ಬದಿಯಡ್ಕ: ಬೇಳ ಕೌಮುದಿ ಗ್ರಾಮೀಣ ನೇತ್ರಾಲಯ ಮತ್ತು ಅಚ್ಛಿವ್ ಟ್ರಸ್ಟ್‍ನ ನೇತೃತ್ವದಲ್ಲಿ ಮಹಿಳಾದಿನದ ಅಂಗವಾಗಿ "ಬೆಂಕಿ ಮತ್ತು ಸುರಕ್ಷೆ" ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಬೇಳ ಕೌಮುದಿ ಚಿಕಿತ್ಸಾಲಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಅಗ್ನಿ ಶಾಮಕ ದಳದ ಅಧಿಕಾರಿ ಪ್ರಕಾಶ್ ಮತ್ತು ಸಹೋದ್ಯೋಗಿಗಳ ನೇತೃತ್ವದಲ್ಲಿ ಅಗ್ನಿ ಸುರಕ್ಷೆಯ ಬಗ್ಗೆ ಅಣುಕು ದೃಶ್ಯದ ಮೂಲಕ ಉಪಯುಕ್ತವಾದ ಮಾಹಿತಿಯನ್ನು ನೀಡಿದರು. ನಿತ್ಯ ಜೀವನದಲ್ಲಿ ಒಂದು ಸಣ್ಣ ಅಶ್ರದ್ಧೆಯಿಂದ ಉಂಟಾಗುವ ದುರಂತವನ್ನು, ಅದರಿಂದಾಗುವ ಜೀವ ಹಾನಿ ಮತ್ತು ನಾಶ ನಷ್ಟಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಅರಿವು ಮೂಡಿಸಿದರು. ಉದ್ಯೋಗಿಗಳ ಸಂದೇಹ ಮತ್ತು ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಿದರು. ಅನಿಲ್ ಕುಮಾರ್ ಸ್ವಾಗತಿಸಿದರು.
ಬೆಂಕಿ ಮತ್ತು ಸುರಕ್ಷೆ ಕಾರ್ಯಕ್ರಮ
0
ಮಾರ್ಚ್ 13, 2023
Tags

.jpg)
