HEALTH TIPS

ಭೂಕಂಪಕ್ಕೂ ಮೊದಲು ಆಗಸದಲ್ಲಿ ಮೂಡಿದ ಬೆಳಕು; ವಿಜ್ಞಾನಿಗಳಲ್ಲೂ ಬೆರಗು !

               ಬಾಟ್ : ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪ 2900ಕ್ಕೂ ಹೆಚ್ಚು ಜನರ ಬಲಿ ಪಡೆದು, 5 ಸಾವಿರಕ್ಕೂ ಹೆಚ್ಚು ಜನರನ್ನು ನಿರ್ವಸತಿಗರನ್ನಾಗಿ ಮಾಡಿದೆ. ಆದರೆ ಭೂಕಂಪಕ್ಕೂ ಮೊದಲು ಆಗಸದಲ್ಲಿ ಮೂಡಿದ ಬೆಳಕು ಈಗ ಹಲವು ಪ್ರಶ್ನೆಗಳನ್ನು, ಕುತೂಹಲವನ್ನೂ ಮೂಡಿಸಿದೆ.

             ರಿಕ್ಟರ್ ಮಾಪನದಲ್ಲಿ 6.8 ರಷ್ಟಿದ್ದ ಕಂಪನದ ತೀವ್ರತೆಯಿಂದ ಹಲವು ಕಟ್ಟಡಗಳು ನಲುಗಿ, ಧರೆಗುರುಳಿದವು. ಆದರೆ ಈ ಕಂಪನಕ್ಕೂ ಕೆಲ ಕ್ಷಣ ಮೊದಲು ಆಗಸದಲ್ಲಿ ಬಣ್ಣ ಬಣ್ಣಗಳ ಬೆಳಕು ಮೊರಾಕ್ಕೊದ ವಾಯವ್ಯ ಭಾಗದಲ್ಲಿ ಕಾಣಿಸಿಕೊಂಡಿರುವುದು ವಿಜ್ಞಾನಿಗಳಲ್ಲೂ ಕುತೂಹಲ ಮೂಡಿಸಿದೆ. ಇದು ನಿಜವೇ ಎಂಬ ಪ್ರಶ್ನೆಗೆ, 'ಖಂಡಿತವಾಗಿಯೂ ನಿಜ' ಎಂದಿದ್ದಾರೆ ಅಮೆರಿಕದ ಭೂಭೌತ ವಿಜ್ಞಾನಿ ಜಾನ್‌ ಡೆರ್‌. ಭೂಂಕಪ ಮತ್ತು ಆ ಸಂದರ್ಭದಲ್ಲಿ ಮೂಡುವ ಬೆಳಕು (ಅರ್ಥ್‌ಕ್ವೇಕ್‌ ಲೈಟ್‌, ಇಕ್ಯೂಎಲ್‌) ಕುರಿತು ಹಲವು ಸಂಶೋಧನಾ ಪ್ರಬಂಧಗಳನ್ನು ಇವರು ಬರೆದಿದ್ದಾರೆ.


                ಭೂಕಂಪನ ಸಂಭವಿಸಿದ್ದು ರಾತ್ರಿ ವೇಳೆಯಲ್ಲಾದ್ದರಿಂದ ಈ ಬೆಳಕು ಹೆಚ್ಚು ಸ್ಪಷ್ಟವಾಗಿ ಕಾಣಿಸಿದೆ ಎಂದು ಅವರು ಹೇಳಿದ್ದಾರೆ. ಭೂಕಂಪನ ಬೆಳಕಿನ ವಿಡಿಯೊಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ.

'ನಲವತ್ತು ವರ್ಷಗಳ ಹಿಂದೆ ಈ ಬೆಳಕಿನ ಕುರಿತು ವಿವರಿಸುವುದೇ ಕಷ್ಟವಾಗುತ್ತಿತ್ತು. ಹೀಗೊಂದು ಪ್ರಕ್ರಿಯೆ ನಿಸರ್ಗದಲ್ಲಿ ನಡೆಯುತ್ತದೆ ಎಂದರೆ ಯಾರೂ ನಂಬಲು ಸಿದ್ಧರಿರುತ್ತಿರಲಿಲ್ಲ. ಆದರೆ ಈಗ ಸಿಸಿಟಿವಿ ಕ್ಯಾಮೆರಾ, ಮೊಬೈಲ್ ಕ್ಯಾಮೆರಾಗಳು ಇರುವುದರಿಂದ ಸುಲಭವಾಗಿ ಇಂಥ ಪ್ರಕ್ರಿಯೆಗಳು ದಾಖಲಾಗುವುದರಿಂದ ವಿವರಿಸುವುದೂ ಮತ್ತು ಅಧ್ಯಯನವೂ ಸುಲಭವಾಗಿದೆ' ಎಂದು ಡೆರ್‌ ಹೇಳಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

                    ಭೂಕಂಪನ ಬೆಳಕಿನ ಹಲವು ವಿಧಗಳು

             ಕೆಲವೊಮ್ಮೆ ಇವು ಮಿಂಚಿನಂತೆಯೇ ಕಂಡು ಬರುತ್ತವೆ. ಇನ್ನೂ ಕೆಲವೊಮ್ಮೆ ಅದೇ ಮಾದರಿಯ ಮಿಂಚಿನ ಬೆಳಕು ಬೇರೆ ಬೇರೆ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ಆಗಸದಲ್ಲಿ ವೃತ್ತಾಕಾರದ ಬೆಳಕಿನಂತೆ ಕಾಣಿಸಿಕೊಳ್ಳುತ್ತದೆ. ಮತ್ತೂ ಕೆಲವೊಮ್ಮೆ ಸಣ್ಣ ಜ್ವಾಲೆಗಳು ಮಿನುಗಿದಂತೆ, ನೆಲದಿಂದಲೇ ದೊಡ್ಡ ಜ್ವಾಲೆ ಆಗಸದೆತ್ತರಕ್ಕೆ ಹಬ್ಬಿದಂತೆ ಕಾಣಿಸಿಕೊಳ್ಳುತ್ತದೆ.

               2008ರಲ್ಲಿ ಚೀನಾದ ಸಿಚಾನ್‌ನಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಆಗಸದಲ್ಲಿ ಕಂಡುಬಂದ ಇಂಥ ಬೆಳಕನ್ನು ಸೆರೆ ಹಿಡಿಯಲಾಗಿದೆ. ಅಲ್ಲಿ ಆ ಬೆಳಕು ಮೋಡದಂತೆ ಚಲಿಸುವ ಅನುಭವವಾಗಿದೆ.

                 ಈ ಭೂಕಂಪನದ ಬೆಳಕಿನ ಕುರಿತಾಗಿಯೇ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ 65 ಭೂಕಂಪ ಪರಿಣಿತರು ಅಧ್ಯಯನ ನಡೆಸಿದ್ದಾರೆ. 2014ರಲ್ಲಿ ಈ ಕುರಿತ ವರದಿಯೊಂದನ್ನು ಅವರು ಸಿಸ್ಮಾಲಜಿ ಸಂಶೋಧನಾ ಪತ್ರಗಳು ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

             ಶೇ 80ರಷ್ಟು ಇಂಥ ಭೂಕಂಪನದ ಬೆಳಕು 5ಕ್ಕಿಂತ ಹೆಚ್ಚು ಕಂಪನದ ತೀವ್ರತೆ ಇರುವ ಸಂದರ್ಭದಲ್ಲಿ ಮಾತ್ರ ಕಂಡುಬರುತ್ತದೆ. ಭೂಕಂಪ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಇಂಥ ಬಣ್ಣ ಬಣ್ಣದ ಬೆಳಕು ಆಗಸದಲ್ಲಿ ಮೂಡುತ್ತವೆ. ಇದು ಸುಮಾರು 600 ಕಿ.ಮೀ. ದೂರದವರೆಗೂ ಕಾಣಿಸುತ್ತದೆ.

                 ಭೂಗರ್ಭದ ಟೆಕ್ಟೊನಿಕ್ ಪದರಗಳು ಸಂಧಿಸುವ ಪ್ರದೇಶಗಳ ಉದ್ದಕ್ಕೂ ಅಥವಾ ಆಸುಪಾಸಿನಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚು. ಆದರೂ 2014ರ ಈ ಅಧ್ಯಯನದ ಪ್ರಕಾರ ಟೆಕ್ಟೋನಿಕ್ ಪದರಗಳ ನಡುವೆ ಇಂಥ ಪ್ರಕಾಶಮಾನವಾದ ಬೆಳಕು ಮೂಡುವ ವಿದ್ಯಮಾನ ಸಂಭವಿಸುತ್ತವೆ. ಇದು ಆಗಸದಲ್ಲಿ ಪ್ರತಿಫಲಿಸುತ್ತವೆ ಎಂದು ಹೇಳಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries