HEALTH TIPS

ರಾಜ್ಯಾದ್ಯಂತ ಗ್ರಾಮ ಕಚೇರಿಗಳಲ್ಲಿ ತಪಾಸಣೆ ಮುಂದುವರಿಕೆ

            ತಿರುವನಂತಪುರ: ಅಕ್ರಮಗಳನ್ನು ಪತ್ತೆ ಹಚ್ಚಲು ರಾಜ್ಯದ ಗ್ರಾಮ ಕಚೇರಿಗಳಲ್ಲಿ ಇಂದು ಕೂಡ ತಪಾಸಣೆ ಮುಂದುವರಿಯಲಿದೆ.

         ಹಿರಿಯ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಗ್ರಾಮ ಕಚೇರಿಗಳಲ್ಲಿ ಲಂಚ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಿಂಚಿನ ತಪಾಸಣೆ ಆರಂಭವಾಗಿದೆ.

          ಲಂಚ ಪ್ರಕರಣದಲ್ಲಿ ಗ್ರಾಮ ಕಚೇರಿ ಸಹಾಯಕ ಬಿ.ಸುರೇಶ್ ಕುಮಾರ್ ಬಂಧನದ ಬಳಿಕ ಕಂದಾಯ ಇಲಾಖೆ ತಪಾಸಣೆಯನ್ನು ಬಿಗಿಗೊಳಿಸಿದೆ. ಸೇವಾ ಹಕ್ಕು ಕಾಯಿದೆಯಲ್ಲಿ ನಿಗದಿಪಡಿಸಿರುವ ಅಲ್ಪಾವಧಿಯಲ್ಲಿ ಪ್ರಮಾಣ ಪತ್ರ ಮತ್ತು ಸೇವೆಗಳನ್ನು ಒದಗಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭೂಕಂದಾಯ ಆಯುಕ್ತರಿಗೆ ಆದೇಶ ನೀಡಲಾಗಿದೆ. ತಪಾಸಣೆ ವೇಳೆ ಪತ್ತೆಯಾದ ಇಂತಹ ಕಡತಗಳ ಮೇಲೆ ವಿಶೇಷ ತನಿಖೆ ನಡೆಸಲಾಗುವುದು. ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ತಪಾಸಣೆ ಇಂದು ಸಂಜೆ ವೇಳೆಗೆ ಪೂರ್ಣಗೊಳ್ಳಲಿದೆ. ಈ ಕುರಿತ ವರದಿಯನ್ನು ಮುಂದಿನ ದಿನದಲ್ಲಿ ಕಂದಾಯ ಸಚಿವಾಲಯಕ್ಕೆ ಸಲ್ಲಿಸಲಾಗುವುದು.

          ಗ್ರಾಮ ಕಚೇರಿಗಳಲ್ಲಿ ಲಂಚ ಪಡೆದ ಹಿನ್ನೆಲೆಯಲ್ಲಿ ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧೀಕ್ಷಕರ ನೇತೃತ್ವದಲ್ಲಿ ವಿವಿಧ ಗುಂಪುಗಳಾಗಿ ತಪಾಸಣೆ ನಡೆಸಲಾಯಿತು. ಪ್ರಾದೇಶಿಕ ಕಂದಾಯ ವಿಜಿಲೆನ್ಸ್ ಕಚೇರಿಗಳು ಮತ್ತು ಕಮಿಷನರೇಟ್ ಮತ್ತು ಕಲೆಕ್ಟರೇಟ್‍ಗಳಲ್ಲಿ ತಪಾಸಣಾ ತಂಡಗಳ ಕೆಲಸವನ್ನು ಬಲಪಡಿಸಲಾಗುವುದು. ಇದಕ್ಕಾಗಿ ಹೆಚ್ಚಿನ ನೌಕರರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಭೂಕಂದಾಯ ಆಯುಕ್ತಾಲಯದಲ್ಲಿ ಭ್ರμÁ್ಟಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ವಿಶೇಷ ವ್ಯವಸ್ಥೆ ಜಾರಿಗೆ ತರಲಾಗುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries