ತಿರುವನಂತಪುರಂ: ವರ್ಕಲಾ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಮೂವರನ್ನು ಪೆÇಲೀಸರು ಬಂಧಿಸಿದ್ದಾರೆ. ತರಬೇತುದಾರ ಸಂದೀಪ್, ನೌಕರರಾದ ಶ್ರೇಯಸ್ ಮತ್ತು ಪ್ರಭುದೇವ ಬಂಧಿತರು.
ಪ್ಯಾರಾಗ್ಲೈಡಿಂಗ್ ಕಂಪನಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಕಂಪನಿಯ ಮಾಲೀಕರು ತಲೆಮರೆಸಿಕೊಂಡಿದ್ದಾರೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.
ಪ್ಯಾರಾಗ್ಲೈಡಿಂಗ್ ವೇಳೆ ಹೈಮಾಸ್ಟ್ ಲ್ಯಾಂಪ್ ಪೋಸ್ಟ್‍ನಲ್ಲಿ ಗ್ಲೈಡರ್‍ನ ರೆಕ್ಕೆ ಸಿಲುಕಿದ ಘಟನೆ ನಡೆದಿತ್ತು. ಉತ್ತರಾಖಂಡ ಮೂಲದ ತರಬೇತುದಾರ ಸಂದೀಪ್ ಅವರ ತಪ್ಪೇ ಕಾರಣ ಎಂದು ಎಫ್‍ಐಆರ್‍ನಲ್ಲಿ ಹೇಳಲಾಗಿದೆ. ಎಫ್ಐಆರ್ ಪ್ರಕಾರ, ತರಬೇತುದಾರನ ನಿರ್ಲಕ್ಷ್ಯದ ಹಾರಾಟದಿಂದ ಅಪಘಾತ ಸಂಭವಿಸಿದೆ. ಗ್ಲೈಡಿಂಗ್ ಆರಂಭಿಸಿದ ಐದನೇ ನಿಮಿಷದಲ್ಲಿ ನಿಯಂತ್ರಣ ತಪ್ಪಿತು. ಎಫ್‍ಐಆರ್‍ನ ಪ್ರಕಾರ, ಕೊಯಮತ್ತೂರು ಮೂಲದ ಪವಿತ್ರಾ ಎಂಬ ಪ್ರಯಾಣಿಕರು ಭಯದಿಂದ ಕಿರುಚಿದರು ಮತ್ತು ಕೆಳಗೆ ಇಳಿಯುವಂತೆ ಕೇಳಿದರು, ಆದರೆ ಸಂದೀಪ್ ಹಾರಾಟವನ್ನು ಮುಂದುವರೆಸಿದರು.
ಪ್ಯಾರಾಗ್ಲೈಡಿಂಗ್ ಕಂಪನಿಗೆ ಸೂಕ್ತ ಅನುಮತಿ ಇರಲಿಲ್ಲ ಎಂದು ವರದಿಯಾಗಿದೆ. ನಿನ್ನೆ ವರ್ಕಳ ಪಾಪನಾಶತ್ ಎಂಬಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅವಘಡ ಸಂಭವಿಸಿತ್ತು. ಕೊಯಮತ್ತೂರಿನ ಮಹಿಳೆ ಮತ್ತು ಗ್ಲೈಡಿಂಗ್ ತರಬೇತುದಾರ ಅಪಘಾತದಲ್ಲಿ ಸಿಲುಕಿದ್ದರು. ಒಂದು ಗಂಟೆಯ ರಕ್ಷಣಾ ಕಾರ್ಯಾಚರಣೆಯ ಬಳಿಕ ಸಿಕ್ಕಿಬಿದ್ದಿದ್ದ ಇಬ್ಬರನ್ನು ಕೆಳಗಿಳಿಸಲಾಗಿದೆ. ಕೆಳಗೆ ಹರಡಿದ್ದ ಬಲೆಯಲ್ಲಿ ಇಬ್ಬರೂ ಜಿಗಿದರು. ವರ್ಕಳ ಪೆÇಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ವರ್ಕಲಾ ಪ್ಯಾರಾಗ್ಲೈಡಿಂಗ್ ಅಪಘಾತ; ತರಬೇತುದಾರರ ತಪ್ಪಿಂದಾದ ಅವಘಡ: ಮೂವರ ಬಂಧನ: ಕೊಲೆ ಯತ್ನ ಪ್ರಕರಣ ದಾಖಲು
0
ಮಾರ್ಚ್ 08, 2023


