ಕಾಸರಗೋಡು: ಕೇರಳ ಸಂಗೀತ ನಾಟಕ ಅಕಾಡೆಮಿ ಮತ್ತು ಕಾಸರಗೋಡು ಥಿಯೇಟ್ರಿಕ್ಸ್ ಸೊಸೈಟಿ ಜಂಟಿಯಾಗಿ ಪಿ.ಅಪ್ಪುಕುಟ್ಟನ್ ಮಾಸ್ಟರ್ ಸ್ಮೃತಿ ಎಂಬ ಕನ್ನಡ-ಮಲಯಾಳಂ ನಾಟಕೋತ್ಸವವನ್ನು ಆಯೋಜಿಸುತ್ತಿದೆ.
ಮೇ.23 ರಂದು ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ಸಂಜೆ 5.30ರಿಂದ ನಡೆಯುವ ಕಾರ್ಯಕ್ರಮವನ್ನು ಕೇರಳ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಪದ್ಮಶ್ರೀ ಮಟ್ಟನೂರು ಶಂಕರನ್‍ಕುಟ್ಟಿ ಉದ್ಘಾಟಿಸಲಿದ್ದಾರೆ. ಕೇರಳ ಸಂಗೀತ ನಾಟಕ ಅಕಾಡೆಮಿ ಸದಸ್ಯ ಇ.ಪಿ. ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು. ಕೇರಳ ಸಂಗೀತ ನಾಟಕ ಅಕಾಡೆಮಿ ಸದಸ್ಯ ರಾಜಮೋಹನ ನೀಲೇಶ್ವರ, ಸಂತೋಷ್ ಕೀಳಾಟ್ಟೂರ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು, ಕಾಸರಗೋಡು ಥಿಯಟ್ರಿಕ್ಸ್ ಸೊಸೈಟಿ ಉಪಾಧ್ಯಕ್ಷ ಜಿ.ಬಿ.ವತ್ಸನ್ ಶುಭಹಾರೈಸುವರು. ಥಿಯಟ್ರಿಕ್ಸ್ ಸೊಸೈಟಿ ಜಿಲ್ಲಾ ಕಾರ್ಯದರ್ಶಿ ಟಿ.ವಿ.ಶಾಫಿ, ಕೇರಳ ಸಂಗೀತ ನಾಟಕ ಅಕಾಡೆಮಿ ಜಿಲ್ಲಾ ಕೇಂದ್ರ ಕಲಾ ಸಮಿತಿ ಕಾರ್ಯದರ್ಶಿ ಪಿ.ವಿ.ರಾಜನ್ ಉಪಸ್ಥಿತರಿರುವರು.
ಜಯಂತ ಕಾಯ್ಕಿಣಿ ಭಾಷಾಂತರಿಸಿರುವ, ಹುಲುಗಪ್ಪ ಕಟ್ಟೀಮನಿ ವಿನ್ಯಾಸ ನಿರ್ದೇಶನದಲ್ಲಿ ಚೀನೀ ಶ್ರೀನಿವಾಸ್ ಸಂಗೀತ ನೀಡುವ ರಾಹುಲ್, ದಿವ್ಯಶ್ರೀ, ಬಾಷ್ ರಾಘವೇಂದ್ರ ರಂಗ ನಿರ್ವಹಣೆಯ ಶಶಿಧರ, ಭಾರಿಘಾಟ್, ಗೋಪಿನಾಥ್ ಸಂಚಾಲಕತ್ವದಲ್ಲಿ ಕನ್ನಡ ಸಂಸ್ಕøತಿ ಇಲಾಖೆ ಮಂಗಳೂರಿನ ಸಹಕಾರದೊಂದಿಗೆ ಮೈಸೂರಿನ ಸಂಕಲ್ಪ ತಂಡದವರಿಂದ 'ಜತೆಗಿರುವನು ಚಂದಿರ' ನಾಟಕ ಪ್ರದರ್ಶನ ನಡೆಯಲಿದೆ.
ಮೇ.24 ರಂದು ಸಂಜೆ 6.30ಕ್ಕೆ ಸುರೇಶ್ ಬಾಬು ಶ್ರೀನಾಥ್ ಬರೆದು ಸಂತೋಷ್ ಕೀಳಟ್ಟೂರ್ ನಿರ್ದೇಶಿಸಿರುವ ಸೆಂಟ್ರಲ್ ಮಲೆಯಾಳಂ ನಾಟಕ ಪ್ರದರ್ಶನ ನಡೆಯಲಿದೆ.






