ಕಾಸರಗೋಡು: ಮನೆಯವರಲ್ಲಿ ಸಿಟ್ಟುಗೊಂಡು ಹೊರಕ್ಕೆ ತೆರಳಿದ್ದ 16ರ ಹರೆಯದ ಬಾಲಕಿಗೆ ಮಾದಕಪದಾರ್ಥ ನೀಡಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ನೆಕ್ರಾಜೆ ನಿವಾಸಿಗಳಿಬ್ಬರನ್ನು ಕೋಯಿಕ್ಕೋಡಿನಿಂದ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ನೆಕ್ರಾಜೆ ಚರ್ಲಡ್ಕ ನಿವಾಸಿ ಮಹಮ್ಮದ್ ಶಮೀಮ್ ಹಾಗೂ ನೆಕ್ರಾಜೆಯ ಮಹಮ್ಮದ್ ರಯೀಸ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ತಾಮರಶ್ಯೇರಿ ನಿವಾಸಿಗಳಾದ ಮಹಮ್ಮದ್ ಸ್ವಾಲಿಹ್ ಹಾಗೂ ಶಬೀರ್ ಆಲಿ ಎಂಬವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಕೆಲವು ದಿವಸಗಳ ಹಿಂದೆ ಬಲಕಿ ಮನೆಯವರಲ್ಲಿ ಸಿಟ್ಟುಗೊಂಡ ಮನೆಬಿಟ್ಟು ಕೋಯಿಕ್ಕೋಡಿನ ಬೀಚ್ಗೆ ತೆರಳಿದ್ದಳು. ಅಲ್ಲಿ ಪರಿಚಯಗೊಂಡ ಯುವಕರು, ಈಕೆಗೆ ಮಾದಕ ವಸ್ತು ನೀಡಿ, ಸ್ನೇಹಿತನ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಕೇಸು ದಾಖಲಿಸಲಾಗಿತ್ತು.

