ಕಾಸರಗೋಡು : ಕೋಝಿಕ್ಕೋಡ್ ಸೇನಾ ನೇಮಕಾತಿ ಕಚೇರಿ ಆಯೋಜಿಸಿರುವ ಅಗ್ನಿವೀರ್ ವರ್ಗದ ನೇಮಕಾತಿ ರ್ಯಾಲಿ ಜನವರಿ 6 ರಿಂದ 12 ರವರೆಗೆ ವಿದ್ಯಾನಗರದ ಕಾಸರಗೋಡು ಮುನ್ಸಿಪಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ವಯನಾಡು, ಕೋಝಿಕ್ಕೋಡು, ಕಣ್ಣೂರು, - ಕಾಸರಗೋಡು ಮತ್ತು ಮಾಹೆ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳಿಂದ ಅಗ್ನಿವೀರ್ ಆನ್‍ಲೈನ್ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೇಮಕಾತಿ ರ್ಯಾಲಿ ಯನ್ನು ನಡೆಸಲಾಗುತ್ತಿದೆ.


