HEALTH TIPS

ಜಾಮೀನು ಕೊಡದ ಜಡ್ಜ್​ಗೆ ಸುಪ್ರೀಂ ಕೋರ್ಟ್ ಶಿಕ್ಷೆ; ಕೋರ್ಟ್ ಕಾರ್ಯದಿಂದ ಬಿಡುಗಡೆ ಮಾಡಿ ನ್ಯಾಯಾಂಗ ಅಕಾಡೆಮಿಗೆ ವರ್ಗ

                ವದೆಹಲಿ: ನ್ಯಾಯಾಂಗ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದ ಸೆಷನ್ಸ್ ಜಡ್ಜ್ ಒಬ್ಬರನ್ನು ಕೋರ್ಟ್ ಕಾರ್ಯಗಳಿಂದ ವಾಪಸ್ ಕರೆಸುವ ಶಿಕ್ಷೆ ನೀಡಿರುವ ಸುಪ್ರೀಂ ಕೋರ್ಟ್, ಸಂಬಂಧಿತ ನ್ಯಾಯಾಧೀಶರನ್ನು ನ್ಯಾಯಾಂಗ ಅಕಾಡೆಮಿಗೆ ಕಳಿಸುವಂತೆ ಮಂಗಳವಾರ ಅಲಹಾಬಾದ್ ಹೈಕೋರ್ಟ್​ಗೆ ನಿರ್ದೇಶಿಸಿದೆ.

        ಆರೋಪಿಗಳಿಗೆ ಜಾಮೀನು ನೀಡುವ ವಿಚಾರದಲ್ಲಿ ಉದಾರವಾಗಿರಬೇಕೆಂಬ ಸುಪ್ರೀಂ ಕೋರ್ಟ್​ನ ಹಲವು ನಿರ್ದೇಶನಗಳಿದ್ದಾಗ್ಯೂ ಅವುಗಳನ್ನು ಗೌರವಿಸದಿರುವ ಪ್ರವೃತ್ತಿ ಮುಂದುವರಿದಿರುವ ಫಲಿತಾಂಶ ಇದಾಗಿದೆ. ದೇಶದಾದ್ಯಂತ ಕೋರ್ಟ್​ಗಳು ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್​ಕೌಲ್ ಮತ್ತು ಅಹ್ಸಾನುದ್ದಿನ್ ಅಮಾನುಲ್ಲಾ ಇದ್ದ ನ್ಯಾಯ ಪೀಠಕ್ಕೆ ಅಮಿಕಸ್ ಕ್ಯೂರಿ ತಿಳಿಸಿದ ನಂತರ ಸವೋನ್ನತ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

ಅಲಹಾಬಾದ್ ಹೈಕೋರ್ಟ್​ಗೆ ಸೂಚನೆ: ಸೆಷನ್ಸ್ ಜಡ್ಜ್ ಒಬ್ಬರಿಂದ ಕೆಲಸಗಳನ್ನು ಹಿಂಪಡೆದು ನ್ಯಾಯಾಂಗದ ಕೌಶಲಗಳನ್ನು ಅಪ್​ಗ್ರೇಡ್ ಮಾಡಿಕೊಳ್ಳಲು ತರಬೇತಿಗಾಗಿ ಅಕಾಡೆಮಿಗೆ ಕಳಿಸುವಂತೆ ಅಲಹಾಬಾದ್ ಹೈಕೋರ್ಟ್​ಗೆ ಸುಪ್ರೀಂ ನಿರ್ದೇಶಿಸಿದೆ.

                 ಕೆಲವು ಪ್ರಕರಣಗಳಲ್ಲಿ ಕಸ್ಟಡಿಗೆ ಪಡೆಯುವುದು ಅಗತ್ಯವಿಲ್ಲದಿದ್ದರೂ ಜಾಮೀನು ಮಂಜೂರು ಮಾಡಲು ಕೆಳ ಕೋರ್ಟ್​ಗಳು ಮೀನಾಮೇಷ ಎಣಿಸುತ್ತಿರುವುದಕ್ಕೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಕಠಿಣ ಕ್ರಮ ಕೈಗೊಂಡಿದೆ. ತನ್ನ ಯಾವುದೇ ನಿರ್ದೇಶನಗಳನ್ನು ಪಾಲಿಸದ ಮ್ಯಾಜಿಸ್ಟ್ರೇಟರ ನ್ಯಾಯಾಂಗ ಕಾರ್ಯಗಳನ್ನು ವಾಪಸ್ ಪಡೆದು ಅಂಥವರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳಿಸುವುದಾಗಿ ಮಾರ್ಚ್ 21ರಂದು ಸುಪ್ರೀಂ ಖಡಕ್ಕಾಗಿ ಎಚ್ಚರಿಸಿತ್ತು. ವೈವಾಹಿಕ ಸಂಬಂಧದ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ಲಖನೌನ ಸೆಷನ್ಸ್ ಜಡ್ಜ್ ಇದರ ಹೊರತಾಗಿಯೂ ಒಬ್ಬ ಪುರುಷ, ಆತನ ತಂದೆ, ತಾಯಿ ಹಾಗೂ ಸೋದರನಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಇದನ್ನು ಗಂಭಿರವಾಗಿ ಪರಿಗಣಿಸಿದ ಸುಪ್ರೀಂ, ಆ ಜಡ್ಜ್​ಗೆ ಶಿಕ್ಷೆ ವಿಧಿಸಿದೆ. ಗಾಜಿಯಾಬಾದ್​ನ ಸಿಬಿಐ ಕೋರ್ಟ್ ಕೂಡ ಸುಪ್ರೀಂ ನಿರ್ದೇಶನ ಪಾಲಿಸದಿರುವುದನ್ನು ಅಮಿಕಸ್ ಕ್ಯೂರಿ ಗಮನಕ್ಕೆ ತಂದಿದ್ದಾರೆ. ಇವೆಲ್ಲವನ್ನು ಪರಿಗಣಿಸಿದ ನ್ಯಾಯ ಪೀಠ, 'ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ' ಎಂದು ತರಾಟೆಗೆ ತೆಗೆದುಕೊಂಡಿದೆ.

                                      ಸಲಿಂಗಿಗಳ ಕಾಳಜಿಗೆ ಸಮಿತಿ ರಚನೆ

             ಸಲಿಂಗಿಗಳ ಸಮಸ್ಯೆ ಆಲಿಸಲು ಕ್ಯಾಬಿನೆಟ್ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸರ್ಕಾರ ಸಿದ್ಧವಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ. ಏ. 27ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದು ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಕಾನೂನು ಮಾಡಲು ಸಂಸತ್​ಗೆ

ಶಾಸಕಾಂಗ ಅಧಿಕಾರವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚಪೀಠ ಅಭಿಪ್ರಾಯಪಟ್ಟಿತ್ತು. ಸಲಿಂಗ ವಿವಾಹಕ್ಕೆ ಅನುಮತಿ ನೀಡಿದರೆ ಮುಂದಾಗುವ ಪರಿಣಾಮವನ್ನು ಗಮನಿಸಬೇಕು. ಇದರ ನ್ಯಾಯಾಂಗ ವ್ಯಾಖ್ಯಾನ ವಿಶೇಷ ವಿವಾಹ ಕಾಯ್ದೆ 1954ಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ವೈಯಕ್ತಿಕ ಕಾನೂನು ಸಹ ಕಾರ್ಯರೂಪಕ್ಕೆ ಬರುತ್ತದೆ. ವೈಯಕ್ತಿಕ ಕಾನೂನಿನಲ್ಲಿ ಬದಲಾವಣೆ ಮಾಡದೇ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದು ಸುಲಭದ ಕೆಲಸವಲ್ಲ ಎಂದು ಸುಪ್ರೀಕೋರ್ಟ್ ಹೇಳಿತ್ತು. ಸುಮಾರು 50 ಅರ್ಜಿದಾರರು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಮುಖ್ಯ ನ್ಯಾ.ಡಿ.ವೈ. ಚಂದ್ರಚೂಡ್, ನ್ಯಾ.ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಪಿ.ಎಸ್. ನರಸಿಂಹ, ಹಿಮಾ ಕೊಹ್ಲಿ ಒಳಗೊಂಡಿರುವ ಪಂಚ ಪೀಠ ವಿಚಾರಣೆ ನಡೆಸುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries