ಬದಿಯಡ್ಕ: ಅಮೃತ ಭಾರತಕ್ಕೆ ಆದರ್ಶ ಬಾಲ್ಯ ಎಂಬ ಸಂದೇಶದೊಂದಿಗೆ ಬಾಲಗೋಕುಲ ಕೇರಳ ಸುವರ್ಣ ಜಯಂತಿಯ ಭಾಗವಾಗಿ ಕನ್ಯಾಕುಮಾರಿಯಿಂದ ಕಾಸರಗೋಡಿನ ವರೆಗೆ ನಡೆಯುವ ಬಾಲಗೋಕುಲ ಕಲಾಯಾತ್ರೆ ಭಾನುವಾರ ಬದಿಯಡ್ಕ ಬಸ್ ನಿಲ್ದಾಣದ ಪರಿಸರದಲ್ಲಿ ಜರಗಿತು.
ಉತ್ತರ ಕೇರಳ ಬಾಲಗೋಕುಲ ಉಪಾಧ್ಯಕ್ಷ ಪ್ರಜಿತ್ ಮಾಸ್ತರ್ ಪ್ರಧಾನ ಭಾಷಣ ಮಾಡಿದರು. ಕೃಷ್ಣನ ಬಾಲಲೀಲೆಗಳು ನಮ್ಮ ಮಕ್ಕಳಲ್ಲಿ ಮೂಡಿಬರಬೇಕು. ಮಕ್ಕಳಲ್ಲಿ ಭಾರತೀಯ ಕಲೆಗಳು ಮೈಗೂಡಬೇಕು. ದೇಶ ಪ್ರೇಮದ ಚಿಂತನೆ ಮೂಡಿಬರುವುದರೊಂದಿಗೆ ನಾಡಿನ ಪ್ರಬುದ್ಧ ಪ್ರಜೆಗಳಾಗಿ ಮಕ್ಕಳು ಬೆಳೆಯಬೇಕು ಎಂದರು.
ತಾಲೂಕು ರಕ್ಷಾಧಿಕಾರಿ ಜಯರಾಮ ಚೆಟ್ಟಿಯಾರ್ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ದಿನೇಶ್ ಮಾಸ್ತರ್ ಕೆಡೆಂಜಿ, ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್, ಜಿಲ್ಲಾ ಪದಾಧಿಕಾರಿ ಜಯರಾಮ ಶೆಟ್ಟಿ, ರೆವನ್ಯೂ ಜಿಲ್ಲಾ ಕಾರ್ಯದರ್ಶಿ ವಿದ್ಯಾಧರನ್ ಉಪಸ್ಥಿತರಿದ್ದರು. ನಟರಾಜ ಕಲ್ಲಕಳಂಬಿ ಸ್ವಾಗತಿಸಿ, ಮೇಘ ಬದಿಯಡ್ಕ ವಂದಿಸಿದರು. ಭಾಸ್ಕರ ಎನ್ ನಿರೂಪಿಸಿದರು. ಬಾಲಗೋಕುಲದ ಮಕ್ಕಳು ಕಲಾಪ್ರದರ್ಶನವನ್ನು ನೀಡಿ ಗಮನಸೆಳೆದರು. ಸಂಜೆ ನೀರ್ಚಾಲು ಪರಿಸರದಲ್ಲಿ ಕಲಾಯಾತ್ರೆ ನಡೆಯಿತು.

.jpg)
