ಆದರೆ ಸತುವಿಂಶ ಸಪ್ಲಿಮೆಂಟ್ಸ್ ವೈದ್ಯರ ಸಲಹೆಯಿಲ್ಲದೆ ಪಡೆಯಬಾರದು.

ನೀವು ಅಧಿಕ ಸತುವಿನಂಶ ಆಹಾರ ತೆಗೆದುಕೊಂಡಾಗ ಅಥವಾ ಸತುವಿನಂಶ ಸಪ್ಲಿಮೆಂಟ್ಸ್ ಡೋಸೇಜ್ ಅಧಿಕವಾದರೆ ಕೆಲವು ತೊಂದರೆಗಳು ಉಂಟಾಗುವುದು. ನೀವು ಸತುವಿನ ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಿದ್ದರೆ ಈ ಲಕ್ಷಣಗಳು ಕಂಡು ಬಂದರೆ ಸತುವಿನಂಶ ಹೆಚ್ಚಾಗಿರಬಹುದು ಪರೀಕ್ಷಿಸಿ ನೋಡಿ:

ತಲೆಸುತ್ತು, ವಾಂತಿ
ದೇಹದಲ್ಲಿ ಸತುವಿನಂಶ ಹೆಚ್ಚಾದರೆ ವಾಂತಿ, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರುವುದು. ಅಲ್ಲದೆ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು.

ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆಯಾಗುವುದು
ಕೊಲೆಸ್ಟ್ರಾಲ್ ಎಂದರೆ ಕೆಟ್ಟ ಕೊಲೆಸ್ಟ್ರಾಲ್‌ ಮಾತ್ರವಲ್ಲ ಒಳ್ಳೆಯ ಕೊಲೆಸ್ಟ್ರಾಲ್‌ ಇರುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಿ ಒಳ್ಳೆಯ ಕೊಲೆಸ್ಟ್ರಾಲ್‌ ಕಡಿಮೆಯಾದರೆ ಕೊಲೆಸ್ಟ್ರಾಲ್‌ ಸಮಸ್ಯೆ ಕಂಡು ಬರುತ್ತದೆ. ಸತುವಿನಂಶ ಹೆಚ್ಚಾದರೆ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆಯಾಗುವುದು

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಕಂಡು ಬರುವ ಲಕ್ಷಣಗಳು
ಕೊಲೆಸ್ಟ್ರಾಲ್ ಹೆಚ್ಚಾದರೆ ಪ್ರತ್ಯೇಕ ಲಕ್ಷಣಗಳೇನೂ ಕಂಡು ಬರುವುದಿಲ್ಲ. ನೀವು ರಕ್ತ ಪರೀಕ್ಷೆ ಮಾಡಿದಾಗ ಮಾತ್ರ ತಿಳಿಯುತ್ತದೆ.

ಯಾವಾಗ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಬೇಕು?
9-11 ವರ್ಷ ವರ್ಷ ಇರುವಾಗ ಕೊಲೆಸ್ಟ್ರಾಲ್‌ ಪರೀಕ್ಷೆ ಮಾಡಿಸಬೇಕು. ನಂತರ ಪ್ರತೀ 5 ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಬೇಕು. 40 ವರ್ಷ ಮೇಲ್ಪಟ್ಟ ಮೇಲೆ ಪ್ರತೀ ಎರಡು ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿ. 60 ವರ್ಷ ಮೇಲ್ಪಟ್ಟ ಮೇಲೆ ಪ್ರತಿ ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್‌ ಪರೀಕ್ಷೆ ಮಾಡಿಸಿ.

ಈ ರೀತಿಯ ಸಮಸ್ಯೆ ಆಗಾಗ ಕಂಡು ಬರುತ್ತಿದ್ದರೆ
ಜ್ವರ, ಚಳಿಜ್ವರ, ಕೆಮ್ಮು, ತಲೆನೋವು, ತಲೆಸುತ್ತು ಈ ಬಗೆಯ ಸಮಸ್ಯೆಗಳು ಆಗಾಗ ಕಂಡು ಬರುತ್ತಿದ್ದರೆ ನೀವು ನಿಮ್ಮ ದೇಹದಲ್ಲಿ ಸತುವಿನಂಶದ ಪ್ರಮಾಣ ಎಷ್ಟಿದೆ ಎಂದು ಪರೀಕ್ಷಿಸುವುದು ಒಳ್ಳೆಯದು.

ಹೊಟ್ಟೆ ನೋವು, ಬೇಧಿ
ಸತುವಿನಂಶ ಹೆಚ್ಚಾದರೆ ಹೊಟ್ಟೆನೋವು, ಬೇಧಿ ಈ ಬಗೆಯ ಸಮಸ್ಯೆ ಕಂಡು ಬರುವುದು. ಸತುವಿನಂಶವಿರುವ ಆಹಾರ ಹೆಚ್ಚಾಗಿ ತಿಂದರೆ ಅಥವಾ ಸಪ್ಲಿಮೆಂಟ್ಸ್ ಹೆಚ್ಚಾದರೂ ಈ ರೀತಿ ಕಂಡು ಬರುವುದು. ಕೆಲವರಿಗೆ ಇದು ತುಂಬಾ ಗಂಭೀರ ಸಮಸ್ಯೆಯನ್ನು ಉಂಟು ಮಾಡುವುದು.

ಎಷ್ಟು ಪ್ರಮಾಣದಲ್ಲಿ ಸತು ಸೇವಿಸಬೇಕು?
ಸತುವನ್ನು ದಿನದಲ್ಲಿ 40mg ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣದ ಡೋಸೇಜ್‌ ವೈದ್ಯರು ಕೆಲವರಿಗೆ ಸೂಚಿಸುತ್ತಾರೆ, ಅದು ಸ್ವಲ್ಪ ದಿನಗಳವರೆಗೆ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಿ ನಂತರ ಡೋಸ್‌ ಕಡಿಮೆ ಮಾಡುತ್ತಾರೆ. ಏಕೆಂದರೆ ದಿನದಲ್ಲಿ 40mgಗಿಂತ ಅಧಿಕವಾದರೆ ದೇಹವು ತಾಮ್ರದಂಶ ಹೀರಿಕೊಳ್ಳುವುದು ಕಡಿಮೆಯಾಗುವುದು. ಅಲ್ಲದೆ ಸಿಂಗಲ್‌ ಡೋಸ್‌ನಲ್ಲಿ 30mgನಷ್ಟು ತೆಗೆದುಕೊಂಡರೂ ಅಡ್ಡಪರಿಣಾಮ ಕಂಡು ಬರುವುದು.

ಸತು ಸಪ್ಲಿಮೆಂಟ್ಸ್ ತ್ವಚೆಗೆ ಬಳಸಬಹುದೇ? ತ್ವಚೆ ಗಾಯವಾದಾಗ ಬಳಸಿದರೆ ಉರಿ, ತುರಿಕೆ ಈ ಬಗೆಯ ಸಮಸ್ಯೆ ಕಂಡು ಬರುವುದು.

ಸತುವಿನಂಶವನ್ನು ಮೂಗಿನಿಂದ ವಾಸನೆ ಗ್ರಹಿಸಬಾರದು: ಒಂದು ವೇಳೆ ನೀವು ಗ್ರಹಿಸಿದರೆ ನಿಮ್ಮ ವಾಸನೆ ಗ್ರಹಿಸುವ ಸಾಮರ್ಥ್ಯ ಶಾಶ್ವತವಾಗಿ ನಾಶವಾಗಬಹುದು. ಆದ್ದರಿಂದ ಮೂಗಿನಲ್ಲಿ ಎಳೆಯಬೇಡಿ.

ಸತುವಿನಂಶದ ಪ್ರಯೋಜನಗಳು
* ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ
* ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
* ಮೊಡವೆ ಚಿಕಿತ್ಸೆಯಲ್ಲಿ ಸತುವನ್ನು ಬಳಸಲಾಗುವುದು
* ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಸತುವಿನಂಶ ಅಧಿಕವಿರುವ ನಾನ್‌ವೆಜ್‌ ಆಹಾರಗಳು
* ಕುರಿ, ಪೋರ್ಕ್‌,ಕೆಂಪು ಮಾಂಸದಲ್ಲಿ ಅಧಿಕವಿರುತ್ತದೆ.
* ಮೃದ್ವಂಗಿಗಳಲ್ಲಿ ಸತುವಿನಂಶ ಕಂಡು ಬರುತ್ತದೆ. ಕಪ್ಪೆ ಚಿಪ್ಪಿನೊಳಗಡೆ ಇರುವ ಮಾಂಸದಲ್ಲಿ ಸತುವಿನಂಶವಿದೆ.
* ಮೊಟ್ಟೆಯಲ್ಲಿ ಸತುವಿಂಶ ಅಧಿಕವಿದೆ

ಸತುವಿನಂಶ ಅಧಿಕವಿರುವ ವೆಜ್ ಆಹಾರಗಳು
* ಧಾನ್ಯಗಳು
* ಬೀಜಗಳು : ಸಿಹಿ ಕುಂಬಳಕಾಯಿ ಬೀಜದಲ್ಲಿ ಸತುವಿನಂಶವಿದೆ
* ನಟ್ಸ್
* ಹಾಲಿನ ಉತ್ಪನ್ನಗಳು
* ಡಾರ್ಕ್‌ ಚಾಕೋಲೆಟ್‌ಗಳು


 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries