HEALTH TIPS

ಖರೀದಿಯಾಗದೇ ಉಳಿದಿದ್ದ ಒಂದೇ ಒಂದು ಲಾಟರಿಯಿಂದ ಬಡವನ ಬಾಳಲ್ಲಿ ನಡೆಯಿತು ಪವಾಡ! ಇಷ್ಟೊಂದು ಹಣನಾ?

           ತಿರುವನಂತಪುರಂ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ.

               ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

                ಕೇರಳದ ಸಮ್ಮರ್​ ಬಂಪರ್​ ಡ್ರಾ ಲಕ್ಕಿ ಬಹುಮಾನ ಕೇರಳದ ಆಟೋ ಚಾಲಕನ ಪಾಲಾಗಿದೆ. ಕಣ್ಣೂರಿನ ಅಲಕೋಡ್​ ಮೂಲದ 46 ವರ್ಷದ ಕೊಡಿಯನ್​ ನಾಸಿರ್​ ಅವರು ಬರೋಬ್ಬರಿ 10 ಕೋಟಿ ರೂ. ಲಾಟರಿ ಬಹುಮಾನ ಗೆದ್ದಿದ್ದಾರೆ. ಮಂಗಳವಾರ ಸಂಜೆ ಲಾಟರಿ ಖರೀದಿ ಮಾಡಿದ ನಾಸಿರ್​ ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿ ಆಗಿದ್ದಾರೆ. ಕಾರ್ತಿಕಪುರಂನ ಶ್ರೀ ರಾಜರಾಜೇಶ್ವರ ಏಜೆನ್ಸಿಯ ರಾಜು ಹೆಸರಿನ ಏಜೆಂಟ್​ ಮೂಲಕ ನಾಸಿರ್​ ಲಾಟರಿ ಖರೀದಿಸಿದ್ದರು.

             ಕಾರ್ತಿಕಪುರಂನ ಲಾಟರಿ ಸ್ಟಾಲ್‌ಗೆ ಮಂಗಳವಾರ ಬೆಳಗ್ಗೆ ನಾಸಿರ್​ ಭೇಟಿ ನೀಡಿ, ಬಂಪರ್​ ಲಾಟರಿ ಖರೀದಿ ಮಾಡುವ ಬಯಕೆ ವ್ಯಕ್ತಪಡಿಸಿದ್ದರು ಮತ್ತು ಟಿಕೆಟ್​ ಉಳಿದರೆ ರಾತ್ರಿ ಬಂದು ಖರೀದಿ ಮಾಡುತ್ತೇನೆ ಎಂದಿದ್ದರು. ಅದೇ ದಿನ ರಾತ್ರಿ 7 ಗಂಟೆಗೆ ಲಾಟರಿ ಸ್ಟಾಲ್​ಗೆ ಭೇಟಿ ನೀಡಿದ ನಾಸಿರ್, ಖರೀದಿಯಾಗದೇ ಕೊನೆಯಲ್ಲಿ ಉಳಿದ್ದಿದ್ದ ಒಂದೇ ಒಂದು ಲಾಟರಿ ಟಿಕೆಟ್​ಗೆ 250 ರೂ. ಕೊಟ್ಟು ಖರೀದಿ ಮಾಡಿ, ಮನೆಗೆ ವಾಪಾಸ್ಸಾದರು. 308797 ಸಂಖ್ಯೆಯ ಲಾಟರಿ ಟಿಕೆಟ್​ಗೆ ಬೆಳಗಾಗುವಷ್ಟರಲ್ಲಿ ಪ್ರಥಮ ಬಹುಮಾನ ಬಂದಿದೆ. ಬಹುಮಾನದ ಮೊತ್ತ ಬರೋಬ್ಬರಿ 10 ಕೋಟಿ ರೂಪಾಯಿ. ಇದನ್ನು ಕೇಳಿ ಒಂದು ಕ್ಷಣ ನಾಸಿರ್​ಗೆ ನಂಬಲಾಗಲಿಲ್ಲ. ಗೆಲುವು ಖಚಿತ ಎಂದು ಗೊತ್ತಾದ ಬಳಿಕ ನಾಸಿರ್​ ಕುಟುಂಬ ಸಂಭ್ರಮಿಸಿದೆ.

              ನಾಸಿರ್ ಅವರದ್ದು ಪುಟ್ಟ ಕುಟುಂಬ. ಮಕ್ಕಳಾದ ನಿಸಾರ್ ಮತ್ತು ನಾಸಿಲಾ ಹಾಗೂ ನಾಸಿರ್ ಅವರ ತಾಯಿ ಶೀಟ್ ಹೊದಿಸಿದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದೀಗ ಅವರೇ ಬದುಕೇ ಬದಲಾಗಿದೆ. 10 ಕೋಟಿ ರೂ. ಬಂಪರ್ ಲಾಟರಿ ಬಹುಮಾನ ಹಣದಲ್ಲಿ 2,98,12,500 ರೂ. ತೆರಿಗೆ, 1,10,30,625 ಹೆಚ್ಚುವರಿ ಶುಲ್ಕ, 16,33,725 ಆರೋಗ್ಯ ಮತ್ತು ಶಿಕ್ಷಣ ಸೆಸ್ ಕಡಿತ ಮಾಡಲಾಗುತ್ತದೆ. ಉಳಿದ 5,75,23,150 ರೂ. ನಾಸಿರ್​ಗೆ ದೊರೆಯುತ್ತದೆ.

ಎಲ್ಲವು ದೇವರ ಆಟ
               ಲಾಟರಿ ಗೆದ್ದ ಖುಷಿಯಲ್ಲಿ ಮಾತನಾಡಿರುವ ನಾಸಿರ್​, ಒಂದು ಟಿಕೆಟ್ ಮಾತ್ರ ಕೊನೆಯಲ್ಲಿ ಉಳಿದಿತ್ತು. ದೇವರ ದಯೆಯಿಂದ ಬಹುಮಾನ ಬಂದಿದೆ. ಈ ಹಣದಲ್ಲಿ ಒಳ್ಳೆಯ ಮನೆ ಮತ್ತು ಜಮೀನು ಖರೀದಿಸುತ್ತೇಣೆ. ಮಕ್ಕಳಿಬ್ಬರನ್ನು ಚೆನ್ನಾಗಿ ಓದಿಸಲು ಒಂದಿಷ್ಟು ಹಣ ಮೀಸಲಿಡುತ್ತೇನೆ. ಒಂದಿಷ್ಟು ಹಣದಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತೇನೆ. ಸೋಲು-ಗೆಲುವು ಎಲ್ಲ ದೇವರ ಆಟ ಎಂದು ನಾಸಿರ್​ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries