HEALTH TIPS

ಗೋಶಾಲೆಯನ್ನೇ ವಸ್ತುಸಂಗ್ರಹಾಲಯವನ್ನಾಗಿ ಮಾಡಿದ ಕಲಾವಿದ

                 ಸಿಂಧುದುರ್ಗ, : ಮಹಾರಾಷ್ಟ್ರದ ಕೊಂಕಣ ಪ್ರದೇಶದ ಠಾಕರ್‌ ಆದಿವಾಸಿ ಜನಾಂಗದ ಕಲೆಯಾದ 'ಚಿತ್ರಕಥಿ'ಯನ್ನು ಉಳಿಸುವ ನಿಟ್ಟಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಪರಶುರಾಮ್‌ ಗಂಗವಾಣೆ ಎಂಬುವವರು ತಮ್ಮ ಕೊಟ್ಟಿಗೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಿದ್ದಾರೆ.

                 ರಾಜ್ಯದ ಸಿಂಧುದುರ್ಗದ ಕುಡಲ್‌ ಗ್ರಾಮದಲ್ಲಿ ಈ ಸಂಗ್ರಹಾಲಯ ಇದೆ. ಚಿತ್ರದ ಮೂಲಕ ಕಥೆ ಹೇಳುವ ಮತ್ತು ಆ ಕಥೆಗೆ ರಾಗ ಸಂಯೋಜಿಸಿ ಹಾಡುವ ಈ ಕಲೆಯು ಸುಮಾರು 500 ವರ್ಷಗಳಷ್ಟು ಹಳೆಯದಾಗಿದೆ. ಈ ಸಂಗ್ರಹಾಲಯವು ಹಲವಾರು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದು ಪರಶುರಾಮ್‌ ಅವರು ಹೇಳಿದ್ದಾರೆ.

                  'ಈ ಯೋಜನೆಗೆ ಖರ್ಚು ಮಾಡಲು ನನ್ನ ಬಳಿ ಸಾಕಷ್ಟು ಹಣ ಇರಲಿಲ್ಲ. ಆದರೆ ಈ ಕಲೆಯನ್ನು ಸಂರಕ್ಷಿಸಲು ನಾನು ಬದ್ಧನಾಗಿದ್ದೆ. ಹಾಗಾಗಿ ನನ್ನ ಮನೆ ಪಕ್ಕದಲ್ಲೇ ಇದ್ದ ಕೊಟ್ಟಿಗೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಿದೆ' ಎಂದು ಪರಶುರಾಮ್‌ ಅವರು ಸುದ್ದಿಸಂಸ್ಥೆಗೆ ಹೇಳಿದ್ದಾರೆ.‌

                   ಮರಾಠಿಯ ಖ್ಯಾತ ರಂಗಕರ್ಮಿ ಪ್ರಭಾಕರ್‌ ಪಣಶೀಕರ್‌ ಅವರು 2006ರಲ್ಲಿ ಈ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ್ದರು.

                'ಈ ವಸ್ತುಸಂಗ್ರಹಾಲಯದಲ್ಲಿ ಚಿತ್ರಕಥಿ ಕಲೆಗೆ ಸಂಬಂಧಿಸಿದ 300 ವರ್ಷಕ್ಕೂ ಹಳೆಯದಾದ ಕಲಾಕೃತಿಗಳಿವೆ. ಸುಮಾರು 1,500 ಕಲಾಕೃತಿಗಳು ನನ್ನ ಸಂಗ್ರಹದಲ್ಲಿವೆ' ಎಂದು ಪರಶುರಾಮ್‌ ಹೇಳಿದ್ದಾರೆ.

                 ಮರಾಠ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜ ಅವರು ಠಾಕರ್‌ ಬುಡಕಟ್ಟು ಸಮುದಾಯಕ್ಕೆ ಆಶ್ರಯ ನೀಡಿ ಈ ಕಲೆಯನ್ನು ಪ್ರೋತ್ಸಾಹಿಸಿದ್ದರು. ಬಳಿಕ ಈ ಕಲೆಗೆ ಪ್ರೋತ್ಸಾಹ ಸಿಗಲಿಲ್ಲ ಎಂದು ಹೇಳಿದ್ದಾರೆ.

                  ತಮ್ಮ 12ನೇ ವಯಸ್ಸಿನಿಂದಲೇ 'ಚಿತ್ರಕಥಿ' ಕಲೆಯಲ್ಲಿ ತೊಡಗಿರುವ ಪರಶುರಾಮ್‌ ಅವರು, ಸಾಮಾಜಿಕ ಜಾಗೃತಿ ಮೂಡಿಸಲು ಈ ಕಲೆಯನ್ನು ಬಳಸುವ ಮೂಲಕ ಅದಕ್ಕೆ ಪುನಶ್ಚೇತನ ನೀಡಲು ಶ್ರಮಿಸಿದ್ದಾರೆ. ಅವರ ಮಕ್ಕಳಾದ ಚೇತನ್‌ ಮತ್ತು ಏಕನಾಥ್‌ ಅವರು ಈ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries