HEALTH TIPS

ನಮ್ಮ ಸಾಕುನಾಯಿ ಪರಚಿದರೂ ಲಸಿಕೆ ಪಡೆಯಬೇಕಾ? ನಾಯಿ ಉಗುರು ತಾಗಿದರೂ ಅಪಾಯವೇ?

 ನಾಯಿ ಕಚ್ಚಿದರೆ ಲಸಿಕೆ ಹಾಕಿಸುತ್ತೇವೆ, ಆದರೆ ನಾಯಿ ಪರಚಿದಾಗ ಅಥವಾ ಅದರ ಜೊತೆ ಆಟವಾಡುತ್ತಿರುವಾಗ ಅದರ ಅರಿವಿಗೆ ಬಾರದೆ ಅದರ ಹಲ್ಲು ತಾಗಿ ಸ್ವಲ್ಪ ತರುಚಿದ ಗಾಯವಾದರೆ ಬಹುತೇಕರು ಲಸಿಕೆ ಹಾಕಿಸಿಕೊಳ್ಳಲ್ಲ. ಈ ರೀತಿ ಮಾಡುವುದರಿಂದ ಏನಾದರೂ ಅಪಾಯವಿದೆಯೇ?

ನಾಯಿ ಪರಚಿದರೂ ಅಥವಾ ಚಿಕ್ಕ ಗಾಯವಾದರೂ ಲಸಿಕೆ ಹಾಕಿಸಬೇಕೆ? ಎಂದು ನೋಡುವುದಾದರೆ ನಾಯಿ ಪರಚಿದರೆ ಅಥವಾ ಅದರ ಅದರ ಹಲ್ಲು ಸ್ವಲ್ಪ ತಾಗಿದರೂ ನೀವು ನಿರ್ಲಕ್ಷ್ಯ ಮಾಡಬಾರದು, ಇಲ್ಲದಿದ್ದರೆ ಅಪಾಯಕಾರಿ, ಏಕೆ ಎಂದು ನೋಡೋಣ ಬನ್ನಿ:

ಅಪಾಯಗಳಿವೆ
* ಅತಿಯಾದ ರಕ್ತಸ್ರಾವ
* ಸೋಂಕು
* ಟೆಟಾನಸ್
* ರೇಬಿಸ್
* ಸೆಪ್ಸಿಸ್

ನಾಯಿಯ ಉಗುರು ತಾಗಿದಾಗ ತರಚಿದ ಗಾಯವಾದರೆ ಏನು ಮಾಡಬೇಕು?
* ಮೊದಲಿಗೆ ತರಿಚಿದ ಗಾಯವಾದ ಕಡೆ ಸೋಪು ಹಚ್ಚಿ ಬಿಸಿ ನೀರಿನಲ್ಲಿ ತೊಳೆಯಿರಿ. ಕನಿಷ್ಠ 5 ನಿಮಿಷ ಸೋಪು ಹಚ್ಚಿ ತೊಳೆಯಿರಿ, ನಂತರ ಸ್ವಚ್ಛವಾದ ಟವಲ್‌ನಿಂದ ಒರೆಸಿ.
* ರಕ್ತ ಬರುತ್ತಿದ್ದರೆ ರಕ್ತಸ್ರಾವವಾಗುತ್ತಿರುವ ಭಾಗವನ್ನು ಒತ್ತಿ ಹಿಡಿಯಿರಿ, ಇದರಿಂದ ರಕ್ತಸ್ರಾವ ಕಡಿಮೆಯಾಗುವುದು
* ಆಂಟಿಬಯೋಟಿಕ್‌ ಆಯಿಂಟ್‌ಮೆಂಟ್‌ ಹಚ್ಚಿ
* ಗಾಯವನ್ನು ಸ್ಟ್ರೆರೈಲ್ ಬ್ಯಾಂಡೇಜ್‌ನಿಂದ ಸುತ್ತಿ

ತರಚಿದ ಗಾಯದಿಂದಾಗಿ ಸೋಂಕು ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು * ಆ ಭಾಗ ಕೆಂಪಾಗುವುದು, ಊತ ಕಂಡು ಬರುವುದು * ಜ್ವರ * ಕೀವು ತುಂಬುವುದು * ಸುಸ್ತು * ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.

ಕ್ಯಾಪನೋಸೈಟೋಫಗಾ ಸೋಂಕಿನ ಲಕ್ಷಣಗಳು ಕೆಲವೊಂದು ನಾಯಿಯ ಬಾಯಲ್ಲಿ ಕ್ಯಾಪನೋಸೈಟೋಫಗಾ ಎಂಬ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಈ ಬ್ಯಾಕ್ಟಿರಿಯಾ ಮನುಷ್ಯರಿಗೆ ತುಂಬಾನೇ ಕಡಿಮೆ, ಕೆಲವೊಮ್ಮೆ ಹರಡಿದರೆ ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವುದು , ದೇಹದಲ್ಲಿ ಈ ಲಕ್ಷಣಗಳು ಕಂಡು ಬರುವುದು: * ಊತ * ಹಲ್ಲು ತಾಗಿದ ಭಾಗದಲ್ಲಿ ಕೆಂಪಾಗುವುದು * ತಲೆನೋವು * ಜ್ವರ * ಮೈಕೈ ನೋವು * ಕಿಬ್ಬೊಟ್ಟೆ ನೋವು * ಬೇಧಿ * ವಾಂತಿ ಈ ರೀತಿ ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ.

ರೇಬಿಸ್ ರೇಬಿಸ್‌ ತಗುಲಿದರೆ ವ್ಯಕ್ತಿ ಬದುಕಿರುವ ಚರಿತ್ರೆಯೇ ಇಲ್ಲ. ಈ ವೈರಸ್‌ ಮನುಷ್ಯರ ನರದ ಮೇಲೆ ದಾಳಿ ಮಾಡುತ್ತದೆ ನಾಯಿಗೆ ರೇಬಿಸ್ ಇದ್ದರೆ ಈ ಲಕ್ಷಣಗಳು ಕಂಡು ಬರುವುದು * ಅದರ ವರ್ತನೆಯಲ್ಲಿ ಬದಲಾವಣೆಯಾಗುವುದು * ಹಸಿವು ಕಡಿಮೆಯಾಗುವುದು * ಅದರ ಧ್ವನಿ ಬದಲಾಗುವುದು * ಒಂದಿಷ್ಟೂ ವಿಶ್ರಾಂತಿ ಪಡೆಯದೆ ಒದ್ದಾಡುತ್ತಿರುತ್ತದೆ * ಮನುಷ್ಯರು ಅಥವಾ ಇತರ ಪ್ರಾಣಿಗಳು ಹತ್ತಿರ ಹೋದರೆ ಕಚ್ಚಲು ಬರುತ್ತದೆ * ಪಾರ್ಶ್ವವಾಯು ತಗುಲುವುದು

ಅಪರಿಚಿತ ನಾಯಿ ಕಚ್ಚಿದರೆ ಕೂಡಲೇ ಲಸಿಕೆ ಪಡೆಯಿರಿ. ಮನುಷ್ಯರಿಗೆ ರೇಬಿಸ್‌ ಇರುವ ನಾಯಿ ಕಚ್ಚಿದರೆ ಅದರ ಲಕ್ಷಣಗಳು ಕಂಡು ಬರಲು ಕೆಲವು ವಾರಗಳು ಅಥವಾ ತಿಂಗಳಾಗಬಹುದು. ಮನುಷ್ಯರಲ್ಲಿ ರೇಬಿಸ್ ಲಕ್ಷಣಗಳೆಂದರೆ * ಜ್ವರ * ತಲೆಸುತ್ತು * ತಲೆನೋವು' * ಸುಸ್ತು * ಅತಿಯಾದ ಒತ್ತಡ * ಭ್ರಮೆ ಹಾಗೂ ನರಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು.
ಮನೆಯಲ್ಲಿ ನಾಯಿ ಸಾಕುವವರು ಈ ವಿಷಯಗಳ ಕಡೆ ಗಮನ ನೀಡಿ: * ನಿಮ್ಮ ನಾಯಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಿ. * ಲಸಿಕೆ ಕೊಡಿಸದ ನಾಯಿ ಜೊತೆ ನಿಮ್ಮ ನಾಯಿಯನ್ನು ಬೆರೆಯಲು ಬಿಡಬೇಡಿ, ಬೀದಿ ನಾಯಿಗಳಿಂದ ದೂರವಿಡಿ. * ಅಲ್ಲದೆ ನಾಯಿ ಜಂಪ್ ಮಾಡುವಾಗ ನಿಮ್ಮ ಪರಚದಂತೆ, ಬಾಯಿ ಹಾಕದಂತೆ ಟ್ರೈನಿಂಗ್ ನೀಡಿ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries