HEALTH TIPS

'ಗೋವಿಂದ ಪೈಯವರ ಸಾಧನೆ ಅನನ್ಯ,ಅನುಕರಣೀಯ'-ಮಹಮ್ಮದಾಲಿ ಕೆ.

               ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ  ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಿಕ, ಸಾಂಸ್ಕøತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 141ನೇ ಜನ್ಮದಿನಾಚರಣೆ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ನಡೆಯಿತು.

              ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹಮ್ಮದ್  ಆಲಿ .ಕೆ ಸಮಾರಂಭ ಉದ್ಘಾಟಿಸಿ ಮಾತನಾಡಿ, 25 ಭಾಷೆಗಳಲ್ಲಿ  ಪಾಂಡಿತ್ಯ ಹೊಮದಿದ್ದ  ಗೋವಿಂದ ಪೈ ಅವರ ಸಾಧನೆ,ಸಂಶೋಧನಾ ಪ್ರವೃತ್ತಿ, ಸೃಜನಶೀಲತೆ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.

             ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ.ಎನ್ ಮೂಡಿತ್ತಾಯ, ಸಾಹಿತಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ಕಡ್ಕ, ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ.ಪಿ, ಆಗ್ನೇಯ ಸಾಯಿ, ದಿನೇಶ ಕೆ.ಎನ್ ಉಪಸ್ಥಿತರಿದ್ದರು. ಈ ಸಂದರ್ಭ ಗೋವಿಂದ ಪೈ ಅವರ ಬದುಕು -ಬರಹಗಳ ಕುರಿತು ವಿಚಾರಗೋಷ್ಠಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸಮನ್ವಯಕಾರರಾಗಿದ್ದರು .ವಿದ್ಯಾಶ್ರೀ, ರಚನಾ, ದೀಕ್ಷಿತ.ಕೆ,ಸರ್ವಾಣಿ ಬಿ.ಕೆ,ಆದಿಶ್ರೀ.ಎಸ್.ಎನ್, ವಿವೇಕ್.ಎ  ಅವರು  ಗೋವಿಂದ ಪೈ ಅವರ ಬದುಕು,ಕವನಗಳು,ನಾಟಕ,ತಾಯಿ ಮತ್ತು ನೋ ನಾಟಕಗಳು, ಸಂಶೋಧನೆಗಳು ಮತ್ತು ಖಂಡಕಾವ್ಯಗಳ ಕುರಿತು ಪ್ರಬಂಧ ಮಂಡಿಸಿದರು. ನಂದಿನಿ ಪ್ರಾರ್ಥನೆ ಹಾಡಿದರು. ಉಪನ್ಯಾಸಕಿ ಜಯಂತಿ.ಕೆ ಸ್ವಾಗತಿಸಿದರು.  ಉಪನ್ಯಾಸಕ ಡಾ.ಸುಜೇಶ್ ನಿರೂಪಿಸಿದರು. ಕ.ಸಾ.ಪ ಗೌರವಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.   




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries