ಕಾಸರಗೋಡು: ಪರಪ್ಪ ಬ್ಲಾಕ್ ಪಂಚಾಯಿತಿಯ ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿ ಜಾರಿಗೆ ತರಲಾಗಿರುವ 'ಸಂಜೀವಿನಿ' ಯೋಜನೆಗೆ ಪ.ಜಾತಿ-ಪ.ವರ್ಗ, ಹಿಂದುಳಿದ ವರ್ಗ ಅಭಿವೃದ್ಧಿ ಹಾಗೂ ಮುಜರಾಯಿ ಖಾತೆ ಸಚಿವ ಕೆ. ರಾಧಾಕೃಷ್ಣನ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸಂಜೀವಿನಿ ಯೋಜನೆ ಪರಪ್ಪ ಬ್ಲಾಕ್ ಪಂಚಾಯಿತಿಯು ಬುಡಕಟ್ಟು ಸಮುದಾಯಗಳ ಆರೋಗ್ಯ ಮತ್ತು ಬುಡಕಟ್ಟು ಪ್ರದೇಶದಲ್ಲಿ ನಸಿರ್ಂಗ್ ವ್ಯಾಸಂಗ ಪೂರ್ಣಗೊಳಿಸಿದ ಬುಡಕಟ್ಟು ಯುವತಿಯರಿಗೆ ವೃತ್ತಿ ತರಬೇತಿಯನ್ನು ಜಾರಿಗೊಳಿಸುವ ಮಾದರಿ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಜೀವಿನಿ ಕಿಟ್ ಸಚಿವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಸ್. ಸುಕು ವರದಿ ಮಂಡಿಸಿದರು. ಪರಪ್ಪ ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಪಿ.ಕೆ.ಸುಮೇಶ್ ಕುಮಾರ್ ಅವರು ಸಂಜೀವಿನಿ ಲೆಕ್ಕಪತ್ರ ಮಂಡಿಸಿದರು. ಬಳಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಕಟ್ಟಕಯಂ, ಕಿನಾನೂರು ಕರಿಂತಲಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ, ಕೋಡೋಂ ಬೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಶ್ರೀಜಾ ಮನೋಜ್, ಕಲ್ಲಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ನಾರಾಯಣನ್ ಮತ್ತು ಪನತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನಾ ಪ್ರಸಾದ್ ಉಪಸ್ಥಿತರಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ. ಲಕ್ಷ್ಮಿ ಸ್ವಾಗತಿಸಿದರು. ಗ್ರಾಮ ವಿಸ್ತರಣಾಧಿಕಾರಿ ಕೆ.ಜಿ.ಬಿಜುಕುಮಾರ್ ವಂದಿಸಿದರು.
'ಸಂಜೀವಿನಿ' ಸಮಾಜಕ್ಕೆ ಮಾದರಿಯಾದ ಯೋಜನೆ-ಸಚಿವ ಕೆ.ರಾಧಾಕೃಷ್ಣನ್
0
ಫೆಬ್ರವರಿ 23, 2023
Tags


