ತಿರುವನಂತಪುರಂ: ಕೇರಳ ಸರ್ಕಾರ ಉತ್ಪಾದಿಸುವ ಬ್ರಾಂಡಿಗೆ ಹೆಸರಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸೂಕ್ತ ಹೆಸರು ಮತ್ತು ಲೋಗೋವನ್ನು ಸೂಚಿಸುವವರಿಗೆ ಉದ್ಘಾಟನಾ ಸಮಾರಂಭದಲ್ಲಿ ತಲಾ ರೂ. 10,000 ಬಹುಮಾನ ನೀಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಪಾಲಕ್ಕಾಡ್‍ನ ಮೆನನ್‍ಪಾರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲಬಾರ್ ಡಿಸ್ಟಿಲರೀಸ್ ಲಿಮಿಟೆಡ್ ಉತ್ಪಾದಿಸಲು ಯೋಜಿಸಿರುವ ಭಾರತೀಯ ನಿರ್ಮಿತ ವಿದೇಶಿ ಮದ್ಯದ (ಬ್ರಾಂಡಿ) ಲೋಗೋ ಮತ್ತು ಹೆಸರನ್ನು ಸೂಚಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಸೂಚಿಸಲಾದ ಹೆಸರು ಮತ್ತು ಲೋಗೋವನ್ನು ಜನವರಿ 7 ರೊಳಗೆ ಕಳಿಸಬೇಕು. ಸಲಹೆಗಳನ್ನು malabardistilleries@gmail.com ಇಮೇಲ್ ಐಡಿಗೆ ಕಳುಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


