HEALTH TIPS

ವರ್ಕ್‌ ಫ್ರಂ ಹೋಂ ಮಾನಸಿಕ ಆರೋಗ್ಯದ ಮೇಲೆ ಬೀರುವ 5 ಕೆಟ್ಟ ಪರಿಣಾಮಗಳಿವು

 ಕೋವಿಡ್‌ 19 ಸಾಂಕ್ರಾಮಿಕ ಬಳಿಕ ವರ್ಕ್‌ ಫ್ರಂ ಹೋಂ ಎಂಬುವುದು ತುಂಬಾನೇ ಸಾಮಾನ್ಯವಾಗಿದೆ. ಎರಡು ವರ್ಷ ಬಹುತೇಕ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮಾಡಿದ್ದರು, ಅದಾದ ಬಳಿಕ ಈಗಲೂ ಬಹುತೇಕ ಕಂಒನಿಗಳು ತಮ್ಮ ಉದ್ಯೋಗಿಗಳು ವರ್ಕ್ ಫ್ರಂ ಮಾಡಲು ಅನುಮತಿ ನೀಡಿದೆ, ಕೆಲವರು ಆಫೀಸ್‌ಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ನಮ್ಮ ಸ್ನೇಹಿತರಲ್ಲಿ ಯಾರಾದರೂ ನಾನು ವರ್ಕ್ ಫ್ರಂ ಹೋಂ ಮಾಡುತ್ತಿದ್ದೀನಿ ಎಂದು ಹೇಳಿದರೆ ಓಹೋ ಸೂಪರ್ ... ನಿಂದೇ ಅದೃಷ್ಟ ಕಣಪ್ಪ, ಏನು ಆರಾಮವಾಗು ಇದ್ದೀಯ ಅಲ್ವಾ ಎಂದು ಕೇಳುತ್ತಾರೆ. ಆದರೆ ಆಫೀಸ್‌ಗೆ ಹೋಗಿ ಕೆಲಸ ಮಾಡುವ ಉದ್ಯೋಗಿಗಿಂತ ವರ್ಕ್‌ ಫ್ರಂ ಮಾಡುವ ಉದ್ಯೋಗಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸುತ್ತಾರೆ. ವರ್ಕ್‌ ಫ್ರಂ ಹೋಂನಿಂದ ಈ ಕೆಟ್ಟ ಪರಿಣಾಮಗಳೂ ಇವೆ...

ಒಂಟಿತನ ಕಾಡುವುದು: ಆಫೀಸ್‌ನಲ್ಲಿ ಹೋಗಿ ಕೆಲಸ ಮಾಡುವಾಗ ಅಲ್ಲಿ ಸಹದ್ಯೋಗಿಗಳಿರುತ್ತಾರೆ, ಅವರ ಜೊತೆ ಮಾತನಾಡುತ್ತೇವೆ, ಟೀ, ಕಾಫಿ ಅಂತ ಬ್ರೇಕ್ ತೆಗೆದುಕೊಳ್ಳುತ್ತೇವೆ, ಆದರೆ ವರ್ಕ್ ಫ್ರಂ ಹೋಂ ಮಾಡಿದರೆ ಯಾರ ಜೊತೆ ಮಾತನಾಡದೆ ಒಂದೇ ಕಡೆ ಕೂತು ಕೆಲಸ ಮಾಡುತ್ತೇವೆ, ಇದರಿಂದ ಒಂಟಿತನ ಕಾಡುವುದು, ಬೇಸರ ಅನಿಸುವುದು. Recommended Video ಪಿರಿಯಡ್ಸ್ ರಜೆ ವಿದ್ಯಾರ್ಥಿನಿಯರಿಗೆ ಮಾತ್ರ ಅಲ್ಲ ಆಫೀಸ್‌ನಲ್ಲಿ ಕೆಲಸ ಮಾಡೋ ಮಹಿಳೆಯರಿಗೂ ಬೇಕು... ಸ್ವಲ್ಪ ರಿಲ್ಯಾಕ್ಸ್ ಆಗಲು ಸಾಧ್ಯವಿಲ್ಲ: ಆಫೀಸ್‌ನಲ್ಲಿ ಆದರೆ ಟಿ, ಕಾಫಿ ಬ್ರೇಕ್ ಅಂತ ರಾಜಾರೋಷವಾಗಿ ಎದ್ದು ಹೋಗುತ್ತೇವೆ, ಮೇಲಾಧಿಕಾರಿ ಇಂಥ ವಿಷಯಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ, ಅದೇ ವರ್ಕ್ ಫ್ರಂ ಹೋಂನಲ್ಲಿ ಇದ್ದರೆ ಮೀಟಿಂಗ್ ಕಾಲ್‌ನಲ್ಲಿದ್ದರೆ ಊಟ ಬಿಟ್ಟು ಕಾಲ್ ಸ್ವೀಕರಿಸುತ್ತೇವೆ. ಹೀಗಾಗಿ ವರ್ಕ್‌ ಫ್ರಂ ನಮ್ಮಲ್ಲಿ ಮಾನಸಿಕ ಒತ್ತಡ ಹೆಚ್ಚು ಮಾಡುತ್ತದೆ.

ಹೊಸದು ಕಲಿಯುವ ಅವಕಾಶ ಕಡಿಮೆಯಾಗುವುದು ಆಫೀಸ್‌ಗೆ ಹೋಗಿ ಕೆಲಸ ಮಾಡುವಾಗ ನಮ್ಮ ಕೆಲಸದ ಬಗ್ಗೆ ಮಾತ್ರವಲ್ಲ ಇತರ ಕೆಲವು ವಿಷಯಗಳ ಬಗ್ಗೆ ಮಾಹಿತಿ ಸಿಗುವುದು, ಅದೇ ಮನೆಯಲ್ಲಿಯೇ ಕೆಲಸ ಮಾಡಿದರೆ ಸಹೋದ್ಯೋಗಿಗಳ ಜೊತೆ ಬೆರೆಯುವುದು ಕಡಿಮೆಯಾಗುವುದು, ಈ ಕಾರಣದಿಂದಾಗಿ ಹೊಸ ವಿಷಯಗಳ ಬಗ್ಗೆ ಮಾಹಿತಿ ಕಡಿಮೆಯಾಗುವುದು. ನಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾತ್ರ ಮಾಡಿ ಸುಮ್ಮನಾಗುತ್ತೇವೆ.
ಹೊಸದು ಕಲಿಯುವ ಅವಕಾಶ ಕಡಿಮೆಯಾಗುವುದು ಆಫೀಸ್‌ಗೆ ಹೋಗಿ ಕೆಲಸ ಮಾಡುವಾಗ ನಮ್ಮ ಕೆಲಸದ ಬಗ್ಗೆ ಮಾತ್ರವಲ್ಲ ಇತರ ಕೆಲವು ವಿಷಯಗಳ ಬಗ್ಗೆ ಮಾಹಿತಿ ಸಿಗುವುದು, ಅದೇ ಮನೆಯಲ್ಲಿಯೇ ಕೆಲಸ ಮಾಡಿದರೆ ಸಹೋದ್ಯೋಗಿಗಳ ಜೊತೆ ಬೆರೆಯುವುದು ಕಡಿಮೆಯಾಗುವುದು, ಈ ಕಾರಣದಿಂದಾಗಿ ಹೊಸ ವಿಷಯಗಳ ಬಗ್ಗೆ ಮಾಹಿತಿ ಕಡಿಮೆಯಾಗುವುದು. ನಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾತ್ರ ಮಾಡಿ ಸುಮ್ಮನಾಗುತ್ತೇವೆ. ಮೈ ತೂಕ ಕಡಿಮೆ ಮಾಡಲು ಹೇಗೆ ಆಹಾರ ಸೇವಿಸಬೇಕು ಗೊತ್ತೆ? ತಾರತಮ್ಯ ಮಾಡಲಾಗುವುದು ವರ್ಕ್‌ ಫ್ರಂ ಆಫೀಸ್‌ನಲ್ಲಿ ಮಾಡಿದಷ್ಟೇ ಅಷ್ಟೇ ಏಕೆ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿದರು, ಕಂಪನಿಯವರು ವರ್ಕ್‌ ಫ್ರಂ ಹೋಂ ಉದ್ಯೋಗಿಗಿಂತ ವರ್ಕ್‌ ಫ್ರಂ ಆಫೀಸ್‌ ಉದ್ಯೋಗಿಗಳಿಗೆ ಹೆಚ್ಚಿನ ಬಡ್ತಿ ನೀಡುವುದು ಅಥವಾ ಅವರಿಗೆ ಪ್ರಾಮುಖ್ಯತೆ ನೀಡುವುದು ಮಾಡುತ್ತಾರೆ. ಈ ಕಾರಣದಿಂದಾಗಿ ವರ್ಕ್‌ ಫ್ರಂ ಹೋಂಗಿಂತ ಅಫೀಸ್‌ ಬೆಸ್ಟ್ ಎಂದು ಅನಿಸಲಾರಂಭಿಸುವುದು. ವೈಯಕ್ತಿಕ ಹಾಗೂ ವೃತ್ತಿ ಜೀವನ ಬ್ಯಾಲೆನ್ಸ್ ಮಾಡುವುದು ಕೂಡ ಕಷ್ಟವಾಗುವುದು ವರ್ಕ್ ಫ್ರಂ ಹೋಂ ಮಾಡುವಾಗ ಕೆಲವೊಮ್ಮೆ ಮನೆಯ ಅವಶ್ಯಕತೆಗಳ ಕಡೆಗೆ ಗಮನ ನೀಡಬೇಕಾಗುತ್ತದೆ, ಇದರಿಂದ ಕೆಲಸಕ್ಕೆ ತೊಂದರೆಯಾಗುವುದು ಅಲ್ಲದೆ ಚಿಕ್ಕ ಮಕ್ಕಳಿದ್ದರೆ ಸಂಪೂರ್ಣ ಕೆಲಸದ ಕಡೆ ಗಮನಹರಿಸಲು ಅವರು ಕೂಡ ಬಿಡುವುದಿಲ್ಲ, ಹೀಗಾಗಿ ಮಾನಸಿಕ ಒತ್ತಡ ಹೆಚ್ಚು ಮಾಡುತ್ತದೆ. ವರ್ಕ್‌ ಫ್ರಂ ಹೋಂ ಇದ್ದರೆ ಮಾನಸಿಕ ಆರೋಗ್ಯಕ್ಕೆ ಏನು ಮಾಡಬೇಕು? ಕೆಲವು ಕಾರಣಗಳಿಂದಾಗಿ ಕೆಲವರಿಗೆ ಆಫೀಸ್‌ಗೆ ಹೋಗಿ ಕೆಲಸ ಮಾಡಲು ಕಷ್ಟವಾಗುವುದು. ಅಂಥವರು ಮನೆಯಲ್ಲಿಯೇ ಕೆಲಸಕ್ಕಾಗಿ ಒಂದು ಕೋಣೆಯಲ್ಲಿ ಸಕಲ ವ್ಯವಸ್ಥೆ ಮಾಡಬೇಕು. ಕೂರುವ ಚೇರ್, ಟೆಬಲ್, ಗಾಳಿ -ಬೆಳಕು ಚೆನ್ನಾಗಿ ಬೀಳುವಂತಿರಬೇಕು. ಸರಿಯಾದ ಸಮಯದಲ್ಲಿ ಕೂತು ಕೆಲಸ ಮಾಡಿ ಸರಿಯಾದ ಸಮಯಕ್ಕೆ ಕೆಲಸ ಮುಗಿಸಬೇಕು. ಹೀಗೆ ಮಾಡುವುದರಿಂದ ಮನೆಯಿಂದ ಮಾಡಿದರೂ ಆಫೀಸ್‌ ಕೆಲಸದ ಫೀಲ್ ಇರುತ್ತೆ, ಹೆಚ್ಚಿನ ಒತ್ತಡ ಉಂಟಾಗುವುದು ಕಡಿಮೆಯಾಗುವುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries