HEALTH TIPS

ದಾಖಲೆ ಸೃಷ್ಟಿಸಿದ ಭಾರತದ ಷೇರುಗಳು - $4 ಟ್ರಿಲಿಯನ್​ಗೆ ಏರಿಕೆ - ಅಮೆರಿಕಾ, ಚೀನಾ, ಜಪಾನ್‌ ಒಳಗೊಂಡ ಎಲೈಟ್ ಕ್ಲಬ್‌ಗೆ ಸೇರ್ಪಡೆ

              ಮುಂಬೈ: ಇದೇ ಮೊದಲ ಬಾರಿಗೆ ಭಾರತವು ಅದರ ಮಾರುಕಟ್ಟೆ ಬಂಡವಾಳೀಕರಣ (ಎಂಸಿಎಪಿ) ಬುಧವಾರ $4 ಟ್ರಿಲಿಯನ್ ಗೆ ತಲುಪಿದ್ದು, ಅಗ್ರಸ್ಥಾನದಲ್ಲಿರುವ ಅಮೆರಿಕಾ, ಚೀನಾ ಮತ್ತು ಜಪಾನ್‌ನಂತಹ ದೇಶಗಳನ್ನು ಒಳಗೊಂಡಿರುವ ದೇಶಗಳ ವಿಶೇಷ ಎಲೈಟ್ ಕ್ಲಬ್‌ಗೆ ಸೇರಿದೆ.

             ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ರಾಷ್ಟ್ರದ ಎಕ್ಸ್‌ಚೇಂಜ್‌ಗಳಲ್ಲಿ ಪಟ್ಟಿ ಮಾಡಲಾದ ಸೆಕ್ಯುರಿಟಿಗಳ ಮಾರುಕಟ್ಟೆ ಬಂಡವಾಳೀಕರಣವು ಮಾರ್ಚ್ 2020 ರ ಕರೋನಾ ಬಳಿಕ ಮೂರು ಪಟ್ಟು ಹೆಚ್ಚಾಗಿದೆ, ಸೋಮವಾರದ ವೇಳೆಗೆ $ 4 ಟ್ರಿಲಿಯನ್ ಗೆ ಜಿಗಿದಿದೆ.

             ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ರೂ 2.24 ಟ್ರಿಲಿಯನ್ ಅಥವಾ ಶೇಕಡಾ 0.7 ರಿಂದ ರೂ 333.3 ಟ್ರಿಲಿಯನ್‌ಗೆ (ಅಥವಾ 83.31 ರ ಪರಿವರ್ತನೆ ದರದಲ್ಲಿ $ 4 ಟ್ರಿಲಿಯನ್) ಹೆಚ್ಚಾಗಿದೆ. ಸೆನ್ಸೆಕ್ಸ್ 727.71 ಪಾಯಿಂಟ್‌ಗಳು ಶೇ.1.10 ಜಿಗಿದು 66,901.91 ಕ್ಕೆ ಸ್ಥಿರವಾಯಿತು. ಎನ್​ಎಸ್​ಇ ನಿಫ್ಟಿ 50 ಸೂಚ್ಯಾಂಕವು ಎರಡು ತಿಂಗಳ ನಂತರ 20,000 ಅಂಕ ಮರುಪಡೆಯಲು 206.90 ಪಾಯಿಂಟ್ ಅಥವಾ ಶೇ.1.04ಏರಿಕೆ ಕಂಡು 20,096.60 ಅಂಕಕ್ಕೆ ಕೊನೆಗೊಂಡಿತು.

               ಮಾರುಕಟ್ಟೆ ಬಂಡವಾಳದ ವಿಷಯಕ್ಕೆ ಬರುವುದಾದರೆ 2023 ರಲ್ಲಿ ಅಗ್ರ 10 ದೇಶಗಳ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಂತರ ಭಾರತವು ಡಾಲರ್ ಲೆಕ್ಕದಲ್ಲಿ ಎರಡನೇ ಅತಿ ವೇಗದ ಬೆಳವಣಿಗೆಯನ್ನು ದಾಖಲಿಸಿದೆ. ಭಾರತೀಯ ಮಾರುಕಟ್ಟೆಗಳ ದೃಢವಾದ ಗಳಿಕೆಗಳು, ಆರ್ಥಿಕ ಸ್ಥಿರತೆ, ದೇಶೀಯ ಹರಿವು ಎ.ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಜಾಗದಲ್ಲಿ ತೀಕ್ಷ್ಣವಾದ ಏರಿಕೆ ಕಂಡಿದೆ.

               ವಿಶ್ವದ ಟಾಪ್ 100 ದೇಶಗಳ ಸ್ಟಾಕ್‌ಗಳು ಈ ವರ್ಷ ಭಾರತದ ಮಾರುಕಟ್ಟೆಗೆ ಗಮನಾರ್ಹ ಕೊಡುಗೆ ನೀಡಿವೆ. ಈ ವರ್ಷ ಭಾರತದ ಒಟ್ಟಾರೆ ಎಮ್‌ಕ್ಯಾಪ್ ಶೇ.18 ರಷ್ಟು ಬೆಳೆದಿದ್ದರೆ, ಅಗ್ರ 100 ರ ಹೊರಗಿನ ಸಂಸ್ಥೆಗಳು ತಮ್ಮ ಮಾರುಕಟ್ಟೆ ಮೌಲ್ಯವನ್ನು ಸುಮಾರು 50 ಪ್ರತಿಶತದಷ್ಟು ಹೆಚ್ಚಿಸಿವೆ. ಇದರ ಪರಿಣಾಮವಾಗಿ, ಭಾರತದ ಒಟ್ಟು ಮಾರುಕಟ್ಟೆ ಕ್ಯಾಪ್‌ನಲ್ಲಿ ಅದರ ಪಾಲು ಹಿಂದಿನ ಶೇಕಡಾ 35 ರಿಂದ ಶೇಕಡಾ 40 ಕ್ಕಿಂತ ಹೆಚ್ಚಾಗಿದೆ
            ಭಾರತದ ಮಾರುಕಟ್ಟೆ ಬೆಳವಣಿಗೆಗೆ ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ರೂ. 4.3 ಟ್ರಿಲಿಯನ್‌ನ ಎಂಕಾಪ್), ಜೊಮಾಟೊ (ರೂ. 1 ಟ್ರಿಲಿಯನ್), ಪೇಟಿಎಂ (ರೂ. 0.56 ಟ್ರಿಲಿಯನ್), ಮತ್ತು ನೈಕಾ (ರೂ. 0.5 ಟ್ರಿಲಿಯನ್) ಕೊಡುಗೆ ನೀಡಿವೆ.

               ಕರೋನಾ ಬಳಿಕ ಮೇ 2021 ರಿಂದ ಶೇಕಡಾವಾರು ಪ್ರಮಾಣದಲ್ಲಿ ವೇಗವಾಗಿ ಬೆಳವಣಿಗೆ ಕಂಡ ವಲಯಗಳೆಂದರೆ (ಭಾರತದ ಎಂಕಾಪ್ ಮೊದಲು ಮೇ 24, 2021 ರಂದು $ 3 ಟ್ರಿಲಿಯನ್ ಮುಟ್ಟಿತ್ತು) ಬಂಡವಾಳ ಸರಕುಗಳು (ಸೂಚ್ಯಂಕ 2.2 ಪಟ್ಟು ಹೆಚ್ಚಾಗಿದೆ) ಮತ್ತು ರಿಯಾಲ್ಟಿ (2.1 ಪಟ್ಟು). ಏತನ್ಮಧ್ಯೆ, ಬಿಎಸ್‌ಇಯ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು), ಆಟೋ, ಇನ್‌ಫ್ರಾ ಮತ್ತು ಪವರ್ ಸೂಚ್ಯಂಕಗಳು ತಲಾ 70 ಪ್ರತಿಶತದಷ್ಟು ಗಳಿಸಿವೆ.

              ಜಾಗತಿಕ ಹೂಡಿಕೆದಾರರು ಮತ್ತು ಕಂಪನಿಗಳಿಗೆ ಸಮಾನವಾಗಿ ಚೀನಾಕ್ಕೆ ಪರ್ಯಾಯವಾಗಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಭಾರತದ ಷೇರು ಮಾರುಕಟ್ಟೆಯ ಸಾಧನೆಯಾಗಿದೆ. ಸಾಗರೋತ್ತರ ನಿಧಿಗಳು ಈ ವರ್ಷ ಸ್ಥಳೀಯ ಷೇರುಗಳಲ್ಲಿ $15 ಶತಕೋಟಿಯನ್ನು ಸಂಗ್ರಹಿಸಿವೆ,

                   ಪಂಚರಾಜ್ಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಬಿಜೆಪಿ ದಿಗ್ವಿಜಯ ಸಾಧಿಸಿದ ನಂತರ ಭಾರತದ ಬೆಂಚ್‌ಮಾರ್ಕ್ ಎನ್​ಎಸ್​ಇ ನಿಫ್ಟಿ 50 ಸೂಚ್ಯಂಕವು ಸೋಮವಾರ ಶೇ.2.1 ರಷ್ಟು ಜಿಗಿಯಿತು. ಮುಂದಿನ ವರ್ಷ ನಡೆಯುವ ರಾಷ್ಟ್ರವ್ಯಾಪಿ ಚುನಾವಣೆಗೆ ಮುನ್ನ ಬಿಜೆಪಿ ಗೆಲುವು ಹೂಡಿಕೆದಾರರಿಗೆ ರಾಜಕೀಯ ಅಪಾಯದ ಅಂಶವನ್ನು ದೂರಮಾಡಿದೆ. ಹೀಗಾಗಿ ಹೂಡಿಕೆಯು ಉತ್ತೇಜನಕ್ಕೆ ಕಾರಣವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries