HEALTH TIPS

ಮಸೂದೆ ಮಂಡನೆ: ಗ್ರೀನ್‌ ಕಾರ್ಡ್‌ ಮಿತಿ ರದ್ದಾಗುವ ಸಾಧ್ಯತೆ

                   ವಾಷಿಂಗ್ಟನ್‌: ಗ್ರೀನ್‌ ಕಾರ್ಡ್‌ ವಿತರಣೆಗಾಗಿ ದೇಶಗಳಿಗೆ ನಿಗದಿಪಡಿಸಿರುವ ಕೋಟಾ ಮಿತಿ ಕೈಬಿಡಲು ಮತ್ತು ಎಚ್-1ಬಿ ವೀಸಾ ವಿತರಣೆಯಲ್ಲಿ ಅಗತ್ಯ ಬದಲಾವಣೆಗೆ ಅವಕಾಶ ಕಲ್ಪಿಸುವ 'ಪೌರತ್ವ ಕಾಯ್ದೆ'ಯ ಮಸೂದೆಯನ್ನು ಡೆಮಾಕ್ರಟಿಕ್‌ ಪಕ್ಷವು ಬುಧವಾರ ಮಂಡಿಸಿತು.

                ಸಂಸತ್‌ ಸದಸ್ಯೆ ಲಿಂಡಾ ಸ್ಯಾಂಚೆಜ್‌ ಅವರು 'ಅಮೆರಿಕ ಪೌರತ್ವ ಕಾಯ್ದೆ 2023' ಮಸೂದೆ ಮಂಡಿಸಿದರು. ದಾಖಲೆಯಲ್ಲಿಲ್ಲದ ಸುಮಾರು 1.1 ಕೋಟಿ ವಲಸಿಗರು, ಟಿಪಿಎಸ್‌ ಹೊಂದಿರುವವರು, ಕೆಲ ಕೃಷಿ ಕಾರ್ಮಿಕರಿಗೆ ಪೌರತ್ವ ಪಡೆಯಲು ಅನುಸರಿಸಬೇಕಾದ ಮಾರ್ಗಗಳನ್ನು ಮಸೂದೆ ಒಳಗೊಂಡಿದೆ.

                ವಲಸಿಗರಿಗೆ ಗಡೀಪಾರು ಭೀತಿಯಿಲ್ಲದಂತೆ ನಿಗದಿತ ತೆರಿಗೆ ಪಾವತಿಸಿ ಐದು ವರ್ಷಗಳ ಅವಧಿವರೆಗೂ ಪೌರತ್ವ ಪಡೆಯುವ ಹಾದಿಯನ್ನು ಸುಗಮಗೊಳಿಸಲು ಮಸೂದೆಯು ಅನುವು ಮಾಡಿಕೊಡಲಿದೆ.

                  ಗ್ರೀನ್‌ ಕಾರ್ಡ್‌ ವಿತರಣೆಗೆ ಈಗಿನ ಮಿತಿ ಕೈಬಿಡುವುದಕ್ಕೆ ಪೂರಕವಾಗಿ ಉದ್ಯೋಗ ಆಧಾರಿತ ವಲಸೆ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಲು ಉದ್ದೇಶಿಸಲಾಗಿದೆ.

                 ಅಮೆರಿಕ ವಿಶ್ವವಿದ್ಯಾಲಯಗಳ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ವಿಷಯಗಳ (ಸ್ಟೆಮ್‌) ಪದವೀಧರರು ದೇಶದಲ್ಲೇ ಉಳಿಯಲು, ಕಡಿಮೆ ವೇತನದ ಉದ್ಯಮಗಳಲ್ಲಿನ ನೌಕರರಿಗೆ ಗ್ರೀನ್‌ ಕಾರ್ಡ್ ಪಡೆಯಲು, ಎಚ್‌-1ಬಿ ವೀಸಾವುಳ್ಳ ಅವಲಂಬಿತರಿಗೆ ಕೆಲಸದ ಅನುಮೋದನೆ ಪಡೆಯುವುದು, ಎಚ್-1ಬಿ ಹೊಂದಿದ ಮಕ್ಕಳು ವ್ಯವಸ್ಥೆಯಿಂದ ಹೊರಗುಳಿಯದಂತೆ ಮಸೂದೆ ನಿಯಮಗಳನ್ನು ಸರಳಗೊಳಿಸಲಿದೆ.

              ಕುಟುಂಬ ಆಧಾರಿತ ವಲಸೆ ವ್ಯವಸ್ಥೆ: ಸಮಗ್ರ ಸುಧಾರಣೆಗೆ ಮಸೂದೆಯು ಒತ್ತು ನೀಡಲಿದ್ದು, ಕುಟುಂಬ ಆಧಾರಿತ ವಲಸೆ ವ್ಯವಸ್ಥೆ ಜಾರಿಗೊಳಿಸಲಿದೆ. ಇದು, ಕುಟುಂಬ ಒಟ್ಟಾಗಿರಲು ನೆರವಾಗಲಿದೆ. ಸಂಗಾತಿ (ಪತಿ-ಪತ್ನಿ), ಮಕ್ಕಳನ್ನು ಕುಟುಂಬ ಎಂದು ಪರಿಗಣಿಸಿ, ಹಿಂದಿನ ವರ್ಷದ ವೀಸಾ ಆಧರಿಸಿ ಬ್ಯಾಕ್‌ಲಾಗ್ ಇತ್ಯರ್ಥಪಡಿಸುವುದು ಕುಟುಂಬ ಆಧರಿತ ವಲಸೆಗೆ ಪೂರಕವಾಗಿ ಮಿತಿ ರದ್ದುಪಡಿಸುವುದು ಸೇರಿದೆ.

                   ಎಲ್‌ಜಿಬಿಟಿಕ್ಯೂ ಗುಂಪಿನವರಿಗೆ ಆಗುತ್ತಿದ್ದ ತಾರತಮ್ಯ ನಿವಾರಣೆ, ಅನಾಥರು, ವಿಧವೆಯರು, ಮಕ್ಕಳಿಗೆ ರಕ್ಷಣೆ ಒದಗಿಸುವುದು, ಕೌಟುಂಬಿಕ ದಾವೆಗಳಲ್ಲಿ ಪೂರಕ ಮಾನ್ಯತೆಯನ್ನು ಆಧರಿಸಿ ಗ್ರೀನ್‌ ಕಾರ್ಡ್‌ನ ನಿರೀಕ್ಷೆಯಲ್ಲಿ ಇರುವ ಅವಧಿಯಲ್ಲೂ ಅರ್ಜಿದಾರರು ತಾತ್ಕಾಲಿಕವಾಗಿ ಅಮೆರಿಕದಲ್ಲಿರುವ ತನ್ನ ಕುಟುಂಬದ ಜೊತೆಗೆ ಇರಲು ಅವಕಾಶ ಕಲ್ಪಿಸುವುದು ಉದ್ದೇಶಿತ ಮಸೂದೆಯಲ್ಲಿ ಸೇರಿದೆ.

                                                     ಆಮೂಲಾಗ್ರ ಬದಲಾವಣೆ ಉದ್ದೇಶ -ಲಿಂಡಾ

                    ಮೆಕ್ಸಿಕೊದ ವಲಸಿಗ ತಂದೆ-ತಾಯಿಯ ಮಗಳಾಗಿ 'ಅಮೆರಿಕ ಪೌರತ್ವ ಕಾಯ್ದೆ' ಮಂಡಿಸಲು ನನಗೆ ಹೆಮ್ಮೆ ಆಗುತ್ತಿದೆ. ಇದು ದಿಟ್ಟ ಆಮೂಲಾಗ್ರ ಬದಲಾವಣೆಗೆ ಒತ್ತು ನೀಡಲು ಹಾಲಿ ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸಲು ನೆರವಾಗಲಿದೆ' ಎಂದು ಮಸೂದೆ ಮಂಡಿಸಿದ ಲಿಂಡಾ ಸ್ಯಾಂಚೆಜ್‌ ಹೇಳಿದರು.

                  ದೇಶದ ಆರ್ಥಿಕತೆ ವೃದ್ಧಿಗೆ ಗಡಿಯನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲು ಈಗಾಗಲೇ ನೆಲೆಯೂರಿರುವ ಲಕ್ಷಾಂತರ ವಲಸಿಗರ ಪೌರತ್ವ ಹಾದಿ ಸುಗಮಗೊಳಿಸಲು ಇದು ಸಹಕಾರಿ ಎಂದು ಪ್ರತಿಪಾದಿಸಿದರು. ಈ ಮಾತಿಗೆ ದನಿಗೂಡಿಸಿದ ಡೆಮಾಕ್ರಟಿಕ್‌ ಪಕ್ಷದ ನಾಯಕ ಹಕೀಮ್ ಜೆಫ್ರೀಸ್ 'ಅಮೆರಿಕದ ಪ್ರಗತಿಯಲ್ಲಿ ವಲಸಿಗರ ಪಾತ್ರ ಗಣನೀಯವಾಗಿದೆ. ಸಮಗ್ರವಾದ ವಲಸಿಗರ ಕಾಯ್ದೆಯ ಅಗತ್ಯವಿದೆ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries