HEALTH TIPS

ಡೇನಿಯಲ್‌ ಚಂಡಮಾರುತ: ಪೂರ್ವ ಲಿಬಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

               ಲಿಬಿಯಾ: ಪೂರ್ವ ಲಿಬಿಯಾದಲ್ಲಿ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 10 ಸಾವಿರ ಜನ ಕಾಣೆಯಾಗಿದ್ದಾರೆ ಎಂದು ರೆಡ್‌ ಕ್ರಾಸ್‌ ಎಚ್ಚರಿಕೆ ನೀಡಿದೆ.

             ಘಟನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

                ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮತ್ತು ನಾಪತ್ತೆಯಾದವರ ಹುಡುಕಾಟ ಕಾರ್ಯವನ್ನು ನಡೆಸಲಾಗುತ್ತಿದೆ. ಡರ್ನಾ ನಗರವೊಂದರಲ್ಲೇ ಸಾವಿರ ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                ಡರ್ನಾ ನಗರದ ಲಕ್ಷಕ್ಕೂ ಹೆಚ್ಚು ಜನ ಆಶ್ರಯ ಕಳೆದುಕೊಂಡಿದ್ದಾರೆ, ವಾಹನಗಳು ನುಜ್ಜುಗುಜ್ಜಾಗಿ ರಸ್ತೆ ಬದಿಯಲ್ಲಿ ಬಿದ್ದಿರುವುದು, ಗಿಡಮರಗಳು ಧರೆಗೆ ಉಳಿರುವ ದೃಶ್ಯಗಳು ಕಂಡುಬರುತ್ತಿವೆ ಎಂದು ರಾಯಿಟರ್ಸ್‌ ಸಂಸ್ಥೆಯ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries